ಮತಗಟ್ಟಗಳಿಗೆ ಹೊರಟ ಚುನಾವಣಾ ಸಿಬ್ಬಂದಿ

ಕೊಟ್ಟೂರು26: ನಾಳೆ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಪದವಿಪೂರ್ವಕಾಲೇಜು ಆವರಣದ ಕೊಠಡಿಗಳಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣಾ ಪರಿಕರಗಳನ್ನು ಪರಿಶೀಲಿಸಿದ ನಂತರ ನಿಯೋಜಿಸಿರುವ ಮತಗಟ್ಟೆಗಳಿಗೆ ಇಂದು ತೆರಳಿದರು.
ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳ 195 ಸದಸ್ಯ ಸ್ಥಾನಗಳಲ್ಲಿ156 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಮತದಾನ ಕಾರ್ಯಕ್ಕೆ 437ಸಿಬ್ಬಂದಿ,ಪೊಲೀಸ್ ಹಾಗೂ ಆರೋಗ್ಯಇಲಾಖೆ ಸಿಬ್ಬಂದಿ ನಿಯೋಜನೆ ಗೊಂಡಿದ್ದಾರೆ.