ಮತಕ್ಷೇತ್ರದ ಜನರ ಜೀವನ ನನಗೆ ಮುಖ್ಯಃ ಶಾಸಕ ಬಸನಗೌಡ ಪಾಟೀಲ್ ಯತ್ನಾಳ

ವಿಜಯಪುರ, ಎ.30-ನನ್ನ ಮತಕ್ಷತ್ರದ ಜನರ ಜೀವನ ನನಗೆ ಮುಖ್ಯ, ಕರೋನಾದಿಂದ ತೀರ್ವತರ ಪರಿಣಾಮ ಆಗದಂತೆ ನೋಡಿಕೊಳ್ಳುವದು ನಾನು ಈ ಕ್ಷೇತ್ರದ ಶಾಸಕನಾಗಿ ನನ್ನ ಜವಾಬ್ದಾರಿ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರಾದ್ಯಂತ ಉಚಿತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮದಡಿ, ಉಚಿತ ಲಸಿಕೆ ಆಭಿಯಾನವನ್ನು ಹಮ್ಮಿಕೊಂಡಿದ್ದು ಅದರಂತೆ ಇಂದು ವಾರ್ಡ ನಂ-22 ರ ಜಲನಗರದ ಶಿವಶೆರಣೆ ನಿಂಬೆಕ್ಕ ಸಭಾ ಭವನ ಹಾಗೂ ವಾರ್ಡ ನಂ-35 ರ ನೇತಾಜಿ ಸುಭಾಸಚಂದ್ರ ಭೋಸ್ ರಸ್ತೆಯ ಐಯ್ಯಪ್ಪಸ್ವಾಮಿ ನಗರದ ಶಿವಾಲಯ ಗುಡಿ ಆವರಣದಲ್ಲಿ ಉಚಿತ ಕೋವಿಡ್ ಲಸಿಕೆ ಆಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ನನ್ನ ಮತಕ್ಷತ್ರದ ಜನರ ಜೀವನ ನನಗೆ ಮುಖ್ಯ, ಕರೋನಾದಿಂದ ತೀರ್ವತರ ಪರಿಣಾಮ ಆಗದಂತೆ ನೋಡಿಕೊಳ್ಳುವದು ನಾನು ಈ ಕ್ಷೇತ್ರದ ಶಾಸಕನಾಗಿ ನನ್ನ ಜವಾಬ್ದಾರಿ, ಅದಕ್ಕಾಗಿ ನಾನು ನಗರ ಮತಕ್ಷೇತ್ರದ ತುಂಬೆಲ್ಲ ಸತತವಾಗಿ ಲಸಿಕೆಯನ್ನು ಹಾಕಿಸಿ ಕ್ಷೇತ್ರದ ಜನರ ಜೀವ ಉಳಿಸಲು ನನ್ನ ಸತತ ಪ್ರಯತ್ನ ಮುಂದುವರೆಯುತ್ತದೆ ಒಂದು ಕಡೆ ಲಸಿಕೆ ಕಾರ್ಯಕ್ರಮ ಮಾಡುತ್ತಿದ್ದು ಇನ್ನೋಂದಡೆ ಕೋವಿಡ್ ರೋಗಿಗಳಿಗಾಗಿ ಬೆಡ್‍ಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ನಗರದಲ್ಲಿ ಕಳೆಡ 15 ದಿವಸಗಳಿಂದ ವಜ್ರ ಹನುಮಾನ ನಗರದಿಂದ ಜಿಲ್ಲಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳೊಂದಿಗೆ ಪ್ರಾರಂಭ ಮಾಡಿದೆವು, ನಾವು ಈ ಲಸಿಕೆ ಅಭಿಯಾನವನ್ನು ಪ್ರಾರಂಭ ಮಾಡಿದಾಗಿನಿಂದ ಇದುವರಗೆಗೂ ನಗರದಲ್ಲಿ ಶೇ 52% ರಷ್ಟು ಜನ ಲಸಿಕೆ ಪಡೆದುಕೊಂಡಂತಾಗಿದೆ, ಇದಕ್ಕೆ ನಮ್ಮ ಎಲ್ಲ ಆರೋಗ್ಯ ಅಧಿಕಾರಿಗಳು, ಹಾಗೂ ನಿರಂತರವಾಗಿ ಜನರನ್ನು ಲಸಿಕಾ ಕೇಂದ್ರಕ್ಕೆ ಕರೆ ತಂದು ಲಸಿಕೆ ಪಡೆಯುವಂತೆ ಮಾಡಿದ ನಮ್ಮ ಸಿದ್ದೇಶ್ವರ ಸಂಸ್ಥೆ ಮತ್ತು ಸಿದ್ಧಸಿರಿ ಸೌಹಾರ್ದ ಸಹಕಾರಿ ಸಿಬ್ಬಂದಿಗಳ ಕಾರ್ಯ ಶ್ಲಾಗನೀಯವಾಗಿದೆ ಎಂದರು.
ನಗರದ ಎಲ್ಲ ಸಾರ್ವಜನಿಕರು ಸಹ ತಮ್ಮ ತಮ್ಮ ಮನೆಗಳಲ್ಲಿರುವ 45 ವರ್ಷ ಮೇಲ್ಪಟ್ಟ ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ಈ ಮೂಲಕ ನಗರದ ಎಲ್ಲ ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.
ಲಸಿಕೆ ಪಡೆದ ಎಲ್ಲರೂ ಈ ರೋಗದಿಂದ ಪಾರಾಗಬಹುದಾಗಿದ್ದು, ಲಸಿಕೆ ಪಡೆದಾಗಲೂ ಸಹ ಕೆಲವೊಮ್ಮೆ ರೋಗ ಲಕ್ಷಣ ಕಾಣಬಹುದು ಆದರೆ ಪ್ರಾಣಕ್ಕೆ ಏನು ತೊಂದರೆಯಾಗುವುದಿಲ್ಲ, ತೀರ್ವ ಸ್ವರೂಪದ ಅಪಾಯಗಳಾಗುವದಿಲ್ಲ, ರೋಗದಿಂದ ಆರೋಗ್ಯದಲ್ಲಿ ತೀರ್ವ ತೊಂದರೆಯಾಗುವದನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಆದ್ದರಿಂದ ತಪ್ಪದೆ ಸಲಿಕೆ ಪಡೆಯಿರಿ ಎಂದರು.
ಪ್ರಸ್ತುತ ಸಂದರ್ಭದಲ್ಲಿ ಭಯಾನಕ ರೋಗದಿಂದ ಎಲ್ಲರು ಭಯಭೀತರಾಗಿದ್ದಾರೆ ಈ ಸಂದರ್ಭದಲ್ಲಿ ಲಸಿಕೆ ಬಗ್ಗೆ ಕೆಲವರು ವ್ಯವಸ್ಥಿತವಾಗಿ ಅಪ ಪ್ರಚಾರ ಮಾಡುತ್ತ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಯಾರೂ ಸಹ ಇಂತದ್ದೊಂದು ಪರಿಸ್ಥಿತಿಗೆ ಭಯ ಪಡದೆ, ಧೈರ್ಯದಿಂದ ಈ ಸವಾಲನ್ನು ಎಧುರಿಸಬೇಕಾಗಿದೆ ಆದ್ದರಿಂದ ಈ ಲಸಿಕೆಯು ಅತ್ಯಂತ ಸುರಕ್ಷಿತವಾಗಿದ್ದು, ಆರೋಗ್ಯ ಕವಚವಾಗಿ ಕೆಲಸ ಮಾಡುತ್ತಿದೆ ಆದ್ದರಿಂದ ಯಾರು ಸಹ ಅಪ ಪ್ರಚಾರಕ್ಕೆ ಕಿವಿಗೊಡದೆ ಎಲ್ಲರೂ ಸಹ ಲಸಿಕೆ ಪಡೆದು ತಮ್ಮೆಲ್ಲರ ಹಾಗೂ ಕುಟುಂಭದ ಆರೋಗ್ಯ ಕಾಪಾಡಿಕೊಳ್ಳಿ ಎಂದು ವಿನಂತಿಸಿದರು.
ಸಿದ್ಧೇಶ್ವರ ಸಂಸ್ಥೆ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಹಯೋಗದಲ್ಲಿ ಸೊಲ್ಲಾಪೂರ ರಸ್ತೆಯ ಜೈನ ಕಾಲೇಜ್‍ನಲ್ಲಿ 100 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗುವದು, ಶ್ರೀ ಸಿದ್ದೇಶ್ವರ ಸಂಸ್ಥೆಯ ಈಶ್ವರಗೌಡ ಪಾಟೀಲ ಯತ್ನಾಳ ಡಯಾಲಿಸೆಸ್ ಸೆಂಟರ್ ನಲ್ಲಿ ಕೋವಿಡ್ ರೋಗಿಗಳಿಗಾಗಿ 27 ಬೆಡ್, ಆಕ್ಷಿಜನ್ ಹಾಗೂ ವೆಂಟಿಲೇಟರ್ ಊಟ ಉಪಹಾರದ ವ್ಯವಸ್ಥೆ ಇರುವಂತಹ ಸುಸಜ್ಜಿತವಾದಂತಹ ವ್ಯವಸ್ಥೆ ಮಾಡಲಾಗುತ್ತಿದೆ, ಇನ್ನೆರಡು ದಿನದಲ್ಲಿ ಅದು ಸಹ ಪ್ರಾರಂಭವಾಗಲಿದೆ ಎಂದರು.
ಜಗತ್ತಿನಲ್ಲಿ ಇಸ್ರೇಲ್ 100% ಲಸಿಕೆ ಪಡೆದ ದೇಶವಾಗಿ, ಮಾಸ್ಕ ರಹಿತವಾದಂತಹ ಮೊದಲ ದೇಶವಾಗಿದ್ದು ಮಾಸ್ಕ ರಹಿತವಾದಂತಹ ವಾತಾವಾರಣ ಸೃಷ್ಟಿಯಾಗಿದೆ, ಕಾರಣ ಅಲ್ಲಿನ ಸಾರ್ವಜನಿಕರು ಜಾಗೃತರಾಗಿದ್ದಾರೆ ಇದೇ ಮಾದರಿಯಲ್ಲಿ, ರೋಗದಿಂದ ಪಾರಾಗಲು ಎಲ್ಲರು ಸಹ ಲಸಿಕೆ ಪಡೆದುಕೊಂಡು ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಹಕಾರ ಮತ್ತು ಸಾರ್ವಜನಿಕರ ಸಹಕಾರದಿಂದ ವಿಜಯಪುರ ನಗರವು ಸಹ 100% ರಷ್ಟು ಲಸಿಕೆ ಹಂಚಿಕೆಯಾಗಿ ಮಾಸ್ಕ ರಹಿತ ನಗರವಾಗಿ ನಿರ್ಮಾಣವಾಗಲಿ ಎಂಬ ಕನಸಿದೆ ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾನಂದ ಬಿರಾದಾರ, ತಾಲ್ಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಕವಿತಾ ದೊಡ್ಡಮನಿ, ಮುಖಂಡರಾದ ಚಂದ್ರು ಚೌಧರಿ, ಶ್ರೀನಿವಾಸ ಬೆಟಗೇರಿ, ಸಂತೋಷ ಪಾಟೀಲ, ಪಾಂಡುಸಾಹುಕಾರ ಡೊಡ್ಡಮನಿ, ಸಂತೋಷ ತಳಕೇರಿ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಸಿದ್ಧೇಶ್ವರ ಸಂಸ್ಥೆ, ಸಿದ್ಧಸಿರಿ ಸೌಹಾರ್ದ ಸಹಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.