ಮತಕ್ಷೇತ್ರದ ಅಭಿವೃದ್ದಿಗೆ ಬದ್ದನಾಗಿ ಕೆಲಸ ಮಾಡುವೆ:ರಾಜುಗೌಡ

ತಾಳಿಕೋಟೆ:ಮೇ.28: ಮತಕ್ಷೇತ್ರದ ಪ್ರತಿ ಗ್ರಾಮಗಳಿಗೆ ಅವಶ್ಯವಿರುವ ಕುಡಿಯುವ ನೀರು, ರಸ್ತೆ, ಒಳಗೊಂಡಂತೆ ಮೂಲಸೌಕರ್ಯಗಳಿಗೆ ಒತ್ತು ನೀಡುವದರೊಂದಿಗೆ ರೈತಪರವಾದಂತಹ ಅಭಿವೃದ್ದಿ ಕಾರ್ಯ ಕೆಲಸಗಳನ್ನು ಮಾಡಲಿದ್ದನೆಂದು ದೇವರ ಹಿಪ್ಪರಗಿ ಮತಕ್ಷೇತ್ರದ ನೂತನ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಅವರು ಹೇಳಿದರು.

ಶನಿವಾರರಂದು ಮತಕ್ಷೇತ್ರದ ಬೊಮ್ಮನಹಳ್ಳಿ ಗ್ರಾಮಸ್ಥರ ವತಿಯಿಂದ ಗೌರವ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಉತ್ತಮ ರಸ್ತೆಗಳ ಕೊರತೆ ಬಹಳಷ್ಟಿದೆ ಅದರ ಜೊತೆಗೆ ಕೇಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಸಾಕಷ್ಟು ಇರುವದನ್ನು ಕಂಡಿದ್ದೇನೆ ಮತ್ತು ಶೈಕ್ಷಣಿಕವಾಗಿ ಗ್ರಾಮಗಳು ಅಭಿವೃದ್ದಿ ಹೊಂದಬೇಕಾಗಿದೆ ಮುಖ್ಯವಾಗಿ ನೀರಾವರಿ ಯೋಜನೆಗಳನ್ನು ತರುವದರೊಂದಿಗೆ ಅವುಗಳನ್ನು ಸಂಪೂರ್ಣ ಮುಗಿಸಿ ರೈತರಿಗೆ ಶಕ್ತಿ ತುಂಬುವಂತಹ ಕೆಲಸಗಳನ್ನು ಮಾಡಬೇಕೆಂದು ಉತ್ಸುಕತೆ ಹೊಂದಿದ್ದೇನೆ ಈಗಾಗಲೇ ನಾನು ಕಳೆದ 10 ವರ್ಷಗಳಿಂದ ಕ್ಷೇತ್ರದ ಜನರ ನಾಡಿ ಮಿಡಿತ ಅರಿತುಕೊಂಡಿರುವದರಿಂದ ಅವರ ಆಸೆಗೆ ತಕ್ಕಂತೆ ಅವರ ವಿಸ್ವಾಸಕ್ಕೆ ತಕ್ಕಂತೆ ಕೆಲಸಗಳನ್ನು ಮಾಡಲಿದ್ದೇನೆ ನಾನು ಸಾಮಾನ್ಯ ರೈತ ಕುಟುಂಭದಲ್ಲಿ ಹುಟ್ಟಿ ಬೆಳೆದು ಬಂದವನಾಗಿದ್ದು ಯಾರೇ ಜನಸಾಮಾನ್ಯರು ನನ್ನನ್ನು ಮುಕ್ತವಾಗಿ ಬೆಟ್ಟಿ ಯಾಗಿ ತಮ್ಮ ಕೆಲಸ ಕಾರ್ಯಗಳನ್ನು ತೆಗೆದುಕೊಳ್ಳಬಹುದಾಗಿದೆ ಎಂದ ಅವರು ಜನ ಸಾಮಾನ್ಯರ ನಿತ್ಯ ಬೆಟ್ಟಿಗಾಗಿ ನಿಗಧಿತ ಸಮಯವನ್ನು ಮಿಸಲಿಡುವಂತಹ ಕೆಲಸ ಮಾಡಲಿದ್ದೇನೆಂದರು.

ಇದೇ ಸಮಯದಲ್ಲಿ ಬೊಮ್ಮನಹಳ್ಳಿ ಗ್ರಾಮದ ಭಗೀರಥ ಉಪ್ಪಾರ ಸಮಾಜದ ವತಿಯಿಂದ ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.