ಮತಕೇಂದ್ರದ ಮೇಲೆ ಬಿದ್ದ ಮರ, ತಪ್ಪಿದ ಭಾರೀ ಅನಾಹುತ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ 11 : – ವಿಧಾನಸಭಾ ಚುನಾವಣೆಗೆ ಬುಧವಾರ ನಡೆದ ಮತದಾನದಂದು ಬೀಸಿದ ಗಾಳಿ, ಮಳೆಗೆ ತಾಲೂಕಿನ ಚಿಕ್ಕಜೋಗಿಹಳ್ಳಿ ಸರಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿದ್ದ ಮತಗಟ್ಟೆಯೊಂದರ ಮೇಲೆ ಸಂಜೆ 4 ಗಂಟೆಗೆ ಮರದ ಟೊಂಗೆಗಳು ಮುರಿದು ಬಿದ್ದಿತ್ತು. ಆ ವೇಳೆ ಮತಕೇಂದ್ರದ ಬಳಿ ಮತದಾರರು ಇಲ್ಲದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ. ಈ ಆವರಣದಲ್ಲಿದ್ದ ಎರಡು ಮತಕೇಂದ್ರಗಳಲ್ಲಿ ಸಂಜೆ 6ಗಂಟೆಗೆ ಕರೆಂಟ್ ಸಂಪರ್ಕ ಕಡಿತವಾದ್ದರಿಂದ ಕತ್ತಲಲ್ಲೇ ಅಧಿಕಾರಿಗಳು ಕೊನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಳಿಸಿದ್ದು ಕಂಡುಬಂತು.