ಮತಎಣಿಕೆ ಸರಿಸಮ -ಲಾಟರಿ ಮೂಲಕ ಗೆದ್ದ ಜ್ಯೋತಿ.

ಕೂಡ್ಲಿಗಿ. ಡಿ. 30:- ಪಟ್ಟಣದಲ್ಲಿ ಜರುಗಿದ ಗ್ರಾಮಪಂಚಾಯಿತಿ ಮತ ಎಣಿಕೆ ಕಾರ್ಯದಲ್ಲಿ ಪೂಜಾರಹಳ್ಳಿಯ ಮತಗಟ್ಟೆ ಸಂಖ್ಯೆ 65ರಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಬಿದ್ದ ಮತಗಳ  ಎಣಿಕೆಯಲ್ಲಿ ಸರಿಸಮವಾಗಿದ್ದು ಮರು ಮತ ಎಣಿಕೆಯಲ್ಲೂ ಮತ್ತೆ ಸರಿಸಮ ವಾಗಿದ್ದರಿಂದ  ಕೊನೆಗೆ ಲಾಟರಿ ನಡೆಸಲಾದ ಪ್ರಸಂಗ ಜರುಗಿದ್ದು ಜ್ಯೋತಿ ವೆಂಕಟೇಶಗೆ ಗೆಲುವಿನ  ಅದೃಷ್ಟ ಲಕ್ಷ್ಮಿ ಒಲಿದಿದೆ. ಮೊದಲನೇ ಮತಎಣಿಕೆಯಲ್ಲಿ ಜ್ಯೋತಿ ವೆಂಕಟೇಶ್ ಮತ್ತು ಪ್ರತಿಸ್ಪರ್ದಿ ಈ ಹಿಂದೆ ಅಧ್ಯಕ್ಷರಾಗಿದ್ದ ಮಾಲಾಶ್ರೀ ರಾಮಸ್ವಾಮಿ ನಡುವೆ ನಡೆದ ಮತ ಎಣಿಕೆಯಲ್ಲಿ ಜ್ಯೋತಿ ವೆಂಕಟೇಶ್ ಗೆ 232ಮತಗಳು ಹಾಗೂ ಪೋಸ್ಟಲ್ ಮತ 2ಸೇರಿ 234 ಮತಗಳು ಮತ್ತು ಮಾಲಾಶ್ರೀ ರಾಮಸ್ವಾಮಿ ಗೆ ಯಾವುದೇ ಪೋಸ್ಟಲ್ ಮತವಿಲ್ಲದೆ 234 ಮತಗಳು ಬಂದಿದ್ದು ಸರಿಸಮವಾಗಿದ್ದು ನಂತರ ಎಣಿಕೆ ಸಮಯದಲ್ಲಿ ಏಜೆಂಟಾರ ಅಭಿಪ್ರಾಯದಂತೆ ಮರು ಎಣಿಕೆ ಮಾಡಲಾಗಿ ಇನ್ ವ್ಯಾಲಿಡ್ ಮತಗಳನ್ನ ಆಧಾರಿಸಿದಾಗ ಜ್ಯೋತಿ ವೆಂಕಟೇಶ್ ಗೆ 233 ಮತ್ತು ಮಾಲಾಶ್ರೀ ರಾಮಸ್ವಾಮಿಗೆ 233 ಮತಗಳು ಬಂದಿದ್ದರಿಂದ ಮತ್ತೊಮ್ಮೆ ಸರಿಸಮ ಆಗಿದ್ದರಿಂದ ಕೊನೆಗೆ ಚುನಾವಣೆಯ ನೋಡಲ್ ಅಧಿಕಾರಿ ಡಾ. ರಾಜಪ್ಪ ಮತ್ತು ತಹಸೀಲ್ದಾರ್ ಮಹಾಬಲೇಶ್ವರ್  ಮತಎಣಿಕೆ ಮೇಲ್ವಿಚಾರಕರು ಮತ್ತು ಆರ್ ಓ ಸೇರಿ ಇಬ್ಬರು ಅಭ್ಯರ್ಥಿಗಳ ಅಭಿಪ್ರಾಯ ಪಡೆದು ಲಾಟರಿ ನಡೆಸಲಾಗಿ ಗೆಲುವಿನ ಅದೃಷ್ಟ ಜ್ಯೋತಿ ವೆಂಕಟೇಶ್ ಗೆ ಒಲಿದಿದ್ದರಿಂದ ಇವರ ಗೆಲುವಿನ ಆಯ್ಕೆ ಘೋಷಿಸಿದರು.