
ದಾವಣಗೆರೆ.ಡಿ.೩೧; ನಿನ್ನೆ ನಡೆದ ಗ್ರಾಮ ಪಂಚಾಯತ್ ಚುನಾವಣೆ ಮತ ಎಣಿಕೆ ನಗರದಲ್ಲಿ ಅವ್ಯವಸ್ಥೆಯಿಂದ ಕೂಡಿತ್ತು, ಮಧ್ಯರಾತ್ರಿ 12 ಗಂಟೆಯಾದರೂ ಮತಎಣಿಕೆ ಮುಗಿಯದೆ ಅಭ್ಯರ್ಥಿಗಳು, ಕಾರ್ಯಕರ್ತರು ಹಾಗೂ ಸಿಬ್ಬಂದಿಗಳು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಕೆ.ಎಲ್ ಹರೀಶ್ ಬಸಾಪುರ ಹೇಳಿದ್ದಾರೆ.ನಗರದ ಮೋತಿ ವೀರಪ್ಪ ಕಾಲೇಜಿನಲ್ಲಿ ನಡೆದ ಮತಎಣಿಕೆಯಲ್ಲಿ ರೂಮ್ ಗಳು ಇದ್ದರೂ ಸಹ ಕೇವಲ 10 ರೂಮ್ ಗಳನ್ನು ಬಳಸಿದ್ದು ಹಾಗೂ ಸಿಬ್ಬಂದಿಯ ಕೊರತೆಯಿಂದಲೂ ಸಹ ಮತ ಎಣಿಕೆ ನಿಧಾನಗತಿಯಲ್ಲಿ ನಡೆಯಿತು, ಸಿಬ್ಬಂದಿಗಳಿಗೆ ಊಟ ತಿಂಡಿ ವ್ಯವಸ್ಥೆಯು ಸಹ ಜಿಲ್ಲಾಡಳಿತ ಮಾಡುವಲ್ಲಿ ವಿಫಲವಾಗಿತ್ತು.ಒಂದೇ ರೂಮ್ ಗಳಲ್ಲಿ ನಾಲ್ಕು, ಐದು ಪಂಚಾಯಿತಿಗಳ ಮತ ಎಣಿಕೆ ನಡೆಯುತ್ತಿದ್ದರಿಂದ ಅಭ್ಯರ್ಥಿಗಳು ಹಾಗೂ ಏಜೆಂಟರು ಅಧಿಕ ಸಂಖ್ಯೆಯಲ್ಲಿ ಸೇರಿ ಒಬ್ಬರ ಮೇಲೆ ಒಬ್ಬರು ಬೀಳುವ ಸನ್ನಿವೇಶ ನಡೆಯಿತು. ನಗರದಲ್ಲಿ ನಿನ್ನೆ ನಡೆದ ಮತ ಎಣಿಕೆ ಕಾರ್ಯ ಬಗ್ಗೆ ಜಿಲ್ಲಾ ಆಡಳಿತಕ್ಕೆ ಯಾರಾದರೂ ಪ್ರಶಂಸೆ ನೀಡಿದರೆ ಅದು ಕೇವಲ ಜಿಲ್ಲಾಧಿಕಾರಿಗಳಿಗೆ ಓಲೈಕೆ ವಿನಹ ಸತ್ಯವಾದ ವರದಿ ಅಲ್ಲ.ಬೇರೆ ಜಿಲ್ಲೆಗಳಲ್ಲಿ ಬೇಗ ಮತಎಣಿಕೆ ಮುಗಿದಿದ್ದರೂ ಸಹ ನಮ್ಮ ಜಿಲ್ಲೆ ಮಧ್ಯರಾತ್ರಿಯವರೆಗೆ ಕಾಯುವಂತಾಯಿತು.ಮುಂದಿನ ದಿನಗಳಲ್ಲಾದರೂ ಈಗ ನಡೆದಂಥ ಘಟನೆ ಮರುಕಳಿಸಿದೆ ವ್ಯವಸ್ಥಿತವಾಗಿ ಮತ ಎಣಿಕೆ ನಡೆಸುವಲ್ಲಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಡಳಿತಕ್ಕೆ ವಿನಂತಿ.