ಮಣ್ಣೆತ್ತಿನ ಅಮಾವಾಸ್ಯೆ, ಮಕ್ಕಳಿಗೂ ಅಚ್ಚುಮೆಚ್ಚಿನ ಹಬ್ಬ


ಸಂಜೆವಾಣಿ ವಾರ್ತೆ
ಕೊಪ್ಪಳ, ಜೂ.19: ಮಣ್ಣೆತ್ತಿನ ಅಮಾವಾಸ್ಯೆ ಹಬ್ಬವು ಬಂದರೆ ಸಾಕು ಮಕ್ಕಳಿಗೆ ಎಲ್ಲಿಲ್ಲದ ಖುಷಿ, ಮುಂಗಾರಿನ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ ರೈತರಿಗೆ ಅತ್ಯಂತ ಪ್ರಮುಖವಾಗಿದ್ದು. ಈ ದಿನ ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯ ಈ ಹಬ್ಬ ಪೂರಾತನಕಾಲದಿಂದ ನಡೆದು ಬಂದಿದೆ.ಈ ಹಬ್ಬ ಕಾರ ಹುಣ್ಣಿಮೆ ನಂತರ ಬರುವ ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ ಪಡುತ್ತಾರೆ.
ಕೊಪ್ಪಳ ಜಿಲ್ಲೆಯಾದ್ಯಂತ ಬೆಳೆಗಿನಿಂದಲೇ ಮಕ್ಕಳು, ಹಿರಿಯರು ಜಮೀನಿನಲ್ಲಿರುವ ಹಾಗೂ ಕೆಲವರು ಕುಡಿಯುವ ಕೆರೆಯಲ್ಲಿ ಮೃದುವಾದ ಮಣ್ಣನ್ನು ತಂದು ಆ ಮಣ್ಣಿನಿಂದ ಎತ್ತುಗಳನ್ನು ಮಾಡಿ ಅವುಗಳಿಗೆ ಮನೆಯಲ್ಲಿ ಸಿಂಗರಿಸಿ, ಪೂಜಿಸಿ ಸಂಭ್ರಮದಿಂದ ಈ ಹಬ್ಬ ಆಚರಿಸುತ್ತಿರುವುದು ಬಾಹಳ ಮುಖ್ಯವಾಗಿರುತ್ತದೆ.
ಹಳ್ಳಿಯ ಗ್ರಾಮದಲ್ಲಿ ರೈತರು, ಮಕ್ಕಳು ಸೇರಿ ಜಮೀನಿನಲ್ಲಿರುವ ಮಣ್ಣನ್ನು ಹಾಗೂ ಕೆಲವರು ಕುಡಿಯುವ ಕೆರೆಯ ಮಣ್ಣನ್ನು ತಂದು ಜೋಡ ಎತ್ತುಗಳನ್ನು ತಯಾರಿಸಿ ಮನೆಯ ಜೆಗಲಿಯ  ಮೇಲೆ ಇಟ್ಟು ಪೂಜೆ ಸಲ್ಲಿಸಿ ಮಳೆ ಬೆಳೆ ಉತ್ತಮವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿಸುವದೆ. ಒಂದು ರೈತರ ಧರ್ಮ ಈ ವರ್ಷ ಸ್ವಲ್ಪ ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ರೈತರಲ್ಲಿ ನಿರಾಸೆ ಮೂಡಿಸಿದೆ” ಎನ್ನುತ್ತಾರೆ ಯರೇಹಂಚಿನಾಳದಲ್ಲಿ ರೈತರ ಹಕ್ಕು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು.
ಮಣ್ಣೆತ್ತಿನ ಅಮಾವಾಸ್ಯೆ ಎಲ್ಲೆಡೆ ಸಂಭ್ರದಿಂದ ಆಚರಣೆ ಮಾಡುವ ಹಬ್ಬ. ಇಂತಹ ಸಂಭ್ರಮದ ಹೊಸ್ತಿಲಲ್ಲಿರುವ ರೈತನಿಗೆ ಬಾಳನ್ನು ಹಸನು ಮಾಡುವ ಎತ್ತುಗಳಿಗೆ ಪೂಜೆ ಸಲ್ಲಿಸುವ ದಿನ. ಎತ್ತಿನ ಮಣ್ಣಿನ ಮೂರ್ತಿ ಮಾಡಿ ಪೂಜಿಸುವುದು ಹಿಂದಿನ ಸಂಪ್ರದಾಯದಂತೆ ಈಗಲೂ ರೂಢಿಯಲ್ಲಿದೆ. ಕೊಪ್ಪಳ ಜಿಲ್ಲೆಯ ವಿವಿಧ ರೈತರು ಮಣ್ಣಿನಿಂದ ಜೋಡ ಎತ್ತು ತಯಾರಿಸಿದ ಎತ್ತುಗಳನ್ನು ಪೂಜಿಸಿ ವಿಜೃಂಭಣೆಯಿಂದ ಇತರರು ಈ ಹಬ್ಬವನ್ನು ಆಚರಿಸಲಾಯಿತು.