
ಕರಜಗಿ :ಮಾ.13:ವಿದ್ಯಾರ್ಥಿಗಳು ಜೀವನದಲ್ಲಿ ಸ್ವಷ್ಟ ಗುರಿಯೊಂದಿಗೆ ಶಿಸ್ತಿನಿಂದ ಸಾಗಿದರೆ ಉತ್ತುಂಗ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ ಎಂದು ಪೂಜ್ಯ ಹಾಲಯ್ಯ ಹಿರೇಮಠ ಹೇಳಿದರು.
ಅವರು ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು
ಮುಖ್ಯೋಪಾಧ್ಯಾಯ ಸುರೇಶ ಕೋರಚಗಾಂವ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ನಿರ್ಧರಿಸಿಕೊಳ್ಳಲು ಎಸ್ ಎಸ್ ಎಲ್ ಸಿ ಬಹಳ ಮಹತ್ವವಾಗಿದೆ.ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಓದಿನಲ್ಲಿ ತೊಡಗಿಕೊಂಡು ಅಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಲು ಸಾಧ್ಯವಾಗುತ್ತದೆ.ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ನಿರ್ಭಯವಾಗಿ ಬರೆದು ಉತ್ತಮ ಅಂಕ ಪಡೆದು ಶಾಲೆಯ ಪಾಲಕರ ಹಾಗೂ ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕು.ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ವೇಶಾಚಾರ್ಯ ಅಕಮಂಚಿ ಗ್ರಾ ಪಂ ಸದಸ್ಯ ಬಸವರಾಜ ವಾಯಿ ಎಸ್ ಡಿ ಎಂ ಸಿ ಅಧ್ಯಕ್ಷ ವಿಠ್ಠಲ ಅಲ್ಲಾಪೂರ ಅಪ್ಪಾಸಾಬ ಹೊಸೂರಕರ ಬಸವರಾಜ ಜನ್ನಾ ಮಲಕಣ್ಣ ಹೊಸೂರಕರ ನಂದೇಶ ಪ್ಯಾಟಿ ಶ್ರೀಕಾಂತ ಮುಜಗೊಂಡ ಶಿಕ್ಷಕರಾದ ಚನ್ನನಗೌಡ ಮಾಲಿಪಾಟೀಲ ಶ್ರೀಶೈಲ ಸನದಿ ಮರೆಪ್ಪ ಶಿಂದೆ ದತ್ತಪ್ಪ ಡೊಂಬಾಳೆ ಸಲೀಮ ಜಮಾದಾರ ಅಲ್ಲಾಬಕ್ಷ ಚೌಧರಿ ಭಾಗೀರಥಿ ಬಿರಾದಾರ ಕಲಾವತಿ ಕೊಳಲಗಿ ಶೈಲಾ ಎಚ್ ಎಸ್ ಸುಮಲತಾ ಕುಂಬಾರ ವಿಜಯಲಕ್ಷ್ಮಿ ಇಂದುಮತಿ ಪಸಾರೆ ಚಕ್ರವರ್ತಿ ಬಸ್ಸಿನಕರ ಸುಧೀರ ಭಜಂತ್ರಿ ಸೇರಿದಂತೆ ವಿದ್ಯಾರ್ಥಿಗಳಿದ್ದರು.