ಕರಜಗಿ :ಅ.25:ಸರ್ವ ದಾನಗಳಲ್ಲಿ ಅನ್ನದಾನವೇ ಶ್ರೇಷ್ಠ ದಾನವಾಗಿದೆ.ಎಂದು ಡಾ ಷ ಬ್ರ ಶಂಭುಲಿಂಗ ಶಿವಾಚಾರ್ಯರು ಪಡಸಾವಳಗಿ (ಉದಗಿರಮಠ) ಹೇಳಿದರು.
ಅವರು ಅಫಜಲಪುರ ತಾಲೂಕಿನ ಮಣ್ಣೂರ ಗ್ರಾಮದ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಹತ್ತು ದಿನಗಳವರೆಗೆ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ನ ಸಂತರ್ಪಣೆ ಸೇರಿದಂತೆ ವಿವಿಧ ಸೇವೆ ಮಾಡಿದ ದಾನಿಗಳಿಗೆ (ಮಹನೀಯರಿಗೆ) ಶ್ರೀ ಯಲ್ಲಮ್ಮ ದೇವಿ ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನಿಸಿ ಮಾತನಾಡಿ ಮಣ್ಣೂರ ಗ್ರಾಮ ಪುಣ್ಯಕ್ಷೇತ್ರವಾಗಿದೆ.ಗ್ರಾಮದೇವತೆ ಶ್ರೀ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಹತ್ತು ದಿನಗಳವರೆಗೆ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಮಣ್ಣೂರ ಗ್ರಾಮಸ್ಥರು ಮುಖಂಡರು ಭಕ್ತರು ತಮ್ಮ ಶಕ್ತ್ಯಾನುಸಾರ ತನು ಮನ ಧನ ಸಹಾಯ ಸಹಕಾರ ನೀಡಿದ್ದೀರಿ.ಶ್ರೀ ಯಲ್ಲಮ್ಮ ದೇವಿ ಆಶೀರ್ವಾದ ನಿಮ್ಮೆಲ್ಲರ ಮೇಲೆ ಯಾವತ್ತೂ ಇರುತ್ತದೆ. ನಿಮ್ಮೆಲ್ಲರ ಈ ಕಾರ್ಯ ಇತರರಿಗೆ ಮಾದರಿಯಾಗಿದೆ.ಶ್ರೀ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನಡೆಯುವ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ನಿಮ್ಮೆಲ್ಲರ ಸಹಾಯ ಸಹಕಾರ ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಹತ್ತು ದಿನಗಳವರೆಗೆ ವಿವಿಧ ಸೇವೆಗಳನ್ನು ಮಾಡಿದ ಸುಮಾರು 300 ಜನ ದಾನಿಗಳಿಗೆ (ಭಕ್ತರನ್ನು)ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಯಲ್ಲಮ್ಮ ದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಹಾದೇವಪ್ಪ ಕರೂಟಿ ಕಾರ್ಯದರ್ಶಿ ಕಲ್ಲಪ್ಪ ಬೇನೂರ ಖಜಾಂಚಿ ರಾಚಪ್ಪ ಕೊಪ್ಪಾ ಅರ್ಚಕ ತಮ್ಮಣ್ಣ ಪೂಜಾರಿ ಸದಸ್ಯರಾದ ಗುರುಬಾಳ ಜಕಾಪೂರ ಗುಂಡೇರಾವ ಕರೂಟಿ
ಶಿವಕುಮಾರ,ಧರ್ಮಗೊಂಡ ಮೀನಾಕ್ಷಿ
ತಾರಾಪೂರ ಮಲ್ಲಿಕಾರ್ಜುನ ಬಗಲಿ ರಾಜಕುಮಾರ ಪಾಯದ ಮುಖಂಡರಾದ ಸಂಜೀವ ದೈತನ ಸುರೇಶ ಮುಜಗೊಂಡ ವಿವೇಕಾನಂದ ಕೋಗಟನೂರ ಭೀಮರಾವ ಮಾನಶೆಟ್ಟಿ ಸುಭಾಷ ಪ್ಯಾಟಿ ಬಸವರಾಜ ಮುಜಗೊಂಡ ಚಂದ್ರಕಾಂತ ಹಳಗೋದಿ ಸೇರಿದಂತೆ ಟ್ರಸ್ಟ್ ಕಮಿಟಿ ಸರ್ವ ಪದಾಧಿಕಾರಿಗಳು ಸಿಬ್ಬಂದಿಗಳಿದ್ದರು.