ಮಣ್ಣೂರ ಗ್ರಾಮದಲ್ಲಿ ಯುವಕನ ಬರ್ಬರ ಹತ್ಯೆ

ಅಫಜಲಪುರ.ಮೇ 12 ತಾಲೂಕಿನ ಮಣ್ಣೂರ ಗ್ರಾಮದ ಹೊರವಲಯದಲ್ಲಿ ಯುವಕನೋರ್ವನನ್ನು ಶನಿವಾರ ಮಧ್ಯಾಹ್ನದ ಸುಮಾರಿಗೆ ಮಾರಕಾಸ್ತ್ರಗಳನ್ನು ಬಳಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮೃತ ಯುವಕನನ್ನು ರಂಜಾನ್ ಮಹೆಬೂಬ ತಾರಾ (24) ಎಂದು ಗುರುತಿಸಲಾಗಿದೆ.ಮಧ್ಯಾಹ್ನ ಜಮೀನಿಗೆ ತನ್ನ ತಂದೆಯನ್ನು ಬೈಕ್ ಮೇಲೆ ಬಿಟ್ಟು ವಾಪಸ್ ಬರುವಾಗ ದುಷ್ಕರ್ಮಿಗಳು ಬೈಕ್ ನಿಲ್ಲಿಸಿ ದಾಳಿ ಮಾಡಿ, ಚಾಕುವಿನಿಂದ ಇರಿದು ಕೊಲೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಕಲಬುರಗಿ ಎಸ್ಪಿ ಅಕ್ಷಯ್ ಹಾಕೆ,ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‍ಐ ಮಹೆಬೂಬ ಅಲಿ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಫಜಲಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪರಾರಿಯಾದ ಆರೋಪಿಗಳ ಪತ್ತೆಗೆ ಪೆÇಲೀಸರು ಬಲೆ ಬೀಸಿದ್ದಾರೆ.
ಅನೈತಿಕ ಸಂಬಂಧ ಶಂಕೆ:
ಕೊಲೆಯಾದ ಯುವಕ ರಂಜಾನ್ ತಾರಾ ಗ್ರಾಮದ ಅವಿವಾಹಿತ ಮಹಿಳೆ ಜತೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಹೇಳಲಾಗುತ್ತಿದೆ.ಇದೇ ಕಾರಣಕ್ಕಾಗಿ ಹಲವು ಬಾರಿ ಮಹಿಳೆಯ ಸಂಬಂಧಿಕರು ಯುವಕನಿಗೆ ಎಚ್ಚರಿಕೆ ನೀಡಿದರೂ ಸಹ ಯುವಕ ಪದೇ ಪದೇ ಮಹಿಳೆ ಜತೆ ಮಾತನಾಡುವುದು ಮತ್ತು ಸಂಪರ್ಕದಲ್ಲಿ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮಧ್ಯಾಹ್ನ ಜಮೀನಿಗೆ ಹೋಗುವುದನ್ನು ಗಮನಿಸಿದ ನಾಲ್ಕೈದು ಜನ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಕೊಲೆ ನಡೆಸಿದ್ದಾರೆ.