
ಕಲಬುರಗಿ.ಜು.20: ಸಾರಿಗೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಬಿ.ಶ್ರೀ ರಾಮುಲು ಅವರು ಕಲಬುರಗಿ ಜಿಲ್ಲಾ ಪ್ರವಾಸಕೈಗೊಂಡಿರುವಾಗ ಕಲಬುರಗಿ ನಗರದ ಪ್ರತಿಷ್ಠಿತ ಮಣೂರ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂಬ ಗಾದೆಯಂತೆ ಡಾ.ಫಾರುಕ್ ಮಣೂರ ಅವರು ತಮ್ಮ 34 ವರ್ಷ ವಯಸ್ಸಿನಲ್ಲಿಯೆ ಕಲಬುರಗಿ ನಗರ ಅಷ್ಟೆ ಅಲ್ಲ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆ ಎಲ್ಲಾ ತಾಲೂಕು ಹಳ್ಳಿ ಹಳ್ಳಿಯ ಸಾರ್ವಜನಿಕರ ಸೇವೆಗಾಗಿ ಶ್ರಮಿಸುತ್ತಿದ್ದಾರೆ , ಕೋವಿಡ್ ಸಮಯದಲ್ಲಿ ಕಲಬುರಗಿ ಜನತೆಯ ಪಾಲಿಗೆ ವರದಾನವಾದಂತೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ 40 ಬೆಡ್ಗಳುಳ್ಳ ಏಕೈಕ ಆಸ್ಪತ್ರೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ತಾಲೂಕುಗಳಲ್ಲಿ ಶುದ್ಧ ಕುಡಿಯುವ ನೀರಿನ ಅರವಟಿಕೆಗಳ ಸ್ಥಾಪನೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಬಿಸಿಲು ಹಾಗೂ ಮಳೆಯಿಂದ ಪಾರಾಗಲು ಛತ್ರಿ ವಿತರಣೆ ಮಾಡಿದ್ದಾರೆ.. ಚಿಕಿತ್ಸೆಗಾಗಿ ಬೇರೆ ರಾಜ್ಯಕ್ಕೆ ಹೊಗುತ್ತಿದ್ದ ಕಲಬುರಗಿ ಜನತೆಗೆ ಮಣೂರ ಆಸ್ಪತ್ರೆ ದೇವರಂತೆ ಕೈ ಹಿಡಿದಿದೆ.ಆಸ್ಪತ್ರೆ ಪ್ರಾರಂಭವಾದ 1 ವರ್ಷದಲ್ಲಿ 1000ಕ್ಕೂ ಹೆಚ್ಚು ಮೆಜರ್ ಸರ್ಜರಿ ಆಪರೇಷನ್ ಹಾಗೂ ಎಮರಜೆನ್ಸಿ ಟ್ರೋಮಾ ಚಿಕಿತ್ಸೆ, ಮೆಟ್ರೋ ಸಿಟಿಯಲ್ಲಿ ಸಿಗುವಂತಹ ಚಿಕಿತ್ಸೆ ಕಲಬುರಗಿ ನಗರದಲ್ಲಿ ನೀಡುತ್ತಾ ಬಂದಿದ್ದಾರೆ ಮಣೂರ ಆಸ್ಪತ್ರೆಯ ವೈದ್ಯರ ಸಾಧನೆಯನ್ನ ಮನಗಂಡ ಸಚಿವ ಶ್ರೀ ರಾಮುಲು ಅವರು ತುಂಬಾ ಶ್ಲಾಘನಿಯವಾಗಿದೆ ಇದೇ ರೀತಿ ಮುಂದುವರೆಸಿ ಅದಕ್ಕೆ ತಮ್ಮ ಬೆಂಬಲ ಯಾವಾಗಲೂ ಡಾ.ಫಾರುಕ್ ಮಣೂರ ಅವರೊಂದಿಗೆ ಇರುತ್ತೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ಹಾಗೂ ನಿರ್ದೇಶಕ ಡಾ.ಫಾರುಕ್ ಮಣೂರ, ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ, ರಾಕೇಶ ವಾಡೆಕರ್, ಡಾ.ಅನೀಲ ಎಸ್ಕೆ, ಲಕ್ಷ್ಮೀಕಾಂತ, ಡಾ.ವಿವೆಕ ವೀರೆಶ, ಡಾ. ಸಾಗರ ಕೆ, ಡಾ.ರಾಜ್ ಎಹಮದ್ ಮುಲ್ಲಾ, ಡಾ. ಮುಶ್ತಾಕ್ ಸೌದಾಗರ, ಮಹ್ಮದ ಇಸ್ಮಾಯಿಲ್ ಡಾ.ವಿಠ್ಠಲ್, ಡಾ. ರೇಣುಕಾ, ಡಾ. ಮುಜಾಮಿಲ್, ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನೀರು ಪೂರೈಕೆಗೆ ಶಾಘ್ಲನೆ
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯಲ್ಲಿ ಬೆಸಿಗೆ ಕಾಲದಲ್ಲಿ ತುಂಬಾ ಬೀಸಿಲು ಇರುತ್ತೆ ಆ ಸಮಯದಲ್ಲಿ ಮಣ್ಣೂರ ಆಸ್ಪತ್ರೆ ವತಿಯಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅರವಟಿಗೆ ಸ್ಥಾಫನೆ ಮಾಡುವ ಮೂಲಕ ಶುದ್ದ ಕುಡಿಯುವ ನೀರು ಪೂರೈಕೆ ಮಾಡಿರುವುದು ಶಾಘ್ಲನಿಯವಾಗಿದೆ
ಬಿ.ಶ್ರೀ ರಾಮುಲು , ಸಚಿವ