ಸಂಜೆವಾಣಿ ವಾರ್ತೆ
ಕುರುಗೋಡು:ಮಾ.26- ವಿದ್ಯಾರ್ಥಿಗಳ ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬಹಳ ಮುಖ್ಯ ಘಟ್ಟ. ಹಾಗಾಗಿ ವಿದ್ಯಾರ್ಥಿಗಳು ನಿರಂತರವಾಗಿ ಪರಿಶ್ರಮದಿಂದ ಅಭ್ಯಾಸ ಮಾಡಬೇಕು. ತಾವು ಓದಿದ್ದನ್ನು ಪುನರಾವರ್ತನೆ ಮಾಡುತ್ತಿರಬೇಕು. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಬೇಕು ಅಂದಾಗ ಮಾತ್ರ ಪ್ರತಿಯೊಂದು ಯಶಸ್ವಿಗೊಳ್ಳಲು ಸಾಧ್ಯ ಎಂದು ಗ್ರಾಮದ ಮುಖಂಡ ಜಿ. ದಳಪತಿ ಪಕ್ಕೀರಪ್ಪ ಹೇಳಿದರು.
ಸಮೀಪದ ಮಣ್ಣೂರು -ಸೂಗೂರು ಗ್ರಾಮದ ಹಿಂದುಳಿದ ವರ್ಗಗಳ ಡಿ. ದೇವರಾಜ ಆರಸು ವಸತಿ ನಿಲಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ವತಿಯಿಂದ ಪ್ರತಿಭಾನ್ವೇಷಣಾ ಪರೀಕ್ಷೆ ಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರಧಾನ ಹಾಗೂ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಸಮಾಜದಲ್ಲಿ ಬೇರುಬಿಟ್ಟಿರುವ ಅನಕ್ಷರತೆ, ಅಜ್ಞಾನ, ಮೂಢನಂಬಿಕೆ, ಜಾತಿ, ಧರ್ಮ, ಲಿಂಗ ಮತ್ತು ಅಸಮಾನತೆಗಳ ವಿರುದ್ಧ ಹಾಗೂ ಶೋಷಿತ ವರ್ಗಗಳ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ದಲಿತ ಪರ ಸಂಘಟನೆಗಳು ನಿಲ್ಲುತ್ತಿವೆ ಜೊತೆಗೆ ಎಲ್ಲ ರೀತಿಯ ಅಸಮಾನತೆಗಳು ಅಂತ್ಯಗೊಳ್ಳಬೇಕು. ನೆಮ್ಮದಿಯ ಸುಸ್ಥಿರ ಬದುಕು ಈ ಶೊಷಿತ, ಧಮನಿತ ಸಮುದಾಯಗಳಿಗೂ ಸಿಗಬೇಕು ಎಂದರೆ ಸಂವಿಧಾನದ ಪ್ರತಿಯೊಂದು ಆಶಯಗಳು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಂತರ ಎಲ್. ಪಂಪನಗೌಡ ಮಾತನಾಡಿ, ವಿದ್ಯಾರ್ಥಿಗಳು ಭಾಲ್ಯದಿಂದಲೇ ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೂಂಡು ಮುನ್ನಡೆದರೆ ಮಾತ್ರ ಜೀವನದಲ್ಲಿ ಉನತ್ತ ಮಟ್ಟದಲ್ಲಿ ಸಾಗಲು ಸಾಧ್ಯ ಎಂದರು.ನಿಮ್ಮ ಭವಿಷ್ಯ ಉಜ್ವಲವಾಗಬೇಕೆಂದರೆ ವಿದ್ಯಾರ್ಥಿ ದಿಸೆಯಿಂದಲೆ ಉತ್ತಮ ಗುಣಗಳನ್ನು ಮೈಗೂಡಿಸಿಕೂಂಡು ಒಂದು ನಿರ್ದಿಷ್ಟ ಗುರಿ ಹೊಂದುವುದರ ಜೊತೆಗೆ ದುಶ್ಚಟಗಳಿಂದ ದೂರವಿದ್ದು ಸನ್ಮಾರ್ಗದಲ್ಲಿ ನೆಡೆಯುವಂತವರಾಗಿ ನಿಮ್ಮ ಪೋಷಕರ ಕನಸುಗಳನ್ನು ನೆನೆಸು ಮಾಡುವಂತರಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕೆಂದು ಸರ್ಕಾರ ಹಲವಾರು ಸೌಲಭ್ಯಗಳನ್ನು ಒದಗಿಸಿದ್ದು ಇದ್ದನ್ನು ಸದುಪಯೋಗಿಸಿಕೂಂಡು ಮಾದರಿ ವ್ಯಕ್ತಿಗಳಾಗಿ ಎಂದು ತಿಳಿಸಿದರು.
ಶಿಕ್ಷಕ ಎಸ್. ರಾಮು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸೂಕ್ತ ಪ್ರತಿಭೆಗಳನ್ನು ಹೂರ ಹೂಮ್ಮಿಸಬೇಕಾದರೆ ಶಿಕ್ಷಕರ ಪಾತ್ರ ಮತ್ತು ಪೋಷಕರ ಪಾತ್ರ ಅತೀ ಮುಖ್ಯ ವಾಗಿರುತ್ತದೆ. ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರವು ದೂರದೃಷ್ಟಿ ಇಟ್ಟುಕುಂಡು ಮೋರಾರ್ಜಿದೇಸಾಯಿ, ಏಕಲವ್ಯ ವಸತಿ ಶಾಲೆಗಳನ್ನು ತೆರೆದು ಆ ಮಕ್ಕಳಿಗೆ ಉತ್ತಮ ಕಲಿಕಾ ವಾತವರಣ ಸೃಷ್ಟಿಸಿದ್ದು ಈ ನಿಟ್ಟಿನಲ್ಲಿ ಇದರ ಉಪಯುಕ್ತತೆಯನ್ನು ಪಡೆದು ಮಕ್ಕಳು ಏನಾದರೂ ಸಾಧನೆ ಮಾಡುವ ಛಲವನ್ನು ಮೈಗೂಡಿಸಿಕೂಂಡು ಮುನ್ನುಗ್ಗಿ ನೀವು ಸಾಧನೆ ಮಾಡುವಾಗ ಎಲ್ಲಿಯೂ ಎದೆಗುಂದಬ್ಯಾಡಿ ಎಂದು ತಿಳಿಸಿದರು.
ಪ್ರತಿಭಾನ್ವೇಷಣಾ ಪರೀಕ್ಷೆ ಯಲ್ಲಿ ಪ್ರಥಮ ವಾಗಿ ಎಂ. ಸೂಗೂರು ಸ. ಪ್ರೌಢ ಶಾಲೆಯ ವಿದ್ಯಾರ್ಥಿ ಬಿ. ಎನ್. ಮಂಜುನಾಥ, ದ್ವಿತೀಯ ಸ್ಥಾನ ಮಣ್ಣೂರು ಗ್ರಾಮದ ಎಸ್ ವಿ ಎಂ ಶಾಲೆಯ ವಿದ್ಯಾರ್ಥಿ ಕೆ. ಉಷಾ,ತೃತೀಯ ಸ್ಥಾನ ಗಣೇಶ್ ಹಾಗೂ ಸಮಾಧಾನಕರ ಬಹುಮಾನ ಸ. ಹಿ. ಪ್ರಾ. ಶಾಲೆ ಮಣ್ಣೂರು ಪಡೆದುಕೊಂಡಿದ್ದು, ಇವರಿಗೆ ಪ್ರಶಸ್ತಿ ಪ್ರಧಾನ ಹಾಗೂ ಅಭಿನಂದಿಸಿ ಗೌರವಿಸಲಾಯಿತು.
ಪ್ರಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್. ವಿ.ಎಂ. ಶಾಲೆಯ ಅಧ್ಯಕ್ಷ ಸುರೇಶ ಕುಮಾರ್, ಕದಸಂಸ ಭೀಮವಾದ ಸಂಘಟನೆಯ ಜಿಲ್ಲಾಧ್ಯಕ್ಷ ಬೈಲೂರು ಲಿಂಗಪ್ಪ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾರದ, ಗ್ರಾಮ ಘಟಕದ ಅಧ್ಯಕ್ಷ ಖಾದರಲಿಂಗ, ಪ್ರಧಾನ ಕಾರ್ಯದರ್ಶಿ ಶ್ರೀಹರಿ, ಶಿಕ್ಷಕರಾದ ಮುದಿಯಪ್ಪ ನಾಯಕ, ಬಸವರಾಜ, ಶ್ರೀನಿವಾಸ,ಭೀಮ್ ಆರ್ಮಿ ಸಂಘಟನೆಯ ಅಧ್ಯಕ್ಷ ಮಾರೆಪ್ಪ, ಪ್ರಧಾನ ಕಾರ್ಯ ದರ್ಶಿ ರಮೇಶ್, ಉಪಾಧ್ಯಕ್ಷರಾದ ಹುಲುಗಪ್ಪ, ಆಂಜಿನಪ್ಪ, ಖಜಾಂಚಿ ಶೇಖರ್, ಸದಸ್ಯರಾದ ಎಚ್. ವೀರೇಶ್, ಕೆಂಚಪ್ಪ, ಶಿವು, ಹೊನ್ನಪ್ಪ, ಲಕ್ಷ್ಮಣ, ಆನಂದ್, ಅಶೋಕ, ಸೇರಿದಂತೆ ಇತರರು ಇದ್ದರು.