ಮಣ್ಣು ಪರೀಕ್ಷೆ ಅಭಿಯಾನಕ್ಕೆ ಚಾಲನೆ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.03:- ರೈತರ ಪರ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ರಾಸಾಯನಿಕ ಮುಕ್ತ ಕೃಷಿ ಬಗ್ಗೆ ಅರಿವು ಮೂಡಿಸಿ, ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಕುರಿತು ಮನದಟ್ಟು ಮಾಡಿಕೊಡುತ್ತಿರುವ ಕರ್ನಾಟಕ ರೈತ ಕಲ್ಯಾಣ ಸಂಘ ಇದೀಗ ಅನ್ನದಾತರ ಜಮೀನಿನ ಮಣ್ಣಿನ ಸತ್ವ, ಪೆÇೀಷಕಾಂಶ ಹಾಗೂ ಫಲವತ್ತತೆಯ 90 ದಿನಗಳ ಪರೀಕ್ಷಾ ಅಭಿಯಾನಕ್ಕೆ ಚಾಲನೆ ನೀಡಿದೆ.
ಶುಕ್ರವಾರ ಅಭಿಯಾನಕ್ಕೆ ಚಾಲನೆ ನೀಡಿದ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್‍ಗೌಡ ಮಾತನಾಡಿ,ಜಗತ್ತಿನ ಎಲ್ಲ ಜೀವಿಗಳಿಗೂ ಮಣ್ಣೆ ಆಧಾರವಾಗಿದ್ದು,ಇದು ಮನುಕುಲಕ್ಕೆ ದೊರೆತಿರುವ ಅದ್ಭುತ ಉಡುಗೊರೆಯಾಗಿದೆ ಎಂದರು.
ಈ ಭೂಮಿ ಮೇಲೆ ಮಣ್ಣಿರದ ಜೀವನವನ್ನು ಊಹಿಸಲೂ ಅಸಾಧ್ಯವಾಗಿದೆ.ಮನುಷ್ಯನ ಜೀವನ ಮಣ್ಣಿನಿಂದ ಆರಂಭಗೊಂಡು ಮಣ್ಣಿನಿಂದಲೇ ಅಂತ್ಯವಾಗುತ್ತದೆ.ಯಾವುದೇ ಒಂದು ದೇಶದ ಪ್ರಜೆಗಳ ಆರೋಗ್ಯ ಮತ್ತು ಬದುಕು ಉತ್ತಮವಾಗಿರಬೇಕೆಂದರೇ ಆ ದೇಶದ ಮಣ್ಣು ಆರೋಗ್ಯಕರವಾಗಿರಬೇಕು ಎಂದ ಅವರು, ಆದ್ದರಿಂದ ಮಣ್ಣನ್ನು ಸಮಾಜದ ಒಂದು ಅಮೂಲ್ಯವೆಂದು ಪರಿಗಣಿಸಬೇಕೆಂದರು.
ಮುಂದುವರೆದು ಮಾತನಾಡಿದ ಅವರು, ಮನುಷ್ಯ ತನ್ನ ಮತ್ತು ಮುಂದಿನ ಪೀಳಿಗೆಯ ಉಳಿಯುವಿಕೆಗಾಗಿ ಮಣ್ಣಿನ ಆರೋಗ್ಯ ಬಕಾಪಾಡುವುದು ಅಗತ್ಯ ಕರ್ತವ್ಯವಾಗಿದೆ. ಶೇ.99.9ರಷ್ಟು ಮಾನವನ ಆಧಾರ ಮಣ್ಣಿನಿಂದಲೇ ದೊರೆಯುತ್ತದೆ.ಮಣ್ಣು ಆರೋಗ್ಯವಾಗಿದ್ದಲ್ಲಿ ಮನುಷ್ಯನ ಆರೋಗ್ಯ ಮತ್ತು ಆಯುಷ್ಯ ವೃದ್ದಿಸಲು ಸಾಧ್ಯ ಎಂಬುದನ್ನು ಮನುಕುಲ ಅರಿಯಬೇಕಿದೆ ಎಂದರು.
ಮನುಷ್ಯನಿಗೂ ಅಗತ್ಯ ಪೆÇೀಷಕಾಂಶಗಳ ಅಗತ್ಯವಿದೆ. ಏಕೆಂದರೇ ಮಣ್ಣಿನಿಂದ ಬೆಳೆದ ಬೆಳೆಗಳನ್ನು ಇಂದು ನಾವುಗಳು ಸೇವಿಸಬೇಕಿದೆ.ಅದರಲ್ಲೂ ಮನುಷ್ಯ ಬದುಕಲು ಕ್ಯಾಲ್ಸಿಯಂ, ಪೆÇಟಾಷಿಯಂ,ಮೆಗ್ನಿಷಿಯಂ,ಸೋಡಿಯಂ,ರಂಜಕ ಮತ್ತು ಗಂಧಕ ಇವೆಲ್ಲದರ ಪೆÇೀಷಕಾಂಶಗಳು ಪ್ರತಿ ಮನುಷ್ಯನಿಗೂ ದಿವೊಂದಕ್ಕೆ 100ಗ್ರಾಂಗಿಂತಲೂ ಅಧಿಕವಾಗಿ ಬೇಕಿದೆ.ಅಲ್ಲದೇ ಲಘು ಪೆÇೀಷಕಾಂಶಗಳು ಕೂಡಾ ಮಾನವನ ಆರೋಗ್ಯಕ್ಕೆ ಅತಿ ಪ್ರಮುಖವಾಗಿದೆ.ಈ ಎಲ್ಲಾ ಅಗತ್ಯಗಳು ಮಣ್ಣಿನಿಂದಲೇ ಮನುಷ್ಯನಿಗೆ ದೊರೆಯಬೇಕಿದೆ ಎಂದು ಮಾಹಿತಿ ನೀಡಿದ ಚಂದನ್ ಗೌಡ, ಮಣ್ಣಿನಲ್ಲಿರುವ ಪೆÇೀಷಕಾಂಶಗಳನ್ನು ಬೆಳೆಗಳು ಹೀರಿಕೊಳ್ಳುತ್ತವೆ.ಆದ್ದರಿಂದ ಕೃಷಿ ನಂಬಿ ಬದುಕುವುದು ಅತ್ಯಗತ್ಯವಾಗಿದೆ.ಆದ್ದರಿಂದ ಈ ಸೌಲಭ್ಯಗಳನ್ನು ಬಳಸಿಕೊಂಡು ಮಣ್ಣಿನಲ್ಲಿರುವ ಹಾಗೂ ಒಂದು ಬೆಳೆಗೆ ಬೇಕಿರುವ 17ರೀತಿಯ ಪೆÇೀಷಕಾಂಶಗಲನ್ನು ಮಣ್ಣಿನ ಪರೀಕ್ಷೆಯ ಮೂಲಕ ಪಡೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ರೈತ ಬಾಂಧವರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಹಾಗೂ ಜಮೀನಿನ ಮಣ್ಣಿನ ಪರಿಕ್ಷೆಯ ವರದಿಯನ್ನು ಕೇವಲ 7 ದಿನದೊಳಗಾಗಿ ಅನ್ನದಾತರಿಗೆ ನೀಡಲಾಗುವುದು.ಹಾಗೂ ಪರೀಕ್ಷೆ ನಂತರ ಆ ಮಣ್ಣಿನ ಜಮೀನುಗಳಲ್ಲಿ ಯಾವ ರೀತಿಯ ಆದಾಯ ತರುವಂತಹ ಬೆಳೆಗಳನ್ನು ಬೆಳೆಯಬೇಕೆಂಬುದರ ಬಗ್ಗೆಯೂ ಸಲಹೆ ನೀಡಲಾಗುವುದು ಎಂದು ವಿವರಿಸಿದರು.
ಈ ವೇಳೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.