ಮಣ್ಣು, ನೀರು, ಮರ ಜೀವನದ ಆಧಾರ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೨೦: ಮಣ್ಣು, ನೀರು ಮತ್ತು ಮರ ಜೀವನದ ಆಧಾರ  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಛೇರಿ  ದಾವಣಗೆರೆಯ  ಪರಿಸರ ಅಧಿಕಾರಿ   ಡಾ.ಲಕ್ಷ್ಮೀಕಾಂತ  ತಿಳಿಸಿದರು. ಶ್ರೀ ಅರವಿಂದ ವಿದ್ಯಾಸಂಸ್ಥೆ ದಾವಣಗೆರೆಯ ಶ್ರೀಮತಿ ಚನ್ನಪ್ಳ ಶಿವಲಿಂಗಮ್ಮ ಗುರುಬಸಪ್ಪ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಅತ್ತಿಗೆರೆಯ ರಾಜ್ಯದಲ್ಲೇ ಅಪರೂಪದ ಆ ಭಾಗದ ಹಿಂದುಳಿದ ವರ್ಗದ ಮಕ್ಕಳ ಆಶಾಕಿರಣವಾಗಿ ಉಚಿತ ಶಿಕ್ಷಣ ನೀಡುತ್ತಿರುವ ಏಕೈಕ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮಾನವನ ಉಳಿವು ಮತ್ತು ಸಸ್ಯಗಳ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಅವರು ಗಿಡ-ಮರಗಳನ್ನು ಬೆಳೆಸಿ ಪರಿಸರ ರಕ್ಷಣೆಗೆ ಮುಂದಾಗಬೇಕಾಗಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮತ್ಯೋರ್ವ ಮುಖ್ಯ ಅತಿಥಿ ದಾವಣಗೆರೆ ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿ ಡಾ.ಎನ್.ಕೆ.ಗೌಡ  ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆ ಕೌಶಲ್ಯಧಾರಿತ ಕಲಿಕೆಗೆ ಒತ್ತು ನೀಡುವ ಕುರಿತು ಮಾರ್ಗದರ್ಶನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರೂ ಆದ ಪ್ರೊ.ಹೆಚ್ ಚನ್ನಪ್ಪ ಪಲ್ಲಾಗಟ್ಟೆ ಮಾತನಾಡಿ ತಮ್ಮ ಕಾಲೇಜು ಬಡ ಮಕ್ಕಳ, ವಿದ್ಯಾಭ್ಯಾಸ ವಂಚಿತ ಮಕ್ಕಳಿಗೆ ಭರವಸೆಯ ಬೆಳಕಾಗಿ ಅತ್ತಿಗೆರೆಯ ಮತ್ತು ಸುತ್ತ-ಮುತ್ತಲಿನ ಗ್ರಾಮಗಳ ಮಕ್ಕಳಿಗೆ ಉಚಿತ ಮತ್ತು ಅತ್ಯುತ್ತಮ ಶಿಕ್ಷಣವನ್ನು ನುರಿತ ಅನುಭವಿ ಉಪನ್ಯಾಸಕರ ಮೂಲಕ ನೀಡುತ್ತಿದೆ. ದಾವಣಗೆರೆ ತಾಲ್ಲೂಕಿನ ಗ್ರಾಮೀಣ ಭಾಗದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ವಿಭಾಗದ ಫಲಿತಾಂಶದಲ್ಲಿ ಮೊದಲ  ಸ್ಥಾನ ಕಾಪಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಸ್ಥಳೀಯ ಮಕ್ಕಳಿಗೆ ಇನ್ನೂ ಹಚ್ಚಿನ ಅನುಕೂಲ ಕಲ್ಪಿಸುವ ಕುರಿತು ಮಾತನಾಡಿ ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಮತ್ತು ಕೌಶಲ್ಯಾಧಾರಿತ ಶಿಕ್ಷಣ ನೀಡುವ ಕುರಿತು ಮಾತನಾಡಿದರು. ಪರಿಸರ ಮಾಲಿನ್ಯ ತಡೆಯುವ ಮತ್ತು ರಕ್ಷಣೆ ಮಾಡಲು, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ  ಶ್ರದ್ಧೆ-ಪರಿಶ್ರಮ ಅತಿ ಮುಖ್ಯ  ಎಂದು ತಿಳಿಸಿ ನಿಮ್ಮಿಂದ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿರುವುದಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.