ಮಣ್ಣು, ನೀರಿನ ಪರೀಕ್ಷೆ ಪ್ರಾತ್ಯಕ್ಷಿಕೆ


ಲಕ್ಷ್ಮೇಶ್ವರ,ಜೂ.20: ತಾಲೂಕಿನ ಗೊಜನೂರು ಗ್ರಾಮದಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ಮಣ್ಣು ಮತ್ತು ನೀರಿನ ಪರೀಕ್ಷೆ ಕುರಿತು ರೈತರ ಪ್ರಾತ್ಯಕ್ಷಿತ ಕಾರ್ಯಕ್ರಮ ಸಿಪಿ ಮಾಡಳ್ಳಿ ಅವರ ಜಮೀನಿನಲ್ಲಿ ಜರುಗಿತು.
ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸುರೇಶ್ ಕುಂಬಾರ್ ಅವರು ಇದೀಗ ಮಳೆಗಾಲ ಆರಂಭವಾಗುವುದರಿಂದ ರೈತರು ಬಿತ್ತನೆ ಪೂರ್ವದಲ್ಲಿ ಮತ್ತು ತೋಟದ ಬೆಳೆಗಳನ್ನು ಬೆಳೆಯುವ ರೈತರು ಕಡ್ಡಾಯವಾಗಿ ಜಮೀನಿನಲ್ಲಿ ನ ಮಣ್ಣು ಮತ್ತು ನೀರನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಿ ಯಾವ ಬೆಳೆ ಬೆಳೆಯಲು ಯೋಗ್ಯವಾಗಿದೆ ಎಂಬುದನ್ನು ಖಚಿತ ಮಾಡಿಸಿಕೊಂಡ ನಂತರ ರೈತರು ಬೆಳೆಯನ್ನು ಬೆಳೆಯಬೇಕು ಎಂದರು.
ಯಾವ ರೀತಿ ಮಣ್ಣು ಮತ್ತು ನೀರನ್ನು ಪರೀಕ್ಷೆ ಮಾಡಬೇಕು ಎಂಬುದನ್ನು ಸ್ವತಃ ಸಹಾಯಕ ನಿರ್ದೇಶಕರು ಪ್ರಾತ್ಯಕ್ಷತೆ ಮಾಡಿ ರೈತರಿಗೆ ಮನದಟ್ಟು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಸಿಪಿ ಮಾಡಳ್ಳಿ ಸಂತೋಷ ಮಾಡಳ್ಳಿ ಜಗದೀಶ ಶಿವಳ್ಳಿ ಪ್ರವೀಣ್, ಚೆನ್ನಪ್ಪ ಷಣ್ಮುಖಿ ಇದ್ದರು.