ಮಣ್ಣು ನಿರ್ವಹಣೆ ಕುರಿತು ತರಬೇತಿ


ಧಾರವಾಡ ಜೂ.4:75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಧಾರವಾಡ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕೃಷಿ ಇಲಾಖೆ, ಧಾರವಾಡ ಇವರುಗಳ ಸಂಯುಕ್ತಾಶ್ರಯದಲ್ಲಿ “ಸಮಸ್ಯಾತ್ಮಕ ಮಣ್ಣುಗಳು ಹಾಗೂ ಅವುಗಳ ನಿರ್ವಹಣೆ” ವಿಷಯವಾಗಿ ರೈತರಿಗೆ ಅಂತರ್ಜಾಲದ ಮುಖಾಂತರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಮಂಜುನಾಥ ಹೆಬ್ಬಾರ, ಪ್ರಾಧ್ಯಾಪಕರು, ಸಾವಯವ ಕೃಷಿ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಮಾತನಾಡಿ ಕೃಷಿಯಲ್ಲಿ ಸವಳು, ಕ್ಷಾರ ಹಾಗೂ ಹುಳಿ ಮಣ್ಣುಗಳ ನಿರ್ವಹಣೆ, ಸಮಸ್ಯಾತ್ಮಕ ಮಣ್ಣುಗಳಿದ್ದಲ್ಲಿ ಬೆಳೆಗಳ ಆಯ್ಕೆ ಹಾಗೂ ಅಧಿಕ ಇಳುವರಿ ಪಡೆಯುವಲ್ಲಿ ಬೇಸಾಯ ಕ್ರಮಗಳು ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 70ಕ್ಕೂ ಅಧಿಕ ರೈತರು, ಕೃಷಿ ಇಲಾಖೆಯ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ತರಬೇತಿಯಲ್ಲಿ ಭಾಗವಹಿಸಿ ಸಂಪನ್ಮೂಲ ವ್ಯಕ್ತಿಗಳ ಜೊತೆ ಚರ್ಚಿಸಿದರು. ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿಯಾದ ಡಾ. ಗೀತಾ ಎಸ್. ತಾಮಗಾಳೆಯವರು ವಂದನಾರ್ಪಣೆ ಮಾಡಿದರು.