
ಕೋಲಾರ,ನ.೧೦- ಕುರುಗಲ್-ವೇಮಗಲ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು ತಿಂಗಳುಗಳಿಂದ ಅಕ್ರಮವಾಗಿ ಹಾಗೂ ಬಾರಿ ವಾಹನಗಳಿಂದ ಮಣ್ಣು ಸಾಗಾಣಿಕೆ ರಾಜೋರೋಷವಾಗಿ ನಡೆಯುತ್ತಿದ್ದು, ಇವರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ವೇಮಗಲ್ ಹೋಬಳಿ ಕೈಗಾರಿಕಾ ಪ್ರದೇಶದ ರೈತ ಮತ್ತು ಕಾಮಿರ್ಕರ ಅಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದಾರೆ.
ಸದರಿ ಅಕ್ರಮ ಸಾಗಾಣಿಕೆಯನ್ನು ಟ್ರಕ್ ನಂ-೫೨ ೪೮೧೧ & ಕೆಎ-೨೮ ಸಿ-೪೫೧೬ ಹಾಗೂ ಇನ್ನೂ ಸುಮಾರು ಟಿಪ್ಪರ್ ವಾಹನಗಳು, ೪ ಜೆ.ಸಿ.ಬಿ ವಾಹನಗಳ ಮುಖಾಂತರ ರವಿ ಬಿನ್ ಚಿಕ್ಕಪ್ಪಯ್ಯ ಕಲ್ವಮಂಜಲಿ ಎಂಬುವವರು ಕೋಲಾರ-ಚಿಕ್ಕಬಳ್ಳಾಪುರ ಮುಖ್ಯರಸ್ತೆಯ ಮುಖಾಂತರ ಅಂದರೆ ವೇಮಗಲ್ ಪೊಲೀಸ್ ಠಾಣೆಯ ಮುಂಬಾದಲ್ಲೇ ರಾಜಾರೋಷವಾಗಿ ಹಾದು ಹೋಗುತ್ತಿದೆ.
ಸದರಿ ಮೇಲ್ಕಾಣಿಸಿದ ವಾಹನಗಳಲ್ಲಿ ಮಣ್ಣನ್ನು ವೇಮಗಲ್ ಕೈಗಾರಿಕಾ ಪ್ರದೇಶದ ಟಾಟಾ ಕಂಪನಿ ಮತ್ತು ಇನ್ನಿತರೆ ಖಾಸಗಿ ಕಂಪನಿಗಳಿಗೆ ಸಾಗಾಣಿಕೆ ಮಾಡುತ್ತಿರುತ್ತಾರೆ, ಸದರೀ ಮಣ್ಣು ಸಾಗಾಣಿಕೆಗೆ ಯಾವ ಇಲಾಖೆಯ ಹಿರಿಯ ಅಧಿಕಾರಿಗಳು ಅನುಮತಿ ನೀಡಿರುವುದಿಲ್ಲ ಹಾಗೂ ಸರ್ಕಾರಕ್ಕೆ ರಾಜಧನ ಪಾವತಿ ಮಾಡದೇ ಅಕ್ರಮವಾಗಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ ಅಕ್ರಮವಾಗಿ ಯತೇಚ್ಛವಾಗಿ ಹಣ ಸಂಪಾದನೆ ಮಾಡುತ್ತ ರಾತ್ರಿ ಇಡೀ ಲೋಡುಗಟ್ಟಲೆ ಸಾಗಾಣಿಕೆ ಮಾಡುತ್ತಲೇ ಇರುತ್ತಾನೆ. ಸದರಿ ಕಳ್ಳಸಾಗಾಣಿಕೆದಾರರ ಬಳಿ ಹೆಚ್ಚುವರಿ ಭಾರ ಪರವಾನಗಿಯನ್ನು ಆರ್.ಟಿ.ಓ ಅಧಿಕಾರಿಗಳಿಂದ ಸಹ ಪಡೆಯದೇ ಸರ್ಕಾರಕ್ಕೆ ವಂಚಿಸಿರುತ್ತಾನೆ.
ವೇಮಗಲ್ ಕೈಗಾರಿಕಾ ಪ್ರದೇಶವಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಮತ್ತು ಅವಶ್ಯವಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು, ಸರ್ಕಾರಿ ಕೆರೆಗಳಲ್ಲಿ ಮತ್ತು ಸರ್ಕಾರಿ ಗೋಮಾಳ ಜಮೀನುಗಳಿಂದ ಆಕ್ರಮವಾಗಿ ಮಣ್ಣನ್ನು ಅಂದರೆ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ, ಕೈಗಾರಿಕೆಯ ಉದ್ದಿಮೆದಾರರಿಗೆ ಮಾರಾಟ ಮಾಡಿ, ಬಂಡವಾಳ ಮಾಡಿಕೊಳ್ಳುತ್ತಿರುತ್ತಾನೆ ಹಾಗೂ ಬಡಾವಣೆಗಳಿಗೂ ಸಹ ಮಣ್ಣನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಏನೂ ಗೊತ್ತಿಲ್ಲದಂತೆ ಸುಮ್ಮನಿದ್ದಾರೆ ಎಂದು ಆರೋಪಿಸಿದರು.
ಆದುದರಿಂದ ತಾವು ದಯಮಾಡಿ, ಮೇಲ್ಕಂಡ ವಾಹನಗಳು ಮತ್ತು ಅವುಗಳ ಗುತ್ತಿಗೆದಾರರು ಮತ್ತು ಎಚ್.ಆರ್ ಗಳ ವಿರುದ್ಧ ಹಾಗೂ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವ ರವಿ ಮತ್ತು ಕೈಗಾರಿಕಾ ಉದ್ದಿಮೆದಾರರ ವಿರುದ್ಧ ಕಾನೂನು ಕ್ರಮ ಜರಗಿಸಿ, ಸಾರ್ವಜನಿಕ ಹಿತಾಸಕ್ತಿ ಕಾಪಾಡಿ, ನೈಸರ್ಗಿಕ ಸಂಪತ್ತನ್ನು ಸಂರಕ್ಷಣೆ ಮಾಡಬೇಕಾಗಿ ಹಾಗೂ ವೇಮಗಲ್ ಬಸ್ ನಿಲ್ದಾಣದಲ್ಲಿ ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಬೇಕಾಗಿ ಸಂಘದ ಅಧ್ಯಕ್ಷ ನಟರಾಜ್ ವಿ, ಉಪಾಧ್ಯಕ್ಷ ಗೋವಿಂದರಾಜು, ಕಾನೂನು ಸಲಹೆಗಾರ ಫಯಾಜ್‌ಅಹಮ್ಮದ್, ಕಾರ್ಯದರ್ಶಿ ನಾಗೇಂದ್ರ ಒತ್ತಾಯಿಸಿದ್ದಾರೆ.