ಮಣ್ಣು ಉಳಿಸಿ ಅಭಿಯಾನ : ಜಾಗತೀಕ ಪ್ರಯತ್ನ

ಇಂಡಿ:ಜೂ.23:ಮಣ್ಣು ಉಳಿಸಿ ಅಭಿಯಾನ ಒಂದು ಜಾಗತೀಕ ಪ್ರಯತ್ನವಾಗಿದ್ದು ಇದು ಮಣ್ಣಿನ ಆರೋಗ್ಯದ ಪರವಾಗಿ ನಿಲ್ಲಲು ಪ್ರಪಂಚದ್ಯಾದಂತ ಜನರನ್ನು ಒಟ್ಟು ಗೂಡಿಸುವ ಮೂಲಕ ಮಣ್ಣಿನ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಕೃಷಿ ಯೋಗ್ಯ ಮಣ್ಣಿನಲ್ಲಿ ಸಾವಯುವ ಅಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿ ಮತ್ತು ಕ್ರಮಗಳನ್ನು ಸ್ಥಾಪಿಸಲು ಎಲ್ಲಾ ರಾಷ್ಟ್ರೀಯ ನಾಯಕರನ್ನು ಬೆಂಬಲಿಸಲು ಉದ್ದೇಶಿಸಿದೆ ಎಂದು ವಿಜಯಪುರ ಜಿಲ್ಲಾ ಮಣ್ಣು ಉಳಿಸಿ ಸ್ವಯಂ ಸೇವಕರ ತಂಡದ ಎಸ್.ಟಿ.ಪಾಟೀಲ ಹೇಳಿದರು.

ಅವರು ತಾಲೂಕಿನ ಪ್ರಭುದೇವರ ಬೆಟ್ಟದಲ್ಲಿ ನಡೆದ ಮಣ್ಣು ಉಳಿಸಿ ಕಾರ್ಯಕ್ರಮ ಮತ್ತು ಅನ್ನದಾತನಿಗೆ ಮೊದಲ ಆಧ್ಯತೆ ನೀಡಿ ಎಂದು ಬಾವುಟ ರೈತರ ಬೈಕಗಳಿಗೆ ಹಚ್ಚಿ ಜನ ಜಾಗೃತಿ ಮೂಡಿಸುವ ಬೈಕ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಸ್ವಯಂ ಸೇವಕರ ತಂಡದ ಬಸವರಾಜ ಬಿರಾದಾರ ಮಾತನಾಡಿ ಎಲ್ಲ ರೈತರು ರಸಾಯನಿಕಗಳನ್ನು ತ್ಯಜಿಸಿ ಸಾವಯುವ ಕೃಷಿಯತ್ತ ಮತ್ತು ದನಕರುಗಳ ಆಧಾರಿತ ಮತ್ತು ಗಿಡಮರಗಳ ಆಧಾರಿತ ಕೃಷಿ ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದರು.

ಸ್ವಯಂ ಸೇವಕರಾದ ರಾಘವೇಂದ್ರ ಕುಲಕರ್ಣಿ,ವಾಣಿ ಕುಲಕರ್ಣಿ ಮಾತನಾಡಿದರು.

ಇದೇ ವೇಳೆ ಮಣ್ಣು ಪುನಶ್ಚೇತನ ಕಾನೂನು ಜಾರಿಗಾಗಿ ಆಗ್ರಹಿಸಿ 33 ರೈತರು ಬೈಕ ಜಾಥಾ ನಡೆಸಿದರು. ಬಸವರಾಜ ಬಿರಾದಾರ ಪ್ರತಿಜ್ಞಾವಿಧಿ ಬೋಧಿಸಿದರು.

ಅಭಿಷೇಕ ಬಿರಾದಾರ, ಶಿವಶರಣ ಬಡಿಗೇರ, ಈಶ್ವರ ಕಲಾಲ, ಪ್ರಭುಗೌಡ ಪಾಟೀಲ ಮತ್ತಿತರಿದ್ದರು.