ಮಣ್ಣಿನಲ್ಲಿ ಇರುವ ಜೀವಸತ್ವ ಸಂರಕ್ಷಣೆ ಅಗತ್ಯ :ಡಾ. ಸವಿತಾ

(ಸಂಜೆವಾಣಿ ವಾರ್ತೆ)
ಇಂಡಿ:ಡಿ.7: ಮಣ್ಣಿನಲ್ಲಿ ಇರುವ ಜೀವಸತ್ವವನ್ನು ಸಂರಕ್ಷಿಸಿದರೆ ಜಗತ್ತಿನ ಅನೇಕ ಬಿಕ್ಕಟ್ಟುಗಳಿಗೆ ಪರಿಹಾರ ಸಿಗಲಿದೆ ಎನ್ನುವದು ತಜ್ಞರ ಅಭಿಪ್ರಾಯ ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ. ಸವಿತಾ ಬಿ. ಮಾತನಾಡಿದರು.
ಪಟ್ಟಣದ ಕೃಷಿ ವಿಜ್ಞಾನಕೇಂದ್ರದಿಂದ ವಿಶ್ವ ಮಣ್ಣು ದಿನಾಚರಣೆ ಯಲ್ಲಿ ಮಣ್ಣಿನ ಲವಣಾಂಶವನ್ನುತಡೆಗಟ್ಟಿ, ಮಣ್ಣಿನಉತ್ಪಾದಕತೆ ಹೆಚ್ಚಿಸಿಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು.
ಕ್ಷಾರಯುಕ್ತ ಮಣ್ಣು ಮತ್ತು ಅದರ ನಿರ್ವಹಣೆ ಮತ್ತು ಮಣ್ಣು ಮಾದರಿ ಸಂಗ್ರಹಣೆ ಮತ್ತು ವಿಶ್ಲೇಷಣೆಕುರಿತು ಮಾತನಾಡಿದರು.
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಆರ್. ಬಿ. ನೆಗಳೂರ ಮಾತನಾಡಿ ಮಣ್ಣು ಆರೋಗ್ಯ ಚೀಟಿಯ ಮಹತ್ವದ ಬಗ್ಗೆ ವಿವರಿಸಿದರು. ಸಾಂಕೇತಿಕವಾಗಿ ಈ ಕಾರ್ಯಕ್ರಮದಲ್ಲಿ 50ಜನರೈತರಿಗೆ ಮಣ್ಣುಆರೋಗ್ಯಚೀಟಿ ವಿತರಣೆ ಮಾಡಿದರು.
ಡಾ. ಸಂತೋಷ ಶಿಂದೆ, ಪ್ರಗತಿಪರ ರೈತ ಎಸ್. ಟಿ. ಪಾಟೀಲ, ಡಾ.ಸೈಯದಾ ಸಮೀನಾ ಅಂಜುಮ, ರಾಜಶೇಖರ ನಿಂಬರಗಿ, ಮುದ್ದುಗೌಡ ಪಾಟೀಲ, ಪ್ರದೀಪಕುಮಾರ ಜಿ.ಟಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ 95ಕ್ಕೂ ಹೆಚ್ಚುಜನಆಸಕ್ತ ರೈತರು ಭಾಗವಹಿಸಿದ್ದರು.