ಮಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರ ಅಮೋಘ ಸಾಧನೆ10 ದಿನಗಳಲ್ಲಿ 6 ಮಂದಿಗೆ ಯಶಸ್ವೀ ಮೆದುಳಿನ ಶಸ್ತ್ರಚಿಕಿತ್ಸೆ

ಕಲಬುರಗಿ ಸೆ 20 : ಕೇವಲ 10 ದಿನಗಳಲ್ಲಿ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ವ್ಯಕ್ತಿಗಳಿಗೆ ಯಶಸ್ವೀ ಮೆದುಳಿನ ನರರೋಗ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ಇಲ್ಲಿನ ಮಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಅಮೋಘ ಸಾಧನೆ ಮಾಡಿದ್ದಾರೆ.
ಈ ಕುರಿತು ಮಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಫಾರೂಕ್ ಮಣೂರ್ ಹಾಗೂ ನ್ಯೂರೊ ಸರ್ಜನ್ ಡಾ.ಮೊಹ್ಮದ್ ಮಿನಾಜ್ ಹರಸೂರ್ ಅವರು ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಕೇವಲ 10 ದಿನಗಳಲ್ಲಿ ಓರ್ವ ಎಂಟು ವರ್ಷದ ಬಾಲಕ ಸೇರಿದಂತೆ ಆರು ವ್ಯಕ್ತಿಗಳಿಗೆ ಅಪರೂಪದ ಮೆದುಳಿನ ನರರೋಗ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂಗಾವಿ ಗ್ರಾಮದ 60 ವರ್ಷದ ಸದಾಶಿವ ಅವರನ್ನು ಕೋಮಾ ಸ್ಥಿತಿಯಲ್ಲಿ ಸಂಬಂಧಿಕರು ಮಣೂರ್ ಆಸ್ಪತ್ರೆಗೆ ಕರೆ ತಂದಿದ್ದರು. ಆಸ್ಪತ್ರೆಗೆ ಸೇರ್ಪಡೆಗೊಂಡ ಕೇವಲ ಒಂದು ತಾಸಿನೊಳಗೆ ಅಗತ್ಯ ವೈದ್ಯಕೀಯ ತಪಾಸಣೆಗಳನ್ನು ಕೈಗೊಂಡಾಗ ಅಪಘಾತದ ತೀವ್ರತೆಯಿಂದಾಗಿ ಮೆದುಳಿನ ಎಡಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಗಿತ್ತು. ತಕ್ಷಣ ವ್ಯಕ್ತಿಯ ಕುಟುಂಬದ ಸದಸ್ಯರ ಅನುಮತಿ ಪಡೆದು ಶಸ್ತ್ರಚಿಕಿತ್ಸೆ ಕೈಗೊಳ್ಳಲಾಯಿತು. ಮುಂದಿನ ಕೇವಲ ಎರಡು ದಿನಗಳಲ್ಲಿ ಆತ ನಡೆದಾಡಲು ಆರಂಭಿಸಿದ್ದಾರೆ ಎಂದು ಡಾ.ಮಿನಾಜ್ ತಿಳಿಸಿದರು.
ಮತ್ತೊಂದೆಡೆ, ಪಾಶ್ರ್ವವಾಯು ಪೀಡಿತ 65 ವರ್ಷದ ಗುಲಾಂ ಎಂಬುವವರು ಅತಿಯಾದ ರಕ್ತ ತೆಳುವು (ಬ್ಲಡ್ ಥಿನ್ನರ್ಸ್) ಔಷಧಗಳನ್ನು ಬಳಸುತ್ತಿದ್ದ ಕಾರಣಕ್ಕೆ ಇದ್ದಕ್ಕಿದ್ದಂತೆ ಪ್ರಜ್ಞಾಶೂನ್ಯ ಸ್ಥಿತಿಗೆ ತಲುಪಿದ್ದರು. ಅಗತ್ಯ ತಪಾಸಣೆಯ ಬಳಿಕ ಇವರಿಗೂ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದಾಗಿ ಗೊತ್ತಾಯಿತು. ಹಾಗಾಗಿ ತಕ್ಷಣ ಆಪರೇಷನ್ ಕೈಗೊಂಡು ಕ್ಲೋಟಿಂಗ್ ಕ್ಲಿಯರ್ ಮಾಡಲಾಯಿತು ಎಂದು ಅವರು ವಿವರಿಸಿದರು.
ಅಪಘಾತದಲ್ಲಿ ತಲೆಗೆ ತೀವ್ರ ಸ್ವರೂಪದ ಪೆಟ್ಟುಬಿದ್ದ ಕಾರಣಕ್ಕೆ ಆಸ್ಪತ್ರೆಗೆ ಕರೆ ತರಲಾಗಿದ್ದ 30 ವರ್ಷದ ಮಲ್ಲಿಕಾರ್ಜುನ ಎಂಬುವವರಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ತುರ್ತು ಶಸ್ತ್ರಚಿಕಿತ್ಸೆಯ ಮೂಲಕ ವ್ಯಕ್ತಿಯ ಪ್ರಾಣ ಉಳಿಸಲಾಗಿದೆ. ಇನ್ನು, ಮತ್ತೊಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ 16 ವರ್ಷದ ದರ್ಶನ್ ಎಂಬ ಯುವಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟದೆಯೂ ಪ್ರಜ್ಞಾಶೂನ್ಯ ಸ್ಥಿತಿಗೆ ತಲುಪಿದ್ದ. ಅದರಲ್ಲೂ, ದರ್ಶನ್ ಗ್ರೇಡ್-3 ಸ್ಥಿತಿಯಲ್ಲಿದ್ದ ಕಾರಣಕ್ಕಾಗಿ ಆತನ ಸ್ಥಿತಿ ತೀರಾ ಗಂಭೀರವಾಗಿತ್ತು. ಈ ಯುವಕನಿಗೆ ಶಸ್ತ್ರಚಿಕಿತ್ಸೆ ಇಲ್ಲದೆ ಅತ್ಯಂತ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ ಎಂದರು.
ಮಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಅನಿಲ್ ಕಣ್ಣೂರ್, ಡಾ.ಸಾಫಿಯಾ ತರನ್ನುಮ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


ಎಂಟರ ಪೆÇೀರನಿಗೂ ಶಸ್ತ್ರಚಿಕಿತ್ಸೆ
ತಲೆ ಬುರುಡೆಯ ಒಳಭಾಗ ಮತ್ತು ಮೆದುಳಿನ ಹೊರಭಾಗದಲ್ಲಿ ತೀವ್ರ ರಕ್ತಸ್ರಾವ (ಎಪಿಡ್ರುವಲ್ ಹೆಮಟೋಮಾ)
ಉಂಟಾದ ಕಾರಣ ಮಣೂರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭರ್ತಿಯಾಗಿದ್ದ ಎಂಟು ವರ್ಷದ ಬಾಲಕ ಇರ್ಫಾನ್ ಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು. ಸುಮಾರು 20ರಿಂದ 25 ಮಿಲಿ ಲೀಟರ್ ಪ್ರಮಾಣದಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಬಾಲಕನ
ಸ್ಥಿತಿ ಡೋಲಾಯಮಾನವಾಗಿತ್ತು. ಇಷ್ಟಾದರೂ ಶಸ್ತ್ರಚಿಕಿತ್ಸೆ ಕೈಗೊಳ್ಳದೆ ಬಾಲಕನಿಗೆ ಚಿಕಿತ್ಸೆ ನೀಡಲಾಗಿದೆ. ಈಗ ಬಾಲಕ ಸಂಪೂರ್ಣ ಗುಣಮುಖವಾಗಿದ್ದಾನೆ ಎಂದು ಡಾ.ಮಿನಾಜ್ ಹರಸೂರೆ ವಿವರಿಸಿದರು.


ಬ್ಲಡ್ ಥಿನ್ನರ್ಸ್ ಬಳಸುವವರೇ ಎಚ್ಚರ!
ಲಿವರ್ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ 70 ವರ್ಷದ ಕುತ್ಬುದ್ದೀನ್ ಅವರಿಗೆ ನಿತ್ಯದ ಔಷಧಗಳಲ್ಲಿ ಬ್ಲಡ್ ಥಿನ್ನರ್ಸ್ ನೀಡುತ್ತಿದ್ದ ಕಾರಣಕ್ಮೆ ಮೆದುಳಿನಲ್ಲಿ ಬ್ಲಡ್ ಕ್ಲಾಟ್ ಆಗಿತ್ತು. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಸ್ಪಾಂಟೇನಿಯಸ್ ಕ್ಲಾಟ್ ಎನ್ನಲಾಗುತ್ತದೆ. ಈ ಪ್ರಕರಣದಲ್ಲಿ ಅತ್ಯಂತ ತ್ವರಿತ ನಿರ್ಧಾರ ಕೈಗೊಂಡು ಮೆದುಳಿನ ಶಸ್ತ್ರಚಿಕಿತ್ಸೆ ಕೈಗೊಂಡಿದ್ದರಿಂದ ಕುತ್ಬುದ್ದೀನ್ ಅವರನ್ನು ಪ್ರಾಣದ ಸಂಚಕಾರದಿಂದ ಬಚಾವ್ ಮಾಡಲಾಯಿತು ಎಂದು ಡಾ.ಫಾರೂಕ್ ಮಣೂರ್ ಹಾಗೂ ಡಾ.ಮಿನಾಜ್ ಹರಸೂರೆ ತಿಳಿಸಿದರು.ಇನ್ನು ಬ್ಲಡ್ ಥಿನ್ನರ್ಸ್ ಬಳಸುವ ವ್ಯಕ್ತಿಗಳಿಗೆ ಹೀಗೆ ದಿಢೀರ್ ಬ್ಲಡ್ ಕ್ಲಾಟಿಂಗ್ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ಎಚ್ಚರ ವಹಿಸುವುದು ಸೂಕ್ತ ಎಂದು ಸಲಹೆ ನೀಡಿದರು.