ಮುಂಬೈ,ಏ.೨೬- ಬಹುಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ “ಪೊನ್ನಿಯನ್ ಸೆಲ್ವನ್-೨ ಚಿತ್ರದ ಪ್ರಚಾರದಲ್ಲಿ ಬಾಲಿವುಡ್ ತಾರೆ ಐಶ್ವರ್ಯ ರೈ ಬಚ್ಚನ್ ಅವರು ನಿರ್ದೇಶಕ ಮಣಿರತ್ನಂ ಅವರ ಕಾಲಿಗೆ ಬಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿತ್ರದ ಪ್ರಚಾರಕ್ಕೆಂದು ಮುಂಬೈಗೆ ಆಗಮಿಸಿದ್ದ ವೇಳೆ ವಿಕ್ರಮ್, ತ್ರಿಶಾ, ಜಯಂ ರವಿ ಮತ್ತು ಕಾರ್ತಿ, ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮತ್ತಿತರ ಸಮ್ಮುಖದಲ್ಲಿ ಐಶ್ವರ್ಯ ರೈ ಬಚ್ಚನ್, ಅವರು ಮಣಿರತ್ನಂ ಅವರಿಗೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ನಿರ್ದೇಶಕ ಮಣಿರತ್ನಂ ಅವರು ಐಶ್ವರ್ಯಾ ಅವರ ನಟನಾ ಕೌಶಲ್ಯವನ್ನು ಇದೇ ವೇಳೆ ಹಾಡಿ ಹೊಗಳಿದ್ದಾರೆ. ಐಶ್ವರ್ಯಾಳನ್ನು ಎಷ್ಟು ಪ್ರೀತಿಸುತ್ತೇನೆ, ಆದರೆ ಅವರು ಯಾವುದೇ ಪಾತ್ರ ಕೊಟ್ಟರೂ ನಿಭಾಯಿಸುತ್ತಾರೆ ಎನ್ನುತ್ತಿದ್ದಂತೆ ಐಶ್ವರ್ಯಾ ರೈ ತಕ್ಷಣ ಎದ್ದು ಪಾದ ಮುಟ್ಟಿ ಆಶೀರ್ವಾದ ಪಡೆದರು.
ಇದಕ್ಕೂ ಮುನ್ನ ನಿರ್ದೇಶಕರನ್ನು ನೋಡಿದ ಐಶ್ವರ್ಯಾ ರೈ ಬಚ್ಚನ್ ಮಣಿರತ್ನಂ ಅವರನ್ನು ತಬ್ಬಿಕೊಂಡು ಕ್ಯಾಮೆರಾಗಳಿಗೆ ಪೊ?ಸ್ ಕೊಟ್ಟಿದ್ದರು. ಐಶ್ವರ್ಯಾ ಅವರ ಮೊದಲ ಚಿತ್ರ ತಮಿಳಿನ ಇರುವರ್ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು. ಹೀಗಾಗಿ ಆರಂಭದಿಂದಲೂ ಮಣಿರತ್ನಂ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ನಟ ಚಿಯಾನ್ ಚಿಕ್ರಂ ಮಾತನಾಡಿ ಚಿತ್ರದಲ್ಲಿ ಚೋಳ ರಾಜಕುಮಾರ ಆದಿತಾ ಕರಿಕಾಳನ್ ಪಾತ್ರದಲ್ಲಿ ನಟಿಸಿದ್ದೇನೆ. ನಟಿ ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದು ಖುಷಿ ಆಯಿತು ಎಂದಿದ್ದಾರೆ.ಪೊನ್ನಿಯನ್ ಸೆಲ್ವನ್-೨ ನಾಡಿದ್ದು ವಿವಿಧ ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ.