ಮಣಿಪುರ ಹಿಂಸಾಚಾರ ವಿರೋಧಿಸಿ ಸಿಐಟಿಯು ಪ್ರತಿಭಟನೆ

ಕಲಬುರಗಿ,ಜು.25-ಮಣಿಪುರದಲ್ಲಿ ಮಹಿಳೆಯರ ಮತ್ತು ಕುಕ್ಕಿ ಬುಡಕಟ್ಟು ಜನರ ಮೇಲೆ ನಡೆಯುತ್ತಿರುವ ಹಿಂಸಾಚಾರ, ಲೈಂಗಿಕ ದೌರ್ಜನ್ಯ ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಈ ಹಿಂಸಾಚಾರಕ್ಕೆ ತೆರೆಯಳೆಯಲು ಅಲ್ಲಿನ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಮತ್ತು ಎಲ್ಲರ ಹಿತ ಕಾಯುವ ಆಡಳಿತ ಸ್ಥಾಪನೆಯಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಅಧ್ಯಕ್ಷೆ ಶಾಂತಾ ಘಂಟಿ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಸಜ್ಜನ್, ಗೌರಮ್ಮ ಪಾಟೀಲ, ನಾಗಯ್ಯ ಸ್ವಾಮಿ, ಅಯ್ಯಪ್ಪ ಕರಗಾರ, ರಾಜಮತಿ ಪಾಟೀಲ, ಶ್ರೀಮಂತ ಬಿರಾದಾರ, ಶೇಕಮ್ಮ ಕುರಿ, ರತ್ನಮ್ಮ, ಶರಣಮ್ಮ, ರಫತ್ ಸುಲ್ತಾನ್, ಸಿದ್ದರಾಮ ದಣ್ಣೂರ, ಗುಜರಾಬಾಯಿ, ಬಾಬು ಹೂವಿನಹಳ್ಳಿ, ಮಹಾದೇವಿ ಪೋಲಕಪಳ್ಳಿ, ಪದ್ಮಿನಿ ಕಿರಣಗಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.