ಮಣಿಪುರ ರಾಷ್ಟ್ರಪತಿ ಆಡಳಿತಕ್ಕೆ ಪ್ರಗತಿಪರ ಸಂಘಟನೆ ಒತ್ತಾಯ

ಮಾನ್ವಿ,ಆ.೧೦-
ಮಣಿಪುರ ರಾಜ್ಯದಲ್ಲಿ ಜನಾಂಗೀಯ ಗುಂಪುಗಾರಿಕೆ ಗಲಾಟೆಯನ್ನು ನಿಯಂತ್ರಣ ಮಾಡುವುದಕ್ಕೆ ವಿಪುಲವಾಗಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿದ ಮುಖ್ಯಮಂತ್ರಿ ಬಿರೇನ್ ಸಿಂಗ್ ಇವರ ಸರ್ಕಾರವನ್ನು ವಜಾಗೊಳಿಸಿ ರಾಷ್ಟಪತಿ ಆಡಳಿತವನ್ನು ಜಾರಿ ಮಾಡುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ತಾಲೂಕ ದಂಡಧಿಕಾರಿಗಳ ಕಛೇರಿಯ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಬಸವ ವೃತ್ತದ ಮೂಲಕ ದಂಡಧಿಕಾರಿಗಳ ಕಛೇರಿಯವರೆಗೆ ಪ್ರತಿಭಟನೆ ಮೂಲಕ ತೆರಳಿದ ಸಂಘಟಕರು ಮನವಿ ನೀಡಿ ಮಾತಾನಾಡಿ ಮಣಿಪುರ ರಾಜ್ಯದಲ್ಲಿ ಮಹಿಳೆಯನ್ನು ಒಂದು ವಸ್ತುವಂತೆ ಕಾಣುತ್ತಾರೆ ಹಾಗೂ ಅವರನ್ನು ಬೆತ್ತಲೆ ಮೆರವಣಿಗೆ ಮಾಡಿದ ಉದಾಹರಣೆಗೆ ಇದೆ ಹಾಗೂ ಕಾನೂನು ಸುವ್ಯವಸ್ಥೆ ಮಾಡುವಲ್ಲಿ ಅಲ್ಲಿನ ಸರ್ಕಾರ ಹಾಗೂ ಪೋಲಿಸ್ ಇಲಾಖೆ ಸಂಪೂರ್ಣ ವಿಪುಲವಾಗಿದೆ ಆದರಿಂದ ನಮ್ಮ ಮನವಿ ಪತ್ರದಲ್ಲಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಲ್ಲಿನ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿದರು..
ಈ ಸಂಘಟನೆಯ ಮುಖಂಡರಾದ ಜೆ ಎಚ್ ದೇವರಾಜ, ಪ್ರವೀಣ್ ಕುಮಾರ್, ಸಂಪತ್ತರಾಜ, ಯಮುನಪ್ಪ, ಪಿ ರವಿ, ಯಲ್ಲಪ್ಪ ಬಾದರದಿನ್ನಿ,ಉರುಕುಂದ ಜಗ್ಲಿ, ರವಿಕುಮಾರ್ ಮದ್ಲಾಪೂರು, ಪಕೀರಪ್ಪ ಕಡದಿನ್ನಿ, ಆಕಾಶ ಮ್ಯಾತ್ರೀ, ಮಲ್ಲೇಶ ಜಗ್ಲಿ, ರಮೇಶ ನೀರಮಾನವಿ, ಸೇರಿದಂತೆ ಅನೇಕರು ಇದ್ದರು.