
ಇಂಫಾಲ್ ,ಮೇ೫-ಮೈತೇಯಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡುವ ಮತ್ತು ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸುವ ಸರ್ಕಾರದ ಕ್ರಮ ಖಂಡಿಸಿ ಆದಿವಾಸಿಗಳು ಮಣಿಪುರದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಾಕ ಹಿಂಸಾಚಾರ ನಡೆಸಿದ್ದಾರೆ. ಇದುವರೆಗೂ ಘಟನೆಯಲ್ಲಿ ೧೦ ಮಂದಿ ಸಾವನ್ನಪ್ಪಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಪರಿಸ್ಥಿತಿ ಕೈ ಮೀರಿದರೆ ಕಂಡಲ್ಲಿ ಗುಂಡಿಕ್ಕಲು ಸರ್ಕಾರ ಆದೇಶಿಸಿದೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಸೇನೆ ತಿಳಿಸಿದೆ.
ಮುನ್ನೆಚ್ಚೆರಿಕೆ ಕ್ರಮವಾಗಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಿವಿಧ ರಾಜ್ಯಗಳಿಂದ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಪರಿಸ್ಥಿತಿ ಹತೋಟಿಗೆ ಬರುವವರೆಗೂ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಜೊತೆಗೆ ಮುನ್ನೆಚ್ಚೆರಿಕೆ ಕ್ರಮವಾಗಿ ಮೊಬೈಲ್ ಇಂಟರ್ನೆಟ್, ಬ್ರಾಡ್ ಬ್ಯಾಂಡ್ ಸೇವೆಗಳನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ಸ್ಥಗಿತ ಮಾಡಲಾಗಿದೆ.
ಬಹುಸಂಖ್ಯಾತ ಮೈತಿ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಸರ್ಕಾರದ ಯಾವುದೇ ಪ್ರಯತ್ನ ವಿರೋಧಿಸಲು ಅಧಿಕಾರಿಗಳು ಮಧ್ಯರಾತ್ರಿಯಲ್ಲಿ ಸೇನೆ ಕರೆಸಲೂ ಕೂಡ ಮುಂದಾಗಿದ್ದಾರೆ.
ರಾಜ್ಯ ಬಿಜೆಪಿ ಶಾಸಕ ವುಂಗ್‌ಜಾಗಿನ್ ವಾಲ್ಟೆ ಅವರ ಮೇಲೆ ಇಂಫಾಲದಲ್ಲಿ ಗುಂಪೊಂದು ದಾಳಿ ಮಾಡಿದೆ. ಹೀಗಾಗಿ ಮಣಿಪುರ ಬೂದಿ ಮುಚ್ಚಿದ ಕೆಂಡದಂತಿದೆ.
೯ ಸಾವಿರ ಸ್ಥಳಾಂತರ:
ಹಿಂಸಾಚಾರ ಪೀಡಿತ ಮಣಿಪುರದಿಂದ ಜನರನ್ನ ಸುರಕ್ಷಿತ ಸ್ಥಳಗಳಿಗೆ ಒಂಬತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ
ಚುರಚಂದಪುರ, ಇಂಫಾಲದಲ್ಲಿ ೨ ಸಾವಿರ “ಮೊರೆಹ್‌ನಲ್ಲಿ ೨ ಸಾವಿರ ಜನರನ್ನು ಸ್ಥಳಾಂತರ ಮಾಡಿರುವುದೂ ಸೇರಿದಂತೆ ಒಂಭತ್ತು ಸಾವಿರಕ್ಕೂ ಹೆಚ್ಚು ಜನರನ್ನ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಲಾಗಿದೆ
ಸ್ಥಳಾಂತರ ಮಾಡಿದ ಜನರಿಗೆ ವಿವಿಧ ತಾತ್ಕಾಲಿಕ ವಸತಿ ಸ್ಥಳಗಳಲ್ಲಿ ನೆರವು ನೀಡಲಾಗುತ್ತಿದೆ” ಎಂದು ರಕ್ಷಣಾ ಪ್ರೊ ಲೆಫ್ಟಿನೆಂಟ್ ಕರ್ನಲ್ ಎಂ ರಾವತ್ ಹೇಳಿದ್ದಾರೆ.
ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ೫೫ ಬೆಟಾಲಿಯನ್ ನಿಯೋಜಿಸಲಾಗಿದ್ದರೂ, ತಡರಾತ್ರಿ ವಾಹನಗಳಿಗೆ ಬೆಂಕಿ ಹಚ್ಚಿರುವ ಪ್ರಕರಣಗಳು ನಡೆದಿವೆ. ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ಮೈತೇಯ್‌ಗಳು ವಾಸಿಸುವ ವಿವಿಧ ಭಾಗಗಳಲ್ಲಿ ಹಲವಾರು ಮನೆಗಳು ಮತ್ತು ವಾಹನಗಳನ್ನು ಸುಟ್ಟು ಹಾಕಲಾಗಿದೆ.
ಶಸ್ತ್ರಾಸ್ತ್ರ ಲೂಟಿ:
ಮಣಿಪುರದ ತರಬೇತಿ ಪೊಲೀಸ್ ಕಾಲೇಜಿನಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮತ್ತು ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಭದ್ರತಾ ಪಡೆಗಳಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡ ಬಗ್ಗೆ ದೃಢೀಕರಿಸದ ವರದಿಗಳಿವೆ.
ಭದ್ರತಾ ಪಡೆಗಳ ಇನ್ನೂ ಹದಿನಾಲ್ಕು ಕಾಲಮ್‌ಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿತ್ತು, ಆದರೆ ಕ್ಷೇತ್ರ ಕಾರ್ಯಪಡೆ ಅನ್ನು ಭಾರತೀಯ ವಾಯು ಸೇನೆ ವಿಮಾನದಲ್ಲಿ ಇಂಫಾಲ್‌ಗೆ ಕರೆತರಲಾಗಿದೆ.
೧೦ ಜಿಲ್ಲೆಯಲ್ಲಿ ಕರ್ಫ್ಯೂ
ಹಿಂಸಾಚಾರ ಪೀಡಿತ ಮಣಿಪುರದ ೧೦ ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಿಲಾಗಿಧ. ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ತೌಬಲ್, ಬಿಷ್ಣುಪುರ್, ಕಾಕ್ಚಿಂಗ್, ಕಾಂಗ್ಪೋಕ್ಪಿ, ತೆಂಗ್ನೌಪಾಲ್, ಚುರಾಚಂದ್ಪುರ್, ಫರ್ಜ್ವಾಲ್ ಮತ್ತು ಜಿರಿಬಾಮ್ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಆಯಾ ಜಿಲ್ಲಾಡಳಿತಗಳು ಆದೇಶ ನೀಡಿವೆ.
“ಸೇನೆ ಮತ್ತು ಅಸ್ಸಾಂ ರೈಫಲ್ಸ್ ಧ್ವಜ ಮೆರವಣಿಗೆ ನಡೆಸಿದ್ದು, ಖುಗಾ, ಟಂಪಾ, ಖೋಮೌಜಂಬಬಾ ಪ್ರದೇಶಗಳಾದ ಚುರಾಚಂದ್‌ಪುರ, ಮಂತ್ರಿಪುಖ್ರಿ, ಲ್ಯಾಂಫೆಲ್, ಇಂಫಾಲ್‌ನ ಕೊಯಿರಂಗಿ ಪ್ರದೇಶಗಳು ಮತ್ತು ಕಕ್ಚಿಂಗ್ ಜಿಲ್ಲೆಗಳ ಸುಗ್ನು ಪ್ರದೇಶಗಳಲ್ಲಿ ವೈಮಾನಿಕ ವಿಚಕ್ಷಣವನ್ನು ನಡೆಸುತ್ತಿವೆ” ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ
ಜನರ ಪ್ರಾಣ ರಕ್ಷಿಸಲು ಬದ್ದ; ಸಿಎಂ
ಹಿಂಸಾಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, “ಜನರ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ
ದೀರ್ಘಾವಧಿಯ ಕುಂದುಕೊರತೆಗಳನ್ನು ಜನರೊಂದಿಗೆ ಸಮಾಲೋಚಿಸಿ ಸೂಕ್ತವಾಗಿ ಪರಿಹರಿಸಲಾಗುವುದು. ಮಣಿಪುರವು ಸಮುದಾಯಗಳು ಕಾಲಕಾಲಕ್ಕೆ ಸಹಬಾಳ್ವೆ ನಡೆಸಿದ ರಾಜ್ಯ ನಮ್ಮದಾಗಿದೆ ಹೀಗಾಗಿ ಶಾಂತಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ