ನವದೆಹಲಿ,ಜೂ.೧೮- ಕೇಂದ್ರ ಸಚಿವ ಆರ್.ಕೆ ರಂಜನ್ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದ ಬೆನ್ನಲ್ಲೇ ಮತ್ತೆ ತಡರಾತ್ರಿ ಇಂಫಾಲ್‌ನಲ್ಲಿ ಬಿಜೆಪಿ ಮಂಡಲ ಕಚೇರಿ ಮತ್ತು ನಗರದ ಮತ್ತೊಂದು ಪ್ರದೇಶದಲ್ಲಿ ಬೆಳಿಗ್ಗೆ ಗುಂಪೊಂದು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಘಟನೆ ನಡೆದಿದೆ.
ಮಣಿಪುರದಲ್ಲಿ ಬಿಜೆಪಿ ರಾಜಕರಾಣಿಗಳು ಮತ್ತು ಕಚೇರಿ ಹಾಗೂ ನಿವಾಸಗಳನ್ನು ಗುರಿಯಾಗಿಸಿಕೊಂಡು ವಿವಿಧ ಗುಂಪುಗಳು ದಾಳಿ ನಡೆಯುತ್ತಿವೆ. ಮನೆಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದ್ದು ಇಡೀ ಮಣಿಪುರ ಹಿಂಸಾಚಾರಕ್ಕೆ ನಲುಗಿ ಹೋಗಿದೆ.
ಮೈತೈಯ ಮತ್ತು ಕುಕಿ ಸಮುದಾಯಗಳನ್ನು ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಮಣಿಪುರ ಬೆಂಕಿಯಲ್ಲಿ ಬೆಂದು ಹೋಗುವ ವಾತಾವರಣ ನಿರ್ಮಾಣವಾಗಿದೆ.
ಮಣಿಪುರದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಸೇನೆ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದ್ದು ಬಿಜೆಪಿ ಕಚೇರಿಗಳು ಮತ್ತು ಪಕ್ಷದ ಮಣಿಪುರ ಮುಖ್ಯಸ್ಥ ಮತ್ತು ರಾಜ್ಯ ಸಚಿವರ ಮನೆಗಳಿಗೆ ಬೆಂಕಿ ಹಚ್ಚುವ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ.
ವಿದೇಶಾಂಗ ಖಾತೆ ರಾಜ್ಯ ಸಚಿವ ಆರ್ ಕೆ ರಂಜನ್ ಸಿಂಗ್ ಅವರನ್ನು ಗುಂಪೊಂದು ಪ್ರಶ್ನಿಸಿದೆ.ಇಂಫಾಲದ ಪೊರಂಪಾಟ್ ಬಳಿಯ ಬಿಜೆಪಿ ರಾಜ್ಯ ಅಧ್ಯಕ್ಷರ ಮನೆಗೆ ಬೆಂಕಿ ಹಚ್ಚುವ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ.
ಸೇನೆಯ ವಿವಿಧ ತುಕಡಿಗಳು ಮತ್ತು ಕ್ಷಿಪ್ರ ಕಾರ್‍ಯಪಡೆಯ ಸೈನಿಕರು ಬಿಜೆಪಿ ಅಧ್ಯಕ್ಷರ ಮನೆಗೆ ಬಾರಿ ಬಿಗಿ ಭದ್ರತೆ ಒದಗಿಸಿದ್ದಾರೆ. ಅದೇ ಪ್ರದೇಶದಲ್ಲಿ ರಾಜ್ಯ ಬಿಜೆಪಿ ಸಚಿವ ತೊಂಗಂ ಬಿಸ್ವಜಿತ್ ಅವರ ಮನೆಯನ್ನು ಧ್ವಂಸಗೊಳಿಸುತ್ತಿದ್ದ ಸುಮಾರು ೩೦೦ ಜನರ ಗುಂಪನ್ನು ಆರೆಎಫ್ ಸಿಬ್ಬಂದಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪಥಸಂಚಲನ
ಮಣಿಪುರದ ಸಿಂಗ್‌ಜಮೇಯ್ ಪ್ರದೇಶದಲ್ಲಿನ ಬಿಜೆಪಿ ಕಚೇರಿಗೆ ಸಮೂಹ ಘೇರಾವ್ ಹಾಕಿದೆ. ಆದರೆ ಬೇರೆ ಗುಂಪು ಇರೆಂಗ್‌ಬಾಮ್ ಪೊಲೀಸ್ ಠಾಣೆಗೆ ನುಗ್ಗಲು ಪ್ರಯತ್ನಿಸಿತು ಎಂದು ಮೂಲಗಳು ತಿಳಿಸಿವೆ.
ಎರಡೂ ಗುಂಪುಗಳ ಪ್ರಯತ್ನಗಳು ವಿಫಲವಾಗಿವೆ ನಂತರ ಮಣಿಪುರ ರಾಜಧಾನಿಯಲ್ಲಿ ಸೇನೆ, ಅಸ್ಸಾಂ ರೈಫಲ್ಸ್, ಆರೆಎಫ್ ಮತ್ತು ರಾಜ್ಯ ಪೊಲೀಸರು ಜಂಟಿ ಧ್ವಜ ಮೆರವಣಿಗೆ ನಡೆಸಿದರು.
ಗುಂಪು ದಾಳಿಯ ಕುರಿತು ಪ್ರತಿಕ್ರಿಯೆಗಳನ್ನು ನಿರಾಕರಿಸಿದ ಬಿಜೆಪಿ, ರಾಜ್ಯದಲ್ಲಿ ಕೆಲವು ಪಟ್ಟಭದ್ರ ಗುಂಪುಗಳು ರಚಿಸಿರುವ ಸಂಘರ್ಷ ಮತ್ತು ಪಕ್ಷವು ಬಲೆಗೆ ಬೀಳಲು ಬಯಸುವುದಿಲ್ಲ” ಎಂದು ಹೇಳಿದೆ.