
ಬೀದರ,ಆ 8: ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆವಿಧಿಸುವಂತೆ ಪ್ರಜ್ಞಾವಂತ ನಾಗರಿಕರ ವೇದಿಕೆಯಿಂದ ಬೀದರ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಆಧುನಿಕ ದಿನಗಳಲ್ಲಿಮಣಿಪುರದಲ್ಲಿ ಅನಾಗರಿಕ ಪೈಶಾಚಿಕ ಘಟನೆ ನಡೆದಿರುವುದುಭಾರತೀಯರನ್ನು ಆಘಾತಕ್ಕೆ ತಳ್ಳಿದೆ.ದೇಶದಅಂತಃಸಾಕ್ಷಿಯನ್ನು ಕಲಕಿದೆ. ಇನ್ನೂ ಅಘಾತಕಾರಿ ವಿಷಯವೇನೆಂದರೆ ಅಲ್ಲಿನರಾಜ್ಯ ಸರ್ಕಾರವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಆ ಒಂದು ಪುಟ್ಟರಾಜ್ಯದಲ್ಲಿ ಎರಡು ಸಮುದಾಯಗಳ ಮಧ್ಯದ ಜನಾಂಗೀಯಘರ್ಷಣೆ ಮೂರು ತಿಂಗಳುಗಳು ಕಳೆದರೂ ಶಮನಗೊಳಿಸದೆ ಇರುವುದು.
ಈ ಸಂದರ್ಭದಲ್ಲಿ ವಿಶೇಷವಾಗಿ ಮಣಿಪುರದಲ್ಲಿ ನಡೆಯುತ್ತಿರುವ ಆಂತರಿಕ ಕಲಹ
ತಡೆದು ಶಾಂತಿ ಸ್ಥಾಪಿಸಲು ಸರ್ಕಾರ ಕೂಡಲೇ ಪರಿಣಾಮಕಾರಿಯಾದ
ಪರಿಹಾರವನ್ನು ಕಂಡುಕೊಳ್ಳಬೇಕು. ಅದೇ ಸಮಯದಲ್ಲಿಒಟ್ಟಾರೆಯಾಗಿ ಭಾರತದಲ್ಲಿ ದಿನೇದಿನೇ ಹೆಚ್ಚುತ್ತಿರುವಮಹಿಳೆಯರ ಮೇಲಿನ ಹಿಂಸಾಚಾರ ನಿಲ್ಲಿಸುವ ನಿಟ್ಟಿನಲ್ಲಿ
ಸಮಯೋಚಿತವಾದ ಮುಂದಾಲೋಚನೆಯ ತುರ್ತು ಹೆಜ್ಜೆಗಳನ್ನಿಡಬೇಕು ಎಂದು ವೇದಿಕೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಪ್ರಮುಖರು,ಸಂಚಾಲಕ ಓಂಪ್ರಕಾಶ ರೊಟ್ಟೆ,ಸಹ ಸಂಚಾಲಕ ಜನದೀಶ್ವರ ಬಿರಾದರ
ಗೌರವ ಸದಸ್ಯರಾದ ಡಿ. ನೀಜಾಮುದ್ದಿನ್, ಗಂಗಮ್ಮಾ ಪೂಲೆ,ವಿನೋದ ರತ್ನಾಕರ ಅವರು ಸೇರಿದಂತೆ ಹಲವರಿದ್ದರು.