ಮಣಿಪುರ : ನಾಳೆ ೧೧ ಮತಗಟ್ಟೆಗಳಲ್ಲಿ ಮರು ಮತದಾನ

ಇಂಫಾಲ,ಏ.೨೧:ಲೋಕಸಭೆಗೆ ಮೊದಲ ಹಂತದಲ್ಲಿ ನಡೆದ ಮತದಾನದ ವೇಳೆ ಇಂಫಾಲದಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಈ ತಿಂಗಳ ೨೨ ರಂದು ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರದ ೧೧ ಮತಗಟ್ಟೆಗಳಲ್ಲಿ ಮರು ಮತದಾನ ನಡೆಯಲಿದೆ.ಏ. ೧೯ ರಂದು ಈ ಭಾಗದಲ್ಲಿ ನಡೆದ ಚುನಾವಣೆಗಳನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸಿ ಮರುಮತದಾನ ನಡೆಸಲಾಗುತ್ತಿದೆ ಎಂದು ಮಣಿಪುರ ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ.ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಅನುಸರಿಸಿ ಖುರೈ ಕ್ಷೇತ್ರದ ಮೊಯಿರೈಂಗ್ಯಾಂಪು ಸಾಜೆಬ್ ಟೊಂಗಂ ಲೈಕೈ ಕ್ಷೇತ್ರಗಾವೊದಲ್ಲಿ ೪, ಇಂಫಾಲ ಪೂರ್ವ ಜಿಲ್ಲೆಯ ತೊಂಗಜ್ಜುನಲ್ಲಿ ೧ ಮತ್ತು ಉರಿಪೋಕ್‌ನಲ್ಲಿ ೩ ಮತ್ತು ಇಂಫಾಲ ಪಶ್ಚಿಮ ಜಿಲ್ಲೆಯ ಕೊಂತೌeಮ್‌ನಲ್ಲಿ ೧ ಮತಗಟ್ಟೆಗಳು ಬಾಧಿತವಾಗಿವೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.ಮತದಾನ ನಡೆದ ದಿನ ಕೆಲವೊಂದು ಮತಗಟ್ಟೆಗಳಲ್ಲಿ ಗುಂಡಿನ ದಾಳಿ, ಬೆದರಿಕೆ, ಇವಿಎಂಗಳನ್ನು ನಾಶಪಡಿಸಿದ ಘಟನೆಗಳು ನಡೆದಿದ್ದವು. ಅಲ್ಲದೆ ಬೂತ್ ವಶಪಡಿಸಿಕೊಂಡ ಆರೋಪಗಳು ಹಿಂಸಾಚಾರ ಪೀಡಿತ ಮಣಿಪುರದಲ್ಲಿ ನಡೆದಿತ್ತು.ಕಾಂಗ್ರೆಸ್ ಕೂಡ ಹಿಂಸಾಚಾರ ನಡೆದ ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವಂತೆ ಒತ್ತಾಯಿಸಿತ್ತು. ಹೀಗಾಗಿ ಏ. ೨೨ ರಂದು ೧೧ ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.