ಮಣಿಪುರ ಘಟನೆ ಖಂಡಿಸಿ ಸಹಿ ಸಂಗ್ರಹ

(ಸಂಜೆವಾಣಿ ವಾರ್ತೆ)
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾ ಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಕೇಂದ್ರ ಹಾಗೂ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಇವರ ವತಿಯಿಂದ ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ವಿರೋಧಿಸಿ ಸಹಿ ಸಂಗ್ರಹ ಚಳುವಳಿಯನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುವ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಈ ಚಳುವಳಿಯಲ್ಲಿ ವಿವಿಯ ಕುಲಸಚಿವ ಪೆÇ್ರ. ಬಿ. ಎಸ್. ನಾವಿ, ಸಮಾಜ ವಿಜ್ಞಾನ ನಿಕಾಯದ ಡೀನ್ ಪೆÇ್ರ. ಶಾಂತಾದೇವಿ ಟಿ. ಶಿಕ್ಷಣ ನಿಕಾಯದ ಡೀನ್ ಪೆÇ್ರ. ರಾಜಕುಮಾರ ಮಾಲೀಪಾಟೀಲ, ಉಪಕುಲಸಚಿವ ಡಾ. ದೀಪಕ ಶಿಂದೆ, ಸಹಾಯಕ ಪ್ರಾಧ್ಯಾಪಕಿ ಡಾ. ಸವಿತಾ ಹುಲಿಮನಿ, ಕ್ರೀಡಾ ವಿಭಾಗದ ನಿರ್ದೇಶಕ ಡಾ. ಸಕ್ಪಾಲ್ ಹೂವಣ್ಣ, ಮಹಿಳಾ ಅಧ್ಯಯನ ವಿಭಗದ ಪ್ರಾಧ್ಯಾಪಕಿ ಪೆÇ್ರ. ಲಕ್ಷ್ಮೀದೇವಿ ವೈ. ಸಮಾಜ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎಂ.ಪಿ. ಬಳಗಾರ, ವಿವಿಯ ವಿವಿಧ ವಿಭಾಗಗಳ ಭೋದಕ ಮತ್ತು ಭೋದಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ಮತ್ತು ಸ್ನಾತಕೋತ್ತರ ವಿಧ್ಯಾರ್ಥಿನಿಯರು ಉಪಸ್ಥಿತರಿದ್ದರು.