ಮಣಿಪುರ ಘಟನೆ ಖಂಡಿಸಿ ಮೌನ ಪ್ರತಿಭಟನೆ

ಕೆಜಿಎಫ್,ಆ.೧೩- ಮಣಿಪುರ ರಾಜ್ಯದಲ್ಲಿ ಕಳೆದ ೧೦೦ ದಿನಗಳಿಂದ ನಡೆಯುತ್ತಿರುವ ಹಿಂಸಚಾರವನ್ನು ಖಂಡಿಸಿ ಮಣಿಪುರ ರಾಜ್ಯದ ಕುಕ್ಕಿ ಸಮುದಾಯದೊಂದಿಗೆ ನಾವು ಇದ್ದೇವೆ ಎಂಬ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಕೆಜಿಎಫ್ ವಿವಿದ ಚರ್ಚ್‌ಗಳ ಏರಿಯಾ ಕೌಂಸಿಲ್ ಮತ್ತು ಮಹಿಳೆಯರು ಮಾರಿಕುಪ್ಪಂ ಗುಡ್ ಶೆಪರ್ಡ್ ಚರ್ಚ್‌ನಿಂದ ಮೈಸೂರು ಹಾಲ್ ವರೆಗೆ ಮೌನ ಪ್ರತಿಭಟನೆ ನಡೆಸಿದರು.
ಈವೇಳೆ ಮಾತನಾಡಿದ ಮಣಿಪುರ ರಾಜ್ಯದಿಂದ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಹೋರಾಟಗಾರರಾದ ಕಿಮ್ ಕಳೆದ ೧೦೦ ದಿನಗಳಿಂದ ಕುಕ್ಕಿ ಸಮುದಾಯದ ಮೇಲೆ ನಿಲ್ಲದೆ ಅತ್ಯಚಾರ ದೌರ್ಜನ್ಯಗಳು ನಡೆಯುತ್ತಿದೆ ಆದರೆ ಅಲ್ಲಿನ ಆಡಳಿತವು ಶಾಂತಿ ಮೂಡಿಸುವ ಕೆಲಸವನ್ನು ಇಂದಿಗೂ ಮಾಡಿಲ್ಲ ನಾವು ತಲಾತಲಾಂತರದಿಂದ ಮಣಿಪುರ ರಾಜ್ಯದಲ್ಲಿ ಬದುಕಿ ಬಾಳುತ್ತಿದ್ದೇವೆ ನಾವು ಸಹ ಭಾರತ ದೇಶದ ಪ್ರಜೆಗಳಾಗದ್ದೇವೆ ಆದರೆ ಕೆಲವರು ತಪ್ಪು ಭಾವನೆಯಿಂದ ನಮ್ಮನ್ನು ಹೊರ ದೇಶದವರು ಎಂದು ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ ನಮ್ಮ ಸಮುದಾಯದ ನೆರವಿಗೆ ದೇಶದ ಪ್ರತಿಯೋಬ್ಬ ಪ್ರಜೆಯು ಆಗಮಿಸಬೇಕು ಎಂದು ಮನವಿ ಮಾಡಿದರು.
ಮೌನ ಪ್ರತಿಭಟನೆಯಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು.