ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.26: ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ತೆಕ್ಕಲಕೋಟೆ ಪಟ್ಟಣದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮಹಿಳೆಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಕರ್ನಾಟಕ ದಲಿತ ರಕ್ಷಣಾ ವೆದಿಕೆ ಸಂಘಟನೆ ವತಿಯಿಂದ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಪರಶುರಾಮ ಇವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮಣಿಪುರದಲ್ಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ದಲಿತ ಬುಡಕಟ್ಟು ಮಹಿಳೆಯರ ಮೇಲೆ ಸಮೂಹಿಕ ಅತ್ಯಚಾರ ಮಾಡಿ ಬೆತ್ತಲೆಮಾಡಿದಂತಹ ಎಲ್ಲಾ ಆರೋಪಿಗಳಿಗೆ ಮರಣದಂಡನೆ ವಿಧಿಸಿ ಅವರ ಆಸ್ತಿ-ಪಾಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಅಲ್ಲಿನ ಎಸ್.ಪಿ ಯನ್ನು ಅಮಾನತ್ತುಗೊಳ್ಳಿಸಬೇಕು ಹಾಗೂ ಬೆತ್ತಲಕ್ಕೆ ಒಳಗಾದ ಮಹಿಳೆಯ ಪತಿಯ ಕಾರ್ಗಿಲ್ ಯೋದ ಸೈನಿಕ ದೇಶ ರಕ್ಷಣೆ ಮಾಡಿದ್ದೆನೆ. ನನಗೆ ನನ್ನ ಧರ್ಮಪತ್ನಿಯನ್ನು ರಕ್ಷಿಸಲಾಗಲಿಲ್ಲವಲ್ಲ ಎಂದು ಯೋಧ ನೋವಿನ ಕಣ್ಣೀರು ಹಾಕಿರುತ್ತಾರೆ. ಅದ್ದರಿಂದ ದಲಿತ ಬುಡಕಟ್ಟು ಆದಿವಾಸಿ ಮಹಿಳೆಯರು ಅನುಭವಿಸಿದ ನರಕಯಾತನೆ ಅವಮಾನಕ್ಕೆ ಎಲ್ಲಾ ಆರೋಪಿಗಳಗೆ ತಕ್ಕ ಶಿಕ್ಷೆ ಕೂಡಲೇ ಬೇಕು, ಪತ್ತೆಹಚ್ಚಿ ಬಂಧಿಸಿ ಅವರಿಗೆ ಮರಣದಂಡನೆ ವಿಧಿಸಿ ಹಾಗೂ ಅವರ ಆಸ್ತಿ ಪಾಸ್ತಿಯನ್ನು ಸರ್ಕಾರ ಕೂಡಲೇ ವಶಕ್ಕೆ ತೆಗೆದುಕೊಳ್ಳಬೇಕು ಹಾಗೂ ದಲಿತ ಮಹಿಳೆಯರ ಅನ್ಯಾಯಕ್ಕೆ ಒಳಗಾದಂತಹ ಅವರಿಗೆ ಸರ್ಕಾರಿ ಉದ್ಯೋಗ ನೀಡಿ ಅನುಕೂಲ ಮಾಡಿಕೊಡಬೇಕು ಹಾಗೂ ಅವರಿಗೆ ಸೂಕ್ತ ರಕ್ಷಣೆಯನ್ನು ನೀಡಿ ಘಟನೆ ನಡೆದ ಆಯಾ ಜಿಲ್ಲೆಯ ಎಸ್.ಪಿಗಳನ್ನು ಈ ಕೂಡಲೇ ಅಮಾನತ್ತುಗೊಳ್ಳಿಸಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಅಧ್ಯಕ್ಷ ಮಧುರಾಜ.ಬಿ ಗೋನಾಳ ತಿಳಿಸಿದರು.
ಕಾರ್ಯದರ್ಶಿ ಕೆ. ಶಂಕರ್, ನಂದಿಹಾಳ ಗ್ರಾಮ ಘಟಕದ ಅಧ್ಯಕ್ಷ ಮಲ್ಲಯ್ಯ, ಗಾದಿಲಿಂಗಮ್ಮ, ಮೀನಾಕ್ಷಮ್ಮ, ಓಬಮ್ಮ ,ಗುರಮ್ಮ ,ಮಾಳಮ್ಮ, ಕಂಠೇಶ, ಲಿಂಗಪ್ಪ, ಮಲ್ಲಿಕಾರ್ಜುನ, ಸಿ ದುರುಗಪ್ಪ ಇದ್ದರು.