ಮಣಿಪುರ ಘಟನೆ ಆರೋಪಿಗಳ ಮರಣ ದಂಡನೆಗೆ ಆಗ್ರಹ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.25: ಮಣಿಪುರ ಹಾಗೂ ಪಶ್ಚಿಮ ಬಂಗಾಳದಲ್ಲಿ ದಲಿತ ಬುಡಕಟ್ಟು ಮಹಿಳೆಯರ ಮೇಲೆ ಬರತ್ತಲೆ ಮೆರವಣಿಗೆ ಮಾಡಿ,  ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಮರಣದಂಡನೆ ವಿಧಿಸಿ ಅವರ ಆಸ್ತಿ ಪಾಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡು.  ಅಲ್ಲಿನ ಎಸ್ ಪಿ ಗಳನ್ನು ಅಮಾನತು ಮಾಡುವಂತೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಷ್ಟ್ರಪತಿಗಳಿಗೆ ಒತ್ತಾಯಿಸಿ ಮನವಿ ಮಾಡಿದೆ.
ಈ ಕುರಿತು ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಶಂಕರ್ ನಂದಿಹಾಳ್ ನೇತೃತ್ವದಲ್ಲಿ ಜಿಲ್ಲೆಯ ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಮೂಲಕ ಸಲ್ಲಿಸಲಾಯ್ತು.
ಮಣಿಪುರದಲ್ಲಿ ಇಬ್ಬರು ದಲಿತ ಬುಡಕಟ್ಟು ಮಹಿಳೆಯರನ್ನು  ಅಮನುಷ್ಯವಾಗಿ ಅವರ ಮೇಲೆ ಬಲವಂತವಾಗಿ ದೇಶ ದ್ರೋಹಿ ಗುಂಪನ್ನು ಕಟ್ಟಿಕೊಂಡು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ನಂತರ ಮಹಿಳೆಯರ ಬಟ್ಟೆಗಳನ್ನು ಬಿಚ್ಚಿ ಬತ್ತಲೆ ಮೆರವಣಿಗೆ ಮಾಡಿದಂತಹ ಹೆಯ  ಕೃತ್ಯದ ಬೆನ್ನಹಿಂದೆಯೇ ‌  ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಇಬ್ಬರು ದಲಿತ ಬುಡಕಟ್ಟು ಮಹಿಳೆಯರ ಮೇಲೆ ದೌರ್ಜನ್ಯದಿಂದ ಹಲ್ಲೆ ನಡೆಸಿ ಮಹಿಳೆಯರ ಬಟ್ಟೆಗಳು ಹರಿದು ಹಾಕಿದ ನಂತರ ಸಾರ್ವಜನಿಕ ಜನಸಂಧಣಿ  ಸ್ಥಳದಲ್ಲಿ ಬತ್ತಲೆ ಮೆರವಣಿಗೆ ಮಾಡಿದಂತಹ ಆರೋಪಿಗಳು ನೊಂದ ಅತ್ಯಾಚಾರ ಒಳಗೊಂಡ ಮಹಿಳೆಯರು ನಮ್ಮ ಬಟ್ಟೆಗಳನ್ನು ಬಿಚ್ಚಬೇಡಿ ಎಂದು ಅವರ ಕೈಕಲು ಹಿಡಿದು ಬೇಡಿಕೊಂಡರು ಸಹ ಮಾನವೀಯತೆ ತೋರಲಾರದೆ ಇದ್ದು ಅಂತಹ ಹೆಯ ಕೃತ್ಯ ಎಸಗಿರುವುದರಿಂದ ಭಾರತ ದೇಶದ 140 ಕೋಟಿ ನಾಗರಿಕರು ತಲೆತಗ್ಗಿಸುವಂತಹುದಾಗಿದೆ.
ಬೆತ್ತಲಕ್ಕೆ ಒಳಗಾದ ಮಹಿಳೆಯ ಪತಿ ಕಾರ್ಗಿಲ್ ಯೋಧ ಸೈನಿಕ ದೇಶ ರಕ್ಷಣೆ ಮಾಡಿದ್ದೇನೆ ನನಗೆ ನನ್ನ ಧರ್ಮ ಪತ್ನಿಯನ್ನು  ರಕ್ಷಿಸಲಾಗಲಿಲ್ಲವಲ್ಲವೇ ಎಂದು ಯೋಧನ ನೊಂದ ಕಣ್ಣೀರು ಹಾಕಿರುತ್ತಾರೆ. ದಲಿತ ಬುಡಕಟ್ಟು ಆದಿವಾಸಿ ಮಹಿಳೆಯರ ಅನುಭವಿಸಿದ ನರಕಯಾತನೆ ಅವಮಾನಕ್ಕೆ ಎಲ್ಲಾ ಆರೋಪಿಗಳಿಗೆ ತಕ್ಕ ಶಿಕ್ಷೆ ಕೊಡಲೇ ಪತ್ತೆ ಹಚ್ಚಿ ಬಂಧಿಸಿ ಅವರಿಗೆ ಮರಣದಂಡನೆ ವಿಧಿಸಿ ಹಾಗು ದಲಿತ ಮಹಿಳೆಯರ ಅನ್ಯಾಯಕ್ಕೆ ಒಳಗಾದಂತ ಅವರಿಗೆ ಸರ್ಕಾರಿ ಉದ್ಯೋಗ ನೀಡಿ ಅನುಕೂಲ ಮಾಡಿಕೊಡಬೇಕು ಹಾಗೂ ಅವರಿಗೆ ಸೂಕ್ತ ರಕ್ಷಣೆಯನ್ನು ನೀಡಿ ಘಟನೆ ನಡೆದ ಆಯಾ ಜಿಲ್ಲೆಯ ಎಸ್ಪಿ ಗಳನ್ನು ಕೂಡಲೇ ಅಮಾನತುಗೊಳಿಸಬೇಕೆಂದು  ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಮಲ್ಲಯ್ಯ ತಕ್ಕಲಕೋಟೆ, ಲಕ್ಷ್ಮಿಕಾಂತ ಸುಗ್ಗನಹಳ್ಳಿ,  ಮಧುರಾಜ್ ಬಿ.ಗೋನಾಳ್,  ಸಿ.ಕಂಟೇಶ್,   ಲಿಂಗಪ್ಪ ತೆಕ್ಕಲಕೋಟೆ, ಸಿ.ದುರ್ಗಪ್ಪ ಕಾರ್ಯದರ್ಶಿ, ಸಿ.ಶೇಖಣ್ಣ ಮೊದಲಾದವರು ಇದ್ದರು.