ಮಣಿಪುರ ಘಟನೆಯ ವಿರುದ್ಧ ಕ್ರೈಸ್ತರಿಂದ ಪ್ರತಿಭಟನೆ

ಮಾನ್ವಿ ಆ ೦೩ :- ಮಣಿಪುರ ರಾಜ್ಯದಲ್ಲಿ ಕ್ರೈಸ್ತ ಮಹಿಳೆಯನ್ನು ಬಹಿರಂಗವಾಗಿ ದೌರ್ಜನ್ಯ ಮಾಡಿದ ಅತ್ಯಾಚಾರಿಗಳನ್ನ ಕೂಡಲೇ ಬಂಧಿಸಬೇಕು ಹಾಗೂ ಅಲ್ಲಿನ ಚರ್ಚೆಗಳಿಗೆ ಹಾಗೂ ಕ್ರೈಸ್ತರಿಗೆ ಭದ್ರತೆಯನ್ನು ನೀಡುವಂತೆ ಜೀವವುಳ್ಳ ಕ್ರೈಸ್ತ ಸಂಘದವರು ತಾಲೂಕ ದಂಡಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು..
ಪಟ್ಟಣದ ಬಸವ ವೃತ್ತದಿಂದ ಕಾಲ್ನಡಿಗೆ ಮೂಲಕ ತಹಸೀಲ್ದಾರ್ ಕಛೇರಿಯವರೆಗೆ ಆಗಮಿಸಿದ ಅವರು ಮನವಿ ಪತ್ರ ಸಲ್ಲಿಸಿ ನಂತರ ವೆಂಕಣ್ಣ ಫಾಸ್ಟರ್ ಮಾತನಾಡಿ ದೇಶದ ಮಣಿಪುರ ರಾಜ್ಯದಲ್ಲಿ ಇತ್ತೀಚಿಗೆ ಬುಡಕಟ್ಟು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮಾನಹಾನಿ ಮಾಡಿದಲ್ಲದೆ ಚರ್ಚೆಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ ಆದ್ದರಿಂದ ಅಲ್ಲಿನ ಬುಡಕಟ್ಟು ನಾಗ,ಕೂಕಿ ಸಮುದಾಯಗಳ ಜನರ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಮಾನೆ ಕಳೆದು ಕೊಂಡ ನಿರಾಶ್ರಿತರಾದವರಿಗೆ ಮನೆಗಳನ್ನು ನಿರ್ಮಿಸಿ ಕೊಡಬೇಕು ಹಾಗೂ ಕ್ರೈಸ್ತರಿಗೆ ಹಾಗೂ ಚರ್ಚೆಗಳಿಗೆ ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಇಮಾನವಾಲ್ ಪಾಸ್ಟರ್, ಅಂಜಪ್ಪ ಮೇಸ್ತ್ರಿ,ವಿರೇಶ, ಹನುಮಂತ, ಶರಣಪ್ಪ, ರಮೇಶ, ರಾಮಣ್ಣ, ಮಲ್ಲೇಶ, ಹುಲಗಪ್ಪ, ಲಕ್ಷ್ಮೀ, ಹನುಮಂತ ಕೋಟೆ, ಬಸವರಾಜ ಬಾಗಲವಾಡ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದರು.