ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.30: ತಾಲೂಕಿನ ದಲಿತ ಒಕ್ಕೂಟಗಳ ತಾ.ಘಟಕದ ಪದಾಧಿಕಾರಿಗಳು ಮಣಿಪುರ ರಾಜ್ಯದ ಕಾಂಗ್‌ಗೋಷ್ಟಿ ಜಿಲ್ಲೆಯ ಕುಕಿ (ಬುಡಕಟ್ಟು) ಸಮುದಾಯದ ಇಬ್ಬರು ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರವೆಸಗಿ ಬೆತ್ತಲೆ ಮೆರವಣಿಗೆ ಮಾಡಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿದರು.
ದಲಿತ ಮುಖಂಡ ಹೆಚ್.ಬಿ.ಗಂಗಪ್ಪ ಮಾತನಾಡಿ ಮಣಿಪುರ ರಾಜ್ಯದಲ್ಲಿ ದಲಿತರು ಶೋಷಿತರಾದ ಕುಕಿ (ಬುಡಕಟ್ಟು) ಜನಾಂಗದವರು ಬದುಕಲು ಆಗದಂತಹ ಪರಿಸ್ಥಿತಿ ಬಂದೊದಗಿದೆ. ಮಣಿಪುರದಲ್ಲಿ ನಡೆದ ಘಟನೆಯು ಅತ್ಯಂತ ಹೇಯಕೃತ್ಯವಾಗಿದ್ದು, ನಮ್ಮ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕು 75ವರ್ಷಗಳು ಗತಿಸಿದರು ದಲಿತರ ಮೇಲೆ ಅತ್ಯಚಾರ, ಕೊಲೆ, ಸುಲಿಗೆ, ಶೋಷಣೆ ನಿಂತಿಲ್ಲ, ಇದು ನಾಚಿಕೆಗೇಡಿನ ಸಂಗತಿಯಾಗಿದೆ.
ಮಣಿಪುರ ರಾಜ್ಯದಲ್ಲಿ ಮಹಿಳೆಯರ ಮೇಲೆ ಹಿಂಸಾಚಾರ ವೆಸಗಿ ಸುಮಾರು ದಿನಗಳಾದರೂ ಪ್ರಧಾನಮಂತ್ರಿಯವರು ಮೌನಕ್ಕೆ ಶರಣಾಗಿರುವುದು ಯುವಕರು ಗುಂಪುಕಟ್ಟಿಕೊಂಡು ಕಾಂಗ್‌ಗೋಷ್ಟಿ ಜಿಲ್ಲೆಯ ಗ್ರ‍್ರಾಮವೊಂದಕ್ಕೆ ಬಂದು ಬೆಂಕಿ ಹಚ್ಚಿ ಮನೆಯಲ್ಲಿದ್ದವರ ಮೇಲೆ ಲೈಗಿಂಕ ದೌರ್ಜನ್ಯ ನಡೆಸಿರುವ ಘಟನೆ ಖಂಡನೀಯವಾಗಿದೆ.
ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಪತಿ ಬಾರತೀಯ ಸೇನೆಯ ಯೋಧನಾಗಿದ್ದು, ಕಾರ್ಗಿಲ್ ಯುದ್ದದಲ್ಲಿ ಭಾಗಿಯಾಗಿದ್ದಾರೆ. ದೇಶವನ್ನು ರಕ್ಷಿಸಿದರು, ತನ್ನ ಹೆಂಡತಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂಬ ಮಾತನ್ನು ಸಾರ್ವಜನಿಕರ ಮುಂದೆ ಸೈನಿಕರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅಲ್ಲಿನ ರಾಜ್ಯ ಸರ್ಕಾರವನ್ನು ವಜಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕು. ಈ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ಸಂತ್ರಸ್ಥ ಮಹಿಳೆಯರಿಗೆ ನ್ಯಾಯ ಒದಗಿಸಲು ರಾಷ್ಟ್ರಪತಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ದಲಿತ ಮುಖಂಡರಾದ ಎಂ.ದೊಡ್ಡಬಸಪ್ಪ, ಕೊಡ್ಲೆ ಮಲ್ಲಿಕಾರ್ಜುನ, ಹೆಚ್.ಬೀಮೇಶ, ಎಸ್.ವೀರೇಶ, ಎಸ್.ರಫಿ, ಹೆಚ್.ವೀರೇಶ, ಬಿ.ಹನುಮೇಶ, ನಾಗಪ್ಪ, ದುರುಗಪ್ಪ, ಸುರೇಶ್, ಮುನಿಸ್ವಾಮಿ, ಲಕ್ಷö್ಮಣ ಬಂಢಾರಿ, ಶರಣರಾಜ್, ಪಕ್ಕೀರಪ್ಪ, ನಾಗೇಶ್ವರರಾವ್, ಶೇಕಣ್ಣ, ವೀರೇಶ ದಳವಾಯಿ, ಹನುಮಂತ ಇನ್ನಿತರರು ಇದ್ದರು