ಮಣಿಪುರ: ಕ್ರೈಸ್ತರಿಗೆ ರಕ್ಷಣೆ ಒದಗಿಸಲು ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ,ಜು26: ಮಣಿಪುರ ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ದೌರ್ಜನ್ಯಗಳ ಕುರಿತಂತೆ ಅಲ್ಲಿನ ಕ್ರೈಸ್ತರಿಗೆ ಸರ್ಕಾರ ರಕ್ಷಣೆ ಮತ್ತು ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಯುನೈಟೆಡ್ ಧಾರವಾಡ ಡಿಸ್ಟಿಕ್ ಕ್ರಿಶ್ಚಿಯನ್ ಫಾಸ್ಟರ್ಸ್ ಆ್ಯಂಡ್ ಲೀಡರ್ಸ್ ಅಲೈನ್ಸ್ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆನಡೆಸಲಾಯಿತು.
ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಪಾಲಿಕೆ ರಸ್ತೆಯ ಮುಖಾಂತರ ಹುಬ್ಬಳ್ಳಿ ತಹಶಿಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಮಣಿಪುರ ಹಿಂಸಾಚಾರ ಕುರಿತು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸೂಕ್ತ ಕಾನೂನು ಕ್ರಮ ಯಾಕೆ ತಗೆದುಕೊಳ್ಳುತ್ತಿಲ್ಲ. ಸ್ತ್ರೀಯರ ವಿರುದ್ಧ ಅಪರಾಧಗಳು ನಿಲ್ಲಬೇಕು. ಕ್ರೈಸ್ತರ ಮೇಲಿನ ಹಲ್ಲೆ ಖಂಡನೀಯವಾಗಿದ್ದು, ಮಣಿಪುರ ಘಟನೆಯನ್ನು ಇಡೀ ದೇಶವೇ ಖಂಡಿಸುತ್ತದೆ. ಈ ನಿಟ್ಟಿನಲ್ಲಿ ಕ್ರೈಸ್ತರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಪತ್ರದ ಮುಖಾಂತರ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಹು-ಧಾ ಪಾಲಿಕೆ ಸದಸ್ಯ ದೊರಾಜ್ ಮನ್ನೆಕುಂಟ್ಲಾ, ಸುಧಾ ಮನ್ನೆಕುಂಟ್ಲಾ, ಮುಖಂಡರಾದ ಸುನೀಲ್ ಮಹಡೆ, ಕ್ರೈಸ್ತ ಸಮುದಾಯದ ಜಿಲ್ಲಾ ಅಧ್ಯಕ್ಷರಾದ ಶೆಟ್ರಾಕ್, ಸೇರಿದಂತೆ ನೂರಾರು ಕ್ರೈಸ್ತ ಸಮುದಾಯದವರು ಭಾಗಿಯಾಗಿದ್ದರು.