ರಾಯಚೂರು,ಜು.೨೪:
ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಮಹಿಳೆ ಯರ ಬೆತ್ತಲೆ ಮೆರವಣಿಗೆ ಹಾಗೂ ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳನ್ನು ಎನ್‌ಕೌಂಟರ್ ಮಾಡುವ ಮೂಲಕ ಇಂತಹ ದುಷ್ಕೃತ್ಯ ನಡೆಯದಂತೆ ತಡೆಯುವ ಕಠಿಣ ನಿರ್ಧಾರ ಕೇಂದ್ರ ಸರ್ಕಾರ ಕೈಗೊಳ್ಳಬೇಕೆಂದು ಮಹಾಶಕ್ತಿ ಮಹಿಳಾ ಸಬಲೀಕರಣ ಸಮಿತಿ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ವಿಜಯರಾಣಿ ಒತ್ತಾಯಿಸಿದ್ದಾರೆ.
ದೇಶವೇ ತಲೆ ತಗ್ಗಿಸುವ ರೀತಿ ಯಲ್ಲಿ ಈ ದುಷ್ಕೃತ್ಯ ಎಸಗಲಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿದ ವಿಡಿಯೋ ಒಂದು ಈಗ ಬಹಿರಂಗಗೊಂಡಿದೆ. ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಅತ್ಯಾಚಾರಿ, ಕೊಲೆ ಪ್ರಕರಣ ಆರೋಪಿಗಳು ಯಾರು ಎನ್ನುವುದು ಸ್ಪಷ್ಟಗೊಂಡಿದೆ.
ಮಹಿಳೆಯರೊಂದಿಗೆ ಅಮಾನ ವೀಯ ರೀತಿಯಲ್ಲಿ ವರ್ತಿಸಿದ ಕ್ರೂರಿ ಆರೋಪಿಗಳನ್ನು ತಕ್ಷಣವೇ ಎನ್‌ಕೌಂಟರ್ ಮಾಡುವ ಮೂಲಕ ದೇಶದಲ್ಲಿ ಇಂಥ ಕೃತ್ಯಗಳು ಮತ್ತೆ ನಡೆಯದಂತೆ ಕೇಂದ್ರ ಸರ್ಕಾರ ಸಂದೇಶ ಸಾರುವ ಅಗತ್ಯವಿದೆ. ಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಮಣಿಪುರ್‌ನಲ್ಲಿ ಬುಡಕಟ್ಟು ಜನಾಂಗದ ಮಹಿಳೆಯರ ಮೇಲೆ ನಡೆದಂತ ಅಮಾನವೀಯ ಕೃತ್ಯ ಅತ್ಯಂತ ಶೋಚನೀಯವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಕೇಂದ್ರ ಸರ್ಕಾರಕ್ಕೆ ಆರೋಪಿಗಳನ್ನು ಎನ್ ಕೌಂರ್ಟ ಶಿಕ್ಷೆ ಗುರಿಮಾಡಯವಂತೆ ಆದೇಶಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಮಣಿರ್ಪು ಈ ಕೃತ್ಯ ಅತ್ಯಂತ ಖಂಡನೀಯವಾಗಿದ್ದು, ನಾಗರಿಕ ಮತ್ತು ಸಭ್ಯ ಸಮಾಜದಲ್ಲಿ ಇಂತಹ ಕೃತ್ಯಗಳು ಮಹಿಳಾ ಸಬಲೀಕರಣ ಮತ್ತು ಸ್ವಾತಂತ್ರ್ಯಕ್ಕೆ ಅಪಾಯಕಾರಿ ದೇಶದ ರಾಷ್ಟ್ರಪತಿಗಳು ಬುಡ ಯಾಗಿದೆ ಎಂದರು.