ಮಣಿಪುರ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹ

ಬೇತಮಂಗಲ.ಜು೨೯: ಮಣಿಪೂರ ದಲ್ಲಿ ನಡೆದಿರುವ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರವನ್ನು ಖಂಡಿಸಿ ಅಖಿಲ ಕರ್ನಾಟಕ ಅಂಬೇಡ್ಕರ್ ವೇದಿಕೆ ಹಾಗೂ ವಿವಿಧ ದಲಿತ ಪರ ಸಂಘಟನೆಗಳು ಬೇತಮಂಗಲ ಬಸ್ ನಿಲ್ಧಾಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ದಲಿತ ಮಹಿಳೆಯರು, ಯುವಕರು ಜಮಾಯಿಸಿ ಯುವಕರು ಶರ್ಟ್ ಬಿಚ್ಚಿ ಬೆತ್ತಲೆ ಪ್ರತಿಭಟನೆ ನಡೆಸಿ, ಮಣಿಪುರದಲ್ಲಿ ಓರ್ವ ಭಾರತೀಯ ಸೇನೆಯ ಪತ್ನಿಯನ್ನು ಸಹ ಬೆತ್ತಲೆ ಮಾಡಿ ಅತ್ಯಾಚಾರ ಮಾಡಿರುವುದು ಶೋಚನೀಯ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ವೇಳೆ ಸಾಮಾಜಿಕ ಯುವ ಹೋರಾಟಗಾರ ಜೈ ಭೀಮ್ ಶ್ರೀನಿವಾಸ್ ಮಾತನಾಡಿ, ಮಣೀಪುರ ಘಟನೆ ಇಡೀ ದೇಶವೇ ತಲೆ ತಗ್ಗಿಸುವ ಮತ್ತು ನಾಚಿಕೆಗೇಡಿನ ವಿಷಯವಾಗಿದೆ. ಹೆಣ್ಣನ್ನು ಭಾರತ ಮಾತೆ ಅನ್ನುತ್ತೇವೆ ಆದರೆ ಬೆತ್ತಲೆ ಮಾಡಿ ಅತ್ಯಾಚಾರ ಮಾಡಿರುವುದು ಖಂಡನೀಯ ಕೂಡಲೇ ಆರೋಪಿಗಳಿಗೆ ಗಲ್ಲು ಶಿಕ್ಷೆ ಹಾಕಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಾಸ್ತಿಕ್ ಶ್ರೀನಾಥ್ ಮಾತನಾಡಿ, ಪ್ರಧಾನಿ ಮೋದಿ ವಿಶ್ವ ಮೆಚ್ಚಿದ ನಾಯಕ ಎನ್ನುತ್ತಾರೆ. ಆದರೆ ಈ ಪ್ರಕರಣವು ನಡೆದು ೨ ತಿಂಗಳು ಕಳೆದರೂ ಏಕೆ ಖಠಿನ ಕ್ರಮ ಕೈಗೊಳ್ಳುತ್ತಿಲ್ಲ. ಈ ಅತ್ಯಾಚಾರಿಗಳು ಬಿಜೆಪಿ, ಆರ್‌ಎಸ್‌ಎಸ್ ಅವರೇ ಎಂದು ಮೀನಾಮೇಷ ಎನಿಸುತ್ತಿದ್ದಾರೆಯೇ ಎಂದು ದೂರಿದರು.
ಈ ಕೂಡಲೇ ಆರೋಪಿಗಳಿಗೆ ಕಠಿನ ಶಿಕ್ಷೆ ಒದಗಿಸದಿದ್ದರೆ. ದೇಶಾದ್ಯಾಂತ ದಲಿತ ಸಂಘಟನೆಗಳು ಉಗ್ರವಾದ ಪ್ರತಿಭಟನೆಗಳು ನಡೆಸುತ್ತವೆ ಎಂದು ಈ ಮೂಲಕ ಎಚ್ಚರಿಕೆ ನೀಡಿದರು.ಕಂದಾಯ ಅಧಿಕಾರಿ ಮುನಿವೆಂಕಟಸ್ವಾಮಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಕೂಡಗಲ್ಲು ಬಾಬು, ಭಟ್ರಕುಪ್ಪ ಅರುಣ್, ಆಕೀಬ್, ಅಂಬರೀಶ್, ಸುರೇಶ, ಮಂಜು, ಅಶ್ವಥ, ಸಂಜು, ಶಿವ, ಲವ ಹಾಗೂ ಹಲವಾರು ದಲಿತ ಕಾರ್‍ಯಕರ್ತರು ಉಪಸ್ಥಿತರಿದ್ದರು.