ಮಣಿಪುರದ ಘಟನೆ ಖಂಡಸಿ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ: ಮೂವರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿ, ದೈಹಿಕ ಹಲ್ಲೆ‌ಮಾಡುತ್ತ, ಗುಂಪು ಅತ್ಯಾಚಾರ ಎಸಗಿರುವ ಮಣಿಪುರದ ಅತ್ಯಂತ ಹೇಯವಾದ ಪಾತಕಿ ಘಟನೆಯನ್ನು ಉಗ್ರವಾಗಿ ಖಂಡಿಸಿ ಪತ್ರಿಭಟನೆ ನಡೆಸಲಾಯಿತು.
ನಗರದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಮಣಿಪುರದ ಘಟನೆ‌ ಖಂಡಿಸಿ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.
ಇದು ಎಪ್ಪತ್ತೈದು ದಿನಗಳ ಹಿಂದೆ ನಡೆದಿದ್ದು ಈಗ ಬೆಳಕಿಗೆ ಬರುತ್ತಿದೆ.  ಅದೇ ಸಮಯದಲ್ಲಿ ಇದರ ಬಗ್ಗೆ ಲಕ್ಷ್ಯ ವೇ ಇಲ್ಲದೆ,  “ರೋಮ್ ನಗರ  ಉರಿಯುತ್ತಿದ್ದಾಗ ನೀರೋ ಚಕ್ರವರ್ತಿ ಪಿಟೀಲು ನುಡಿಸುತ್ತಿದ್ದ” ಎಂಬಂತೆ ಪ್ರಧಾನಿಗಳು ಮತ್ತು ಕೇಂದ್ರ ಗೃಹ ಸಚಿವರು ಕರ್ನಾಟಕದ ಚುನಾವಣೆಯಲ್ಲಿ ಅಬ್ಬರದ ಪ್ರಚಾರದಲ್ಲಿ ಮುಳುಗಿದ್ದರು. ಈ ಘಟನೆ ಭಾರತದ ಅಂತಸ್ಸಾಕ್ಷಿಯನ್ನು ತೀವ್ರವಾಗಿ ಕಲಕಿದೆ, ಮಣಿಪುರ ಹೊತ್ತಿ ಉರಿಯುತ್ತಿರುವಾಗಲೂ ಇದುವರೆಗೂ ಪ್ರಧಾನಮಂತ್ರಿಗಳು ಈ ವಿಷಯದ ಕಾರ್ಯವಿಧಾನವೇ ಆಕ್ಷೇಪಾರ್ಹವಾಗಿದೆ. ಕೇಂದ್ರದ ಒಕ್ಕೂಟ ಸರ್ಕಾರವು ಮಣಿಪುರದ ಪರಿಸ್ಥಿತಿಯನ್ನು ಆಳುವ ಪಕ್ಷದ ಹಿತಾಸಕ್ತಿಗೆ ಉಪಯೋಗಿಸಿ ಕೊಳ್ಳುವುದನ್ನು ನಿಲ್ಲಿಸಬೇಕು, ಬಿಜೆಪಿಯು‌ ಅಲ್ಲಿನ ಮುಖ್ಯಮಂತ್ರಿಯನ್ನು ಕೆಳಗಿಳಿಸಬೇಕು. ಕೇಂದ್ರವು ಅಲ್ಲಿ ಕಾನೂನು ವ್ಯವಸ್ಥೆಯನ್ನು ಪುನರ್ಸ್ಥಾಪಿಸಬೇಕು, ಸಾವು ನೋವಿಗೆ  ತುತ್ತಾದವರಿಗೆ,ಆಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಪಾತಕಿಗಳಿಗೆ ಉಗ್ರ ಶಿಕ್ಷೆಯನ್ನು ಖಾತ್ರಿ ಪಡಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಮಿತಿಯ ಅಧ್ಯಕ್ಷೆ ಡಿ.ತರಂಗಿಣಿ ತಿಳಿಸಿದರು.
ಡಿ. ಮಂಗಮ್ಮ ಅಧ್ಯಕ್ಷೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ತಾಲೂಕು ಸಮಿತಿ ಸಿರುಗುಪ್ಪ, ಈರಮ್ಮ ಪ್ರಧಾನ ಕಾರ್ಯದರ್ಶಿ ಜನವಾದಿ ಮಹಿಳಾ ಸಂಘಟನೆ ತಾಲೂಕು ಸಮಿತಿ ಸಿರುಗುಪ್ಪ ಹಾಗೂ ಸದಸ್ಯರು ಇದ್ದರು.