ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆ: ರಾಜಕೀಯ ಇಚ್ಚಾಶಕ್ತಿ ಅಗತ್ಯ: ಭದ್ರತಾ ಮೂಲ

ಗುವಹಟಿ,ಜೂ.25- ಜನಾಂಗೀಯ ಹಿಂಸಾಚಾರದಿಂದ ನಲುಗಿ ಹೋಗಿರುವ ಮಣಿಪುರದಲ್ಲಿ ಶಾಂತಿ ಮರುಸ್ಥಾಪಿಸಲು ರಾಜಕೀಯ ಇಚ್ಚಾಶಕ್ತಿಯ ಅಗತ್ಯವಿದೆ ಎಂದು ಉನ್ನತ ಭದ್ರತಾ ಮೂಲಗಳು ತಿಳಿಸಿವೆ.

ರಾಜಕೀಯ ಇಚ್ಚಾಶಕ್ತಿ ಹೊರತು ಪಡಿಸಿ ಎಷ್ಟೇ ಸೇನೆಯನ್ನು ಮಣಿಪುರದಲ್ಲಿ ನಿಯೋಜಿಸಿದರೂ ಯಾವುದೇ ಪ್ರಯೋಜನ ಆಗದು. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಶಾಂತಿ ಬಯಸಲು ಇಚ್ಚಾಶಕ್ತಿ ಅಗತ್ಯವಿದೆ ಎಂದು ತಿಳಿಸಿದೆ.

ಮಣೀಪುರದಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕೆನ್ನುವ ಒತ್ತಾಯ ಜನಾಂಗೀಯ ಹಿಂಸಾಚಾರಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಶಾಂತಿ ಕಾಪಾಡಲು ಹಲವು ಪ್ರಯತ್ನಗಳು ನಡೆಸುತ್ತಿದ್ದರೂ ಪ್ರಯತ್ನ ಸಫಲವಾಗಿಲ್ಲ. ಬದಲಾಗಿ ಹಿಂಸಾಚಾರ ಮತ್ತಷ್ಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಲಹೆ ನೀಡಲಾಗಿದೆ.

ರಾಜಕೀಯ ಪಕ್ಷಗಳ ನಡುವೆ ಚರ್ಚೆ ಇಲ್ಲದೆ ಅನ್ಯ ಮಾರ್ಗದ ಮೂಲಕ ಮಣಿಪುರದಲ್ಲಿ ಶಾಂತಿ ತರುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಶಾಂತಿ ಕಾಪಾಡಲು ಮಿಲಿಟರಿ ಬಲ ಪ್ರಯೋಗ ಮಾಡುವುದರಿಂದ ಯಾವುದೇ ಪ್ರಯೋಜವಾಗದು. ಬದಲಾಗಿ ಪರಿಸ್ಥಿತಿ ಮತ್ತಷ್ಟು ಹೆಚ್ಚಳವಾಗುವ ಸಾದ್ಯತೆಗಳಿವೆ ಎಂದು ಹೇಳಲಾಗಿದೆ.

ಮಣಿಪುರದಲ್ಲಿ ಮೇ 3 ರಂದು ಆರಂಭವಾಗ ಜನಾಂಗೀಯ ಘರ್ಷಣೆಯ ಕಲಹ ಪ್ರಾರಂಭವಾದಾಗಿನಿಂದ 100 ಕ್ಕೂ ಹೆಚ್ಚು ಸಾವನ್ನಪ್ಪಿದ್ದಾರೆ.ಹಲವು ಮಂದಿ ಘರ್ಷಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದೆ.

ಹಿಂಸಾಚಾರ ಬುಗಿಲೆದ್ದ ಹಿನ್ನೆಲೆಯಲ್ಲಿ ಕೇಂದ್ರ ಸಚಿವರ ಮನೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುವುದು ಸೇರಿದತೆ
ದಂಗೆಕೋರರು ಮತ್ತು ನಾಗರಿಕರು-ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ರಾಜ್ಯ ಶಸ್ತ್ರಾಗಾರದಿಂದ ಲೂಟಿ ಮಾಡಿದ್ದರೆ. ಇದು ನಾಗರಿಕರು ಮತ್ತು ಭದ್ರತಾ ಪಡೆಗಳ ನಡುವೆ ಹಿಂಸಾಚಾರ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.