ಮಣಿಪುರದಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಸ್ತೆ ತಡೆ

ಸಂಜೆವಾಣಿ ವಾರ್ತೆ

ಹರಪನಹಳ್ಳಿ.ಜು.೨೬:- ಮಣಿಪುರದಲ್ಲಿ ಶಾಂತಿ ನೆಲೆಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹರಪನಹಳ್ಳಿ ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿ ಸಿಪಿಐ ತಾಲೂಕು ಮಂಡಳಿ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತುದೇಶದ ಈಶಾನ್ಯ ರಾಜ್ಯವಾದ ಮಣಿಪುರ ಒಂದು ಸಂಪದ್ಭರಿತ ರಾಜ್ಯವಾಗಿದ್ದು ಇತರ ಈಶಾನ್ಯ ರಾಜ್ಯಗಳಿಗೆ ಹೆಬ್ಬಾಗಿಲಿನಂತಿದೆ. ಶತಮಾನಗಳಿಂದ ಇಲ್ಲಿ ನೆಲೆಸಿರುವ ವಿವಿಧ ಜನಾಂಗಗಳು ಪರಸ್ಪರ ಶಾಂತಿ ಮತ್ತು ನೆಮ್ಮದಿಯಿಂದ  ಸಹಬಾಳ್ವೆ ನಡೆಸುತ್ತ ಬಂದಿವೆ. ಆದರೆ ಇಂದು ಈ ರಾಜ್ಯದಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಮೈತೇಯಿ ಸಮುದಾಯ ಮತ್ತು ಅರಣ್ಯ ವಾಸಿಗಳಾದ ಬುಡಕಟ್ಟು ಕುಕಿ ಜನಾಂಗವು ಪರಸ್ಪರ ವೈರಿಗಳಂತೆ ಗಲಭೆ ದೊಂಬಿ ಕೊಲೆ ಸುಲಿಗೆ ಅತ್ಯಾಚಾರ ಹಿಂಸೆಗಳಲ್ಲಿ ತೊಡಗಿಕೊಂಡಿರುವುದರಿಂದ ಮಣಿಪುರದ ಕಣಿವೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿವೆ ಇಂತಹ ಘೋರ ಸ್ಥಿತಿ ಏಕಾಏಕಿ ನಿರ್ಮಾಣವಾಗಿಲ್ಲ ಬಿಜೆಪಿ ಮತ್ತು ಸಂಘ ಪರಿವಾರ ದಶಕಗಳ ಕಾಲ ಮಾಡಿರುವ ಕೋಮು ಪ್ರಚೋದನೆಯಿಂದಾಗಿ ಇಂದು ಈ ಎರಡು ಸಮುದಾಯಗಳು ಮತೀಯ ಆಧಾರದಲ್ಲಿ ಒಡೆದು ಅವರ ನಡುವೆ ದ್ವೇಷ ಬೆಳೆದಿದೆ.ಬಿಜೆಪಿ ಮೈತ್ರಿಕೂಟದ ಮಣಿಪುರ ಸರ್ಕಾರದ ತಪ್ಪು ನೀತಿಗಳು ಆ ರಾಜ್ಯದಲ್ಲಿ ನಿರುದ್ಯೋಗ ಆರ್ಥಿಕ ಅಸಮಾನತೆಗೆ ಕಾರಣವಾಗಿದೆ. ಅಕ್ರಮ ವಲಸೆ ಮಾದಕ ವಸ್ತುಗಳು ದಂಧೆ ಭೂಮಾಫಿಯಾ  ಭಯೋತ್ಪಾದಕ ಸಂಘಟನೆಗಳ ಹತ್ತಕ್ಷೇಪ ಮತ್ತು ಮಣಿಪುರದ ಭೂ ಗರ್ಭದಲ್ಲಿರುವ ಅಗಾಧ ಲೂಟಿ ಮಾಡಲು ಹೊರಟಿರುವ ಅದಾನಿಯಂತಹ ಕಾರ್ಪೊರೇಟ್ ಕುಲಗಳ ಸಂಚು ಹಾಗೂ ಇದಕ್ಕೆ ಬೆಂಬಲವಾಗಿ ನಿಂತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಂದು ಮಣಿಪುರದಲ್ಲಿ ಗಲಭೆಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರುಹಾಗೂ ಕಳೆದ ಮೂರು ತಿಂಗಳಿನಿಂದ ಆರಂಭವಾಗಿರುವುದು ಹಿಂಸೆ ಕೊಲೆ ಅತ್ಯಾಚಾರಗಳಿಗೆ ಕೊನೆಯಿಲ್ಲದಂತಾಗಿದೆ ನೂರಾರು ಕೊಲೆಗಳು ಮತ್ತು ಅತ್ಯಚಾರ ನಡೆದಿದ್ದು ಸುಮಾರು 50 000 ಸಾವಿರಕ್ಕೂ ಹೆಚ್ಚು ಮಂದಿ ಮನೆಮಠ ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದಾರೆಹಾಗೂ ಮಣಿಪುರದಲ್ಲಿ ಇಂತಹ ಭೀಕರ ದುರಂತ ಸಂಭವಿಸಿದರು ಪ್ರಧಾನಮಂತ್ರಿ ಯವರು ಮೌನವಾಗಿರುವುದೇ ಏಕೆ ಎಂದು ಪ್ರಶ್ನೆ ಮಾಡಿ ನಡೆಯುತ್ತಿರುವ ಗಲಬೆಯನ್ನು ತಡೆಯುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ಹಾಗೂ ಈ ಕೂಡಲೇ ಮಣಿಪುರದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಹಾಗೂ ಅಕ್ರಮವಾಗಿ ಅರಣ್ಯದಲ್ಲಿ ಬೆಳೆಯುತ್ತಿರುವ ಮಾದಕ ವಸ್ತು ಕೃಷಿಯನ್ನು ತಡೆಯಬೇಕು, ಅಕ್ರಮ ವಲಸೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು, ಹೆದ್ದಾರಿಯನ್ನು ಮುಕ್ತಿಗೊಳಿಸಿ  ಜನತೆಗೆ ಆಹಾರ ವಸ್ತು  ಮತ್ತು ಔಷಧಿ ಸರಬರಾಜು ಮಾಡಬೇಕು ಹಾಗೂ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಗಣಿಗಾರಿಕೆ ನಡೆಸಲು ನೀಡಬೇಕೆಂದಿರುವ 65,000 ಎಕರೆ ಅರಣ್ಯ ಭೂಮಿಯಾ ಪ್ರಸ್ತಾಪವನ್ನು ಕೈಬಿಟ್ಟು ಎನ್ ಎಫ್ ಐ ಡಬ್ಲ್ಯೂ ನಾಯಕಿಯರ ಮೇಲೆ ದಾಖಲಿಸಿರುವ ಎಫ್ ಐ ಆರ್ ಕೂಡಲೇ ರದ್ದು ಗೊಳಿಸಬೇಕೆಂದು ಹರಪನಹಳ್ಳಿ ಮಾನ್ಯ ತಹಸೀಲ್ದರ್ ಮುಖಾಂತರ ಸನ್ಮಾನ್ಯ ಪ್ರಧಾನ ಮಂತ್ರಿಗಳಿಗೆ  ಮನವಿ ಪತ್ರ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಎಚ್ ಎಮ್ ಸಂತೋಷ್ ಸಿ ಪಿ ಐ ಜಿಲ್ಲಾ ಉಸ್ತುವಾರಿ ವಿಜಯನಗರ.  ಗುಡಿಹಳ್ಳಿ ಹಾಲೇಶ್ ಸಿ ಪಿ ಐ ಕಾರ್ಯದರ್ಶಿ ಹರಪನಹಳ್ಳಿ. ಹಾಗೂ ಬಳಿಗನೂರು ಕೊಟ್ರೇಶ್. ದಾದಾಪೀರ್. ದೊಡ್ಡ ಬಸವರಾಜ. ಭಾಷಾ ಸಾಹೇಬ್. ಡಿಎಚ್ ಅರುಣ. ಪಂಪಣ್ಣ ಮುಂತಾದವರು ಉಪಸ್ಥಿತರಿದ್ದರು