
ಸಂಜೆವಾಣಿ ವಾರ್ತೆ
ಸರಗೂರು: ಆ.01:- ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಹಾಗೂ ಧರ್ಮಸ್ಥಳದ ಸೌಜನ್ಯ ಪ್ರಕರಣ ಖಂಡಿಸಿ ಮರು ತನಿಖೆಗೆ ಒತ್ತಾಯಿಸಿ ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಹೊರಟು ದಲಿತ ಸಂಘರ್ಷ ಸಮಿತಿ, ವರ್ತಕರ ಸಂಘ ಇನ್ನಿತರ ಹಲವಾರು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾ ನಿರತರು ಮಣಿಪುರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಣಿಪುರದಲ್ಲಿ ಪೂಜನೀಯ ಹೆಣ್ಣನ್ನು ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದ್ದು ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಮಣಿಪುರ ಸರ್ಕಾರವನ್ನು ಕೂಡಲೇ ವಜಾ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಮಣಿಪುರದಲ್ಲಿ ಕಳೆದ ಮೂರು ತಿಂಗಳಿಂದ ಜನಾಂಗೀಯ ಗಲಾಟೆಯಿಂದ ಕೊಲೆ, ಲೂಟಿ,ದೊಂಬಿ ನಡೆಯುತ್ತಿದ್ದರು ಮಣಿಪುರ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಮೌನವಾಗಿ ನಿರ್ಲಕ್ಷ್ಯ ವಹಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ, ಅಲ್ಲದೆ ಈ ಪ್ರಕರಣ ವಿಕೋಪಕ್ಕೆ ತೆರಳಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ನಡು ರಸ್ತೆಯಲ್ಲಿ ಮೆರವಣಿಗೆ ಮಾಡಿರುವುದು ಖಂಡನೀಯವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಮಣಿಪುರ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕಿದೆ, ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿರುವವರನ್ನು ನೇಣಿಗೆ ಹಾಕಬೇಕು.ಮಹಿಳೆಯರು ನಿರ್ಭೀತಿಯಿಂದ ಓಡಾಡುವ ವಾತಾವರಣ ನಿರ್ಮಿಸಲು ಮುಂದಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.ನಂತರ ಮೆರವಣಿಗೆ ತಾಲೂಕು ಕಚೇರಿ ಮುಂಭಾಗ ತಲುಪಿ ತಹಶೀಲ್ದಾರರಿಗೆ ಈ ಸಂಬಂಧ ಮನವಿ ಪತ್ರ ನೀಡಲಾಯಿತು.
ಸಂವಿಧಾನ ಸಂರಕ್ಷಣಾ ಸಮಿತಿ ಅಧ್ಯಕ್ಷರಾದ ಬಿರ್ವಾಳ್ ಬಸವರಾಜು, ಮಾಜಿ ಅಧ್ಯಕ್ಷ ಸರಗೂರು ಶಿವಣ್ಣ, ಗೌರವಾಧ್ಯಕ್ಷ ಹುಣಸಹಳ್ಳಿ ಬಸವರಾಜು, ಸರಗೂರು ವರ್ತಕರ ಸಂಘದ ಅಧ್ಯಕ್ಷರಾದ ಎಸ್ ಎಂ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಚೆನ್ನಿಪುರ ಮಲ್ಲೇಶ್, ಸರಗೂರು ನಾಯಕ ಸಮಾಜದ ಅಧ್ಯಕ್ಷ ಚೆನ್ನಪ್ಪ, ಹೈರಿಗೆ ಶಿವರಾಜು, ತೊರವಳ್ಳಿ ಭಾಗ್ಯ, ಆಶಾ ಕಾರ್ಯಕರ್ತೆಯರ ಸಂಘ, ವಿಭಾಗೀಯ ಸಂಚಾಲಕ ರಾಜಶೇಖರ್, ಗ್ರಾಮೀಣ ಮಹೇಶ್, ಇಟ್ನಾ ರಾಜಣ್ಣ, ಜಿವೀಕ ಸಂಘಟನೆ ಚಂದ್ರಶೇಖರ ಮೂರ್ತಿ, ಯಜಮಾನರಾದ ಭೀಮಯ್ಯ ,ಜವರಯ್ಯ, ಇದಿಯಪ್ಪ,ಅಕ್ಬರ್ ಫಾಷಾ, ಬಿಡುಗಲು ಶಿವಣ್ಣ,ಸರಗೂರು ಕೃಷ್ಣ, ಲಂಕೆ ಲಕ್ಷ್ಮಣ,ಹಳೆಯೂರು ಚಿನ್ನಯ್ಯ,ಸೋಮಣ್ಣ,ಹೆಗ್ಗುಡಿಲು ಪ್ರಭಾಕರ್, ಚೆನ್ನಿಪುರ ನಾಗರಾಜು, ದೇವಲಾಪುರ ಗೋಪಾಲ್, ಗೋವಿಂದರಾಜು ಇನ್ನಿತರ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು, ಈ ಸಂದರ್ಭದಲ್ಲಿ ಪೆÇೀಲೀಸ್ ಬಂದುಬಸ್ತ್ ವ್ಯವಸ್ಥೆಯನ್ನು ಸರಗೂರು ಠಾಣಾ ಉಪ ನಿರೀಕ್ಷಕ ನಂದೀಶ್ ಕುಮಾರ್ ಸಿ ವಹಿಸಿದ್ದರು.