ಮಣಿಪುರದಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತ

ಇಂಫಾಲ,ಸೆ.೨೭- ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಹೊಸದಾಗಿ ಮತ್ತೆ ಹಿಂಸಾಚಾರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂದಿನ ೫ ದಿನಗಳವರೆಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಇಂಟರ್‌ನೆಟ್ ನಿಷೇಧ ಹಿಂತೆಗೆದುಕೊಂಡ ಕೇವಲ ೪ ದಿನಗಳ ನಂತರ ಮತ್ತೆ ನಿಷೇಧ ಏರಲಾಗಿದೆ.. ಸೆಪ್ಟೆಂಬರ್ ೨೩ ರಂದು ಮಣಿಪುರದಲ್ಲಿ ಇಂಟರ್‌ನೆಟ್ ಸೇವೆ ಮರುಸ್ಥಾಪಿಸಲಾಗಿದೆ.
ಮೊಬೈಲ್ ಇಂಟರ್‌ನೆಟ್ ಡೇಟಾ ಸೇವೆಗಳು ಮತ್ತು ವಿಪಿಎನ್ ಮೂಲಕ ಇಂಟರ್‌ನೆಟ್, ಡೇಟಾ ಸೇವೆಗಳನ್ನು ಮಣಿಪುರದ ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿ ಐದು ದಿನಗಳ ಕಾಲ ಅಕ್ಟೋಬರ್ ೧ರ ರಾತ್ರಿ ೭.೪೫ ರವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ,
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರು “ನಾಪತ್ತೆಯಾದ ವಿದ್ಯಾರ್ಥಿಗಳ ದುರಂತ ಸಾವಿನ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರ ದುಷ್ಕರ್ಮಿ ಹಿಡಿಯಲು ನಿಕಟವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಶಾಲಾ -ಕಾಲೇಜಿಗೆ ರಜೆ
ಹಿಂಸಾಚಾರದ ಹಿನ್ನೆಲೆಯಲ್ಲಿ ಮಣಿಪುರದ ಎಲ್ಲಾ ಸರ್ಕಾರಿ ಅನುದಾನಿತ ಖಾಸಗಿ ಅನುದಾನರಹಿತ ಶಾಲೆಗಳನ್ನು ಸೆಪ್ಟೆಂಬರ್ ೨೭ ಮತ್ತು ೨೯ ರಂದು ರಜೆ ನೀಡಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದದೆ.
ಜುಲೈನಲ್ಲಿ ಇಬ್ಬರು ಯುವಕರನ್ನು ಅಪಹರಿಸಿ ಹತ್ಯೆ ಮಾಡಿರುವುದನ್ನು ಪ್ರತಿಭಟಿಸಿದ ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಈ ವೇಳೆ ಪೊಲೀಸರ ಲಾಠಿ ಪ್ರಹಾರದಲ್ಲಿ ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇಬ್ಬರು ಯುವಕರ ಶವಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೆಲವೇ ಗಂಟೆಗಳ ನಂತರ ಇಂಫಾಲ್ ಮೂಲದ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನಾ ರ್ಯಾಲಿ ನಡೆಸಿ ಹಿಂಸಾಚಾರ ಭುಗಿಲೆದ್ದಿತ್ತು
ಪೊಲೀಸ್ ದಾಳಿಯಲ್ಲಿ ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಇಂಫಾಲ್‌ನ ಮೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ವೈದ್ಯಕೀಯ ಸೌಲಭ್ಯಗಳ ಅಧಿಕಾರಿಗಳು ತಿಳಿಸಿದ್ದಾರೆ.