
ಕಲಬುರಗಿ,ಮೇ.6-ಮಣಿಪುರದಲ್ಲಿ ನಡೆಯುತ್ತಿರುವ ಬುಡಕಟ್ಟು ಮತ್ತು ಇತರ ಜನಾಂಗದವರನ್ನು ಒಳಗೊಂಡಂಥ ಜನಸಾಮಾನ್ಯರ ಘೋರ ಹತ್ಯೆಯನ್ನು ಎಸ್‍ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ್ ಉಗ್ರವಾಗಿ ಖಂಡಿಸಿದ್ದಾರೆ.
ಈ ಕೋಮುವಾದಿ ಗಲಭೆಗೆ ಕೊನೆ ಹಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಉಗ್ರ ಕ್ರಮ ಕೈಗೊಂಡು, ತತ್‍ಕ್ಷಣವೇ ಸಹಜ ಸ್ಥಿತಿಯನ್ನು ಪುನರ್‍ಸ್ಥಾಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಜೊತೆಗೆ, ಮಣಿಪುರ ಸರ್ಕಾರವು ರಾಜ್ಯದ ಎಲ್ಲಾ ವಿಭಾಗಗಳ ಜನತೆಯ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದೆ ಹೋದರೆ, ಈ ಸಂಘರ್ಷ ಒಂದು ಹಿಂಸಾತ್ಮಕ, ಪರಸ್ಪರ ವಿನಾಶಕ ದಳ್ಳುರಿಯಾಗಿ ಹಬ್ಬಬಹುದು ಎಂದು ಅವರು ಎಚ್ಚರಿಸಿದ್ದಾರೆ.