
ನವದೆಹಲಿ,ಆ.೭- ಹಿಂಸಾಚಾರ ಪೀಡಿತ ಮಣಿಪುರದಲ್ಲಿ ದಿನದಿಂದ ದಿನಕ್ಕೆ ಹಿಂಸಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ೧೦ ಕಂಪನಿಗಳ ೮೦೦ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಕೇಂದ್ರ ಸರ್ಕಾರ ಮಣಿಪುರಕ್ಕೆ ರವಾನಿಸಿದೆ.
ಹತ್ತು ಕಂಪನಿಗಳಲ್ಲಿ ಐದು ಕೇಂದ್ರೀಯ ಮೀಸಲು ಪೋಲಿಸ್ ಪಡೆ, ೩ ಗಡಿ ಭದ್ರತಾ ಪಡೆ , ತಲಾ ಒಂದು ಕೇಂದ್ರೀಯ ಮೀಸಲು ಪಡೆ ಮೂರು ಗಡಿ ಭದ್ರತಾ ಪಡೆ ಮತ್ತು ತಲಾ ಒಂದು ಸಶಸ್ತ್ರ ಸೀಮಾ ಬಾಲ್ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಗಳಿವೆ ಎಂದು ದೃಢಪಡಿಸಿದೆ.
ಮೇ ೩ ರಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ ಇದುವರೆಗೂ ೧೬೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರನ್ನು ಸ್ಥಳಾಂತರಿಸಿದ್ದರಿಂದ ಪ್ರಕ್ಷುದ್ಧ ವಾತಾವರಣ ನಿರ್ಮಾಣವಾಗಿದೆ.
ಮಣಿಪುರದ ಕ್ವಾಕ್ಟಾ ಪ್ರದೇಶದಲ್ಲಿ ಮೈತೆಯ್ ಸಮುದಾಯದ ಮೂವರು ಪುರುಷರನ್ನು ಅವರ ಮನೆಗಳಲ್ಲಿ ಗುಂಡಿಕ್ಕಿ ಕೊಂದು ಅವರ ದೇಹಗಳನ್ನು ವಿರೂಪಗೊಳಿಸಲಾಗಿದೆ. ನಂತರ, ಬುಡಕಟ್ಟು ಕುಕಿ ಸಮುದಾಯದ ಇಬ್ಬರು ವ್ಯಕ್ತಿಗಳು ಚುರಾಚಂದ್‌ಪುರ ಜಿಲ್ಲೆಯಲ್ಲಿ ಹತ್ಯೆ ಮಾಡಲಾಗಿದೆ.
ಈ ನಡುವೆ ಬುಡಕಟ್ಟು ಸಂಘಟನೆಯ ಸದಸ್ಯರು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ
ಮಣಿಪುರದಲ್ಲಿ ಮೂರು ತಿಂಗಳಿಂದ ನಡೆಯುತ್ತಿರುವ ಹಿಂಸಾಚಾರ ನಿಂತಿಲ್ಲ: ದುಷ್ಕರ್ಮಿಗಳನ್ನು ಮಟ್ಟ ಹಾಕಲು ಭದ್ರತಾ ಪಡೆಯನ್ನು ಮಣಿಪುರಕ್ಕೆ ಕಳುಹಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಹಿಂಸಾಚಾರದಿಂದ ನಲುಗುತ್ತಿರುವ ಈಶಾನ್ಯ ರಾಜ್ಯವು ಈಗ ಕನಿಷ್ಠ ೧೨೫ ವಿವಿಧ ಅರೆಸೇನಾ ಪಡೆಗಳನ್ನು ಹೊಂದಿದೆ ಮತ್ತು ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ಸುಮಾರು ೧೬೪ ತುಕಡಿ ಹೊಂದಿದೆ. ಒಂದು ತುಕಡಿಯಲ್ಲಿ ಸುಮಾರು ೧೨೦-೧೩೫ ಸಿಬ್ಬಂದಿಯನ್ನು ಹೊಂದಿದೆ.