ಮಣಿಕಂಠ ರಾಥೋಡ್ ವಿರುದ್ಧ ಕ್ರಮಕ್ಕೆ ಆಗ್ರಹ

ರಾಯಚೂರು,ಜ.೧೪- ದಲಿತ ಸಂಘಟನೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಮಣಿಕಂಠ ರಾಥೋಡ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗುಸುವಂತೆ ಒತ್ತಾಯಿಸಿ, ಮಾದಿಗ ದಂಡೋರ ಹೋರಾಟ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ನ್ಯಾ. ಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಸತತವಾಗಿ ೧೨ ವರ್ಷಗಳಿಂದ ದಿನಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ದಲಿತಪರ ಸಂಘಟನೆಗಳು ವ್ಯಕ್ತಿ ಹಾಗೂ ಸಂಘ ಸಂಸ್ಥೆಗಳ ವಿರುದ್ಧ ಪ್ರತಿಭಟನೆ ನಡೆಸಿಲ್ಲ. ಮೂಲಭೂತ ಹಕ್ಕುಗಳಿಗೋಸ್ಕರ ಹೋರಾಟದ ರೂಪುರೋಷಗಳನ್ನು ನಡೆಸುತ್ತಾ ಬರುತ್ತಿದ್ದೇವೆ. ಆದರೆ ಕೆಲವೊಂದು ಸಂಘ ಸಂಸ್ಥೆಗಳು, ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧಿಸಿ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ಸಹ, ನಾವು ತಲೆ ಕೆಡಿಸಿಕೊಳ್ಳದೇ, ಕೇವಲ ನಮ್ಮ ನ್ಯಾಯಬದ್ಧವಾದ ಹಕ್ಕುಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತಾ ಬಂದಿರುತ್ತೇವೆ.
ಆದರೆ, ಮಣಿಕಂಠ ರಾಥೋಡ್ ಇವರು, ಸದಾಶಿವ ಆಯೋಗದ ವರದಿ ವಿರೋಧಿಸಿ ನಡೆಸುತ್ತಿರುವ ಹೋರಾಟದಲ್ಲಿ ನಮಗೆ ಜಾಡು ಜಾಡಿಸುವುದೂ ಗೊತ್ತು ಮತ್ತು ಜಾಡಿಸಿ ಒಡೆಯುವುದು ಗೊತ್ತು ಎಂದು ಆಸ್ಪಶ್ಯ ಸಮಾಜದ ಮಾದಿಗೆ ಮತ್ತು ಚೆಲವಾದಿ ಹೋರಾಟಗಾರರಿಗೆ ನೇರವಾಗಿ ಧಮ್ಮಿ ಹಾಕಿ ನಾವು ಮನಸ್ಸು ಮಾಡಿದರೆ ನಿಮ್ಮನ್ನು ದೇಶದಿಂದ ಓಡಿಸುತ್ತೇವೆ ಎಂದು ದಲಿತ ಸಂಘಟನೆಗಳ ವಿರುದ್ಧ ಅವಾಚ್ಯ ಶಬ್ಬಗಳಿಂದ ನಿಂದಿಸಿರುವುದಲ್ಲದೇ ದಲಿತ ಸಂಘಟನೆಗಳು ಹಪ್ಪ ವಸೂಲಿಗೆ ನಿಂತಿರುತ್ತವೆ ಎಂದು ಕೇವಲವಾಗಿ ಮಾತನಾಡಿರುವುದಲ್ಲದೇ, ನಮ್ಮ ಸಮುದಾಯದ ಜನಾಂಗದವರಲ್ಲಿ ಕೋಮುಗಲಬೆ ಸೃಷ್ಟಿ ಮಾಡುವ ಹುನ್ನಾರು ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮಣಿಕಂಠ ರಾಥೋಡ್ ವಿರುದ್ಧ ಕೋಮು ಗಲಭೆಯಡಿ ಕೇಸು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೇಮರಾಜ ಆಸ್ಕಿಹಾಳ್, ಜಿ. ನರಸಿಂಹಲು, ಎ ರಾಮು, ಉರುಕುಂದ, ಪ್ರಭುರಾಜ, ಶ್ರೀನಿವಾಸ್ ಕೊಪ್ಪರ, ಬಸವರಾಜ ಭಂಡಾರಿ, ತಾಯಪ್ಪ ಸೇರಿದಂತೆ ಉಪಸ್ಥಿತರಿದ್ದರು.