ಮಣಿಕಂಠ ರಾಠೋಡ್ ವಿರುದ್ಧ ಎಸ್ಪಿಗೆ ದೂರುಪ್ರಿಯಾಂಕ್‍ಗೆ ಜೀವ ಬೆದರಿಕೆ; ರಾಠೋಡ್ ವಿರುದ್ಧ ಶರಣ ಪ್ರಕಾಶ್ ಕಿಡಿ

ಕಲಬುರಗಿ,ನ 12 : ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡುವುದಾಗಿ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಡಾ..ಶರಣ ಪ್ರಕಾಶ್ ಪಾಟೀಲ್ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಈ ಹಿಂದೆ ಪ್ರಿಯಾಂಕ್ ಅವರಿಗೆ ನೀಡಿದ್ದ ಪೆÇಲೀಸ್ ಭದ್ರತೆಯನ್ನು ರಾಜ್ಯ ಸರಕಾರ ಹಿಂಪಡೆದಿದೆ. ಹೀಗೆ ಭದ್ರತೆ ಹಿಂಪಡೆದ ಬಳಿಕ ಅವರಿಗೆ ಮೂರು ಬಾರಿ ಜೀವ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಬೆಂಗಳೂರಿನ ಸದಾಶಿವನಗರದಲ್ಲಿ ಎಫ್ ಐ ಆರ್ ದಾಖಲಿಸಿದ್ದರೂ ಸರಕಾರ ಈವರೆಗೆ ಕ್ರಮ ಕೈಗೊಂಡಿಲ್ಲ. ಈಗ ಮಣಿಕಂಠ ರಾಠೋಡ್ ಸಹ ಪ್ರಿಯಾಂಕ್ ಅವರಿಗೆ ಬಹಿರಂಗವಾಗಿ ಜೀವ ಬೆದರಿಕೆ ಹಾಕಿದ್ದಾರೆ. ಇದೆಲ್ಲವನ್ನೂ ನೋಡುತ್ತಿದ್ದರೆ ಸ್ವತಃ ಸರಕಾರವೇ ಉದ್ದೇಶಪೂರ್ವಕವಾಗಿ ಬಿಜೆಪಿ ಮುಖಂಡರ ಮೂಲಕ ಬೆದರಿಕೆ ಹಾಕಿಸುವ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಸಂಶಯ ವ್ಯಕ್ತಪಡಿಸಿದರು.
ಪ್ರಿಯಾಂಕ್ ಅವರು ಈ ಹಿಂದೆ ಬಿಟ್ ಕಾಯಿನ್, ಪಿಎಸ್ ಐ ಅಕ್ರಮ ನೇಮಕಾತಿ ಹಗರಣ, ಗಂಗಾ ಕಲ್ಯಾಣ ಹಗರಣ ಸೇರಿದಂತೆ ಸರಕಾರದ ಹಲವು ಹಗರಣಗಳನ್ನು ಹೊರ ಹಾಕಿದ್ದಾರೆ. ಇದಕ್ಕಾಗಿ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಸರಕಾರವೇ ತನ್ನ ಮುಖಂಡರ ಮೂಲಕ ಪ್ರಿಯಾಂಕ್ ಅವರಿಗೆ ರೀತಿ ಜೀವ ಬೆದರಿಕೆ ಹಾಕಿಸುತ್ತಿದೆ ಎಂದು ಡಾ.ಪಾಟೀಲ್ ನೇರ ಆರೋಪ ಮಾಡಿದರು.
ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ಹಿಂದೆ ಗೃಹ ಸಚಿವರಾಗಿದ್ದಾಗ ನೇರವಾಗಿ ಹೋಗಿ ಪ್ರಿಯಾಂಕ್ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಇದರ ಹಿಂದೆ ಸರಕಾರದ ದುರುದ್ದೇಶವಿದೆ ಎಂಬುದು ಸಾಬೀತಾಗುತ್ತದೆ ಎಂದರು.
ಶಾಸಕರು ಸೇರಿದಂತೆ ಜೀವ ಬೆದರಿಕೆ ಇರುವವರಿಗೆ ಕಡ್ಡಾಯವಾಗಿ ಸೆಕ್ಯುರಿಟಿ ನೀಡಬೇಕು. ಆದರೆ, ಸರಕಾರ ತನ್ನ ರಾಜಕೀಯ ಲಾಭಕ್ಕಾಗಿ ನೀಡಿರುವ ಸೆಕ್ಯುರಿಟಿ ಹಿಂಪಡೆಯುತ್ತಿರುವುದು ದುರಂತ ಎಂದು ವಿಷಾದಿಸಿದರು.
ಪ್ರಿಯಾಂಕ್ ಖರ್ಗೆಯವರು ಚಿತ್ತಾಪುರದಲ್ಲಿ ಮಾತನಾಡಿದಾಗ ಕಾಂಗ್ರೆಸ್ ಕಾರ್ಯಕರ್ತರನ್ನು ಕೆಣಕಿದರೆ ಬಿಜೆಪಿಯ ಒಬ್ಬ ಮುಖಂಡನೂ ತಿರುಗಾಡಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆಯೇ ಹೊರತು ಯಾರನ್ನೂ ಶೂಟ್ ಮಾಡುವುದಾಗಿ ಹೇಳಿಲ್ಲ. ಜಿಲ್ಲೆಗೆ ಸಿಎಂ ಬಂದರೆ ನಮ್ಮ ಕಾರ್ಯಕರ್ತರು ಸಹ ಸುಮ್ಮನಿರಲು ಆಗುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಇಂತಹ ಅರಾಜಕತೆಗೆ ಭಯ ಬೀಳುವುದಿಲ್ಲ ಎಂದರು.