ಮಣಿಕಂಠ ರಾಠೋಡ್ ಗಡಿಪಾರಿಗೆ ಆಗ್ರಹ

ಕಲಬುರಗಿ,ಜ.19-ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಹೋರಾಟಗಾರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಮಣಿಕಂಠ ರಾಠೋಡ್ ಅವರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿ ಜಿಲ್ಲಾ ಮಾದಿಗ ಸಮನ್ವಯ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಸಮಿತಿ ಅಧ್ಯಕ್ಷ ಪರಮೇಶ್ವರ ಖಾನಾಪೂರ, ಮುಖಂಡರಾದ ಲಿಂಗರಾಜ ತಾರಫೈಲ್, ದಶರಥ ಕಲಗುರ್ತಿ, ಗುರುರಾಜ ಭಂಡಾರಿ, ರಮೇಶ ವಾಡೇಕರ, ಪ್ರಕಾಶ ಮಾಳಗೆ, ಬಸವರಾಜ ಜವಳಿ, ದಿಗಂಭರ ತ್ರಿಮೂರ್ತಿ, ಮಾರುತಿ ಬಂಡಾರಿ, ಮಲ್ಲಿಕಾರ್ಜುನ ದೊಡ್ಡಮನಿ, ರಾಜು ಹದನೂರ, ಹಣಮಂತ ಅಂಕಲಗಿ ಸೇರಿದಂತೆ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.