ಮಣಗೆ ಲೇಔಟ್ ನಲ್ಲಿ ಸಸಿ ನೆಡುವಿಕೆ

ಬೀದರ್:ಜು.28: ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಇಲ್ಲಿಯ ಗುರುದ್ವಾರ ಸಮೀಪದ ರಿಂಗ್ ರಸ್ತೆ ಬದಿಯ ಮಣಗೆ ಲೇಔಟ್‍ನಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಲೇಔಟ್‍ನ ಉದ್ಯಾನ, ರಿಂಗ್ ರಸ್ತೆ ಮಧ್ಯದ ವಿಭಜಕಗಳಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು.
ಕರ್ನಾಟಕ ಪಶು ವೈದ್ಯಕೀಯ ವಿಶ್ವ ವಿದ್ಯಾಲಯದ ಕುಲಪತಿ ಡಾ.ಕೆ.ಸಿ. ವೀರಣ್ಣ ಅವರು ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಗರಸಭೆ ಆಯುಕ್ತ ಪ್ರಬುದ್ಧ ಕಾಂಬಳೆ,ಎಸ್‍ಬಿಐ ಪ್ರಾದೇಶಿಕ ವ್ಯವಸ್ಥಾಪಕ ಹರೀಶ್, ಕಲಬುರಗಿಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ರಾಜು ಜಿ. ತೆಗ್ಗೆಳ್ಳಿ, ಜನವಾಡ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಮಣಗೆ ಲೇಔಟ್ ಮಾಲೀಕ ವೀರಶೆಟ್ಟಿ ಮಣಗೆ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ನಿತಿನ್ ಕರ್ಪೂರ, ಕಾರ್ಯದರ್ಶಿ ರಿತೇಶ ಸುಲೆಗಾಂವ್, ಖಜಾಂಚಿ ಸತೀಶ್ ಸ್ವಾಮಿ, ಕನ್ಸಲ್ಟಿಂಗ್ ಎಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ದಿಲೀಪ್ ನಿಟ್ಟೂರೆ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸುರೇಖಾ ಶೇರಿಕಾರ್, ಕಾರ್ಯದರ್ಶಿ ಉಮಾ ಗಾದಗೆ, ಹಾವಶೆಟ್ಟಿ ಪಾಟೀಲ, ಸಿದ್ದು ಮಣಗೆ ಮೊದಲಾದವರು ಇದ್ದರು.
ರಿಯಲ್ ಎಸ್ಟೆಟ್ ಡೆವೆಲಪರ್ಸ್ ಅಸೋಸಿಯೇಷನ್, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ, ಸ್ವರ್ಣ ಕನ ಸ್ಟ್ರಕ್ಷನ್ಸ್, ಸ್ಟೆಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಹಾರ ಶಾಖೆ, ಕೃಷಿ ವಿಜ್ಞಾನ ಕೇಂದ್ರ, ನಂದಿಕಾ ಎಕ್ಟಿವ್ ಸೊಷಿಯಲ್ ಆರ್ಗನೈಸೇಷನ್, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್, ಇನ್ನರ್ ವ್ಹೀಲ್ ಕ್ಲಬ್ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ಸಹಯೋಗದಲ್ಲಿ ನಾಗಮಣಿ ವೀರಸಂಗಪ್ಪ ಮಣಗೆ ಅವರ ಪುಣ್ಯಸ್ಮರಣೆ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.