ಮಡ್ಡಿಪೇಟೆ : ಕಾರ್ತಿಕ ದೀಪೋತ್ಸವ ಪ್ರವಚನ


ರಾಯಚೂರು.ಡಿ.೦೪-ನಗರದ ಮದ್ದಿಪೇಟೆ ಶ್ರೀ ರಘುವೀರ್ ಹನುಮಾನ್ ದೇವಸ್ಥಾನ ಹಾಗೂ ಶಂಕರಲಿಂಗ ದೇವಸ್ಥಾನದಲ್ಲಿ ಸಹಸ್ರ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಅಭಿನವ ರಾಚೊಟಿ ವೀರ ಶಿವಾಚಾರ್ಯ ಸೋಮವಾರಪೇಟೆ ಹಿರೇಮಠ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿ ಕಾರ್ತಿಕ ದೀಪೋತ್ಸವದ ಬಗ್ಗೆ ಪ್ರವಚನ ನೀಡಿದರು. ಈ ಸಂದರ್ಭದಲ್ಲಿ ಮಹದೇವ ಸ್ವಾಮಿ ಅಜಲಾಪುರ್, ಶೈಲೇಶ್, ವಿಶ್ವನಾಥ್, ರಾಜಶೇಖರ್ ಹಾಗೂ ದೇವಸ್ಥಾನದ ಭಕ್ತರು ಹಾಗೂ ಮಹಿಳೆಯರು ಭಾಗವಹಿಸಿ ಕಾರ್ತಿಕ ದೀಪ ಬೆಳಗಿಸಿದರು.