ಮಡ್ಡಿಪೇಟೆಯಲ್ಲಿ ಹನುಮನ ಜಯಂತಿ ಶಿವಭಜನೆ, ಅನ್ನ ಸಂತರ್ಪಣೆ

ರಾಯಚೂರು,ಏ.೦೭-ನಗರದ ವಿವಿದೆಡೆ ದೇವಸ್ಥಾನಗಳಲ್ಲಿ ಹನುಮಾನ ಜಯಂತಿ ಆಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ವಾರ್ಡ್ ನಂ. ೨೨, ಮಡ್ಡಿಪೇಟೆ ಬಡಾವಣೆಯ ಶ್ರೀ ಪಂಚಮುಖಿ ಹನುಮಾನ ದೇವಸ್ಥಾನದಲ್ಲಿ ಸೇವಾ ಸಮಿತಿಯ ಯುವಕರು ಸರ್ವ ಸದ್ಭಕ್ತರ ನೇತೃತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ದಿನಾಂಕ ೦೫ ರಂದು ಅಹೋರಾತ್ರಿ ಶಿವಭಜನೆ ಮತ್ತು ೦೬ ಮಧ್ಯಾನ್ಹ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ದೇವಸ್ಥಾನದ ಭಜನಾ ಮಂಡಳಿ ಮತ್ತು ಸ್ಥಳಿಯ ಕಲಾವಿದರಿಂದ ಭಜನಾ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
೦೬ ರಂದು ಬೆಳಿಗ್ಗೆ ೦೭ ಗಂಟೆಗೆ ಪಂಚಮುಖಿ ಹನುಮಾನ ದೇವರಿಗೆ ಪೂಜಾ ಅಲಂಕಾರ ಸಲ್ಲಿಸಿ ಮಹಿಳೆಯರಿಂದ ಅಂಜನಿಪುತ್ರ ಹನುಮಾನ ದೇವರ ತೊಟ್ಟಿಲು ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ನಂತರ ಮಧ್ಯಾನ್ಹ ದೇವಸ್ಥಾನದ ಸರ್ವ ಯುವಕರು ಸೇರಿ ಬಡಾವಣೆಯ ಮತ್ತು ನಗರದ ಸಾವಿರಾರು ಜನರು ಆಗಮಿಸಿ ಪ್ರಸಾದವನ್ನು ಸ್ವೀಕರಿಸಿ ಹನುಮಾನ ದೇವರ ಕೃಪೆಗೆ ಪಾತ್ರರಾದರು.
ಮಹಾತ್ಮಾ ಗಾಂಧಿ ವೃತ್ತದ ಶ್ರೀ ಆಂಜನೇಯ ದೇವಸ್ಥಾನದಲ್ಲಿಯೂ ಸಹಿತ ಪ್ರದಾನ ಅರ್ಚಕರು ಹಾಗೂ ಖ್ಯಾತ ಜ್ಯೋತಿಷ್ಯರಾದ ಪವನ ಆಚಾರರವರ ನೇತೃತ್ವದಲ್ಲಿ ಹನುಮಾನ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು.
ನೂತನವಾಗಿ ಪ್ರತಿಷ್ಠಾಪನೆಗೊಳ್ಳುತ್ತಿರುವ ಶಿಲಾಮೂರ್ತಿಗಳಿಗೆ ಮಹಾರುದ್ರಾಭಿಷೇಕ ಅಲಂಕಾರವನ್ನು ಸಲ್ಲಿಸಿ ಆಚರಣೆ ಮಾಡಲಾಗಿತ್ತು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹನುಮಾನ ಜಯಂತಿಯನ್ನು ನಮ್ಮ ನಾಡು ದೇಶವಲ್ಲದೇ ವಿದೇಶಗಳಲ್ಲಿಯೂ ಸಹಿತ ಆಚರಣೆ ಮಾಡುವುದು ನಾವು ಕಾಣುತ್ತೇವೆ ಯಾಕೆಂದರೆ ಹನುಮಾನ ದೇವರಿಗೆ ನೂರೆಂಟು ನಾಮಾಂಕಿತದಲ್ಲಿ ಕರೆಯಲಾಗುತ್ತೆ. ಹನುಮಂತನ ಆಶೀರ್ವಾದದಿಂದ ಮನುಕುಲದ ಬದುಕು ಸದಾ ಜಯದ ಆದಿಯಲ್ಲಿರುತ್ತಾನೆ ಹಾಗೆ ಹನುಮಾನ ದೇವರನ್ನು ನಂಬಿದವರಿಗೆ ಭಯ ಸುಳಿಯೇ ಸುಳಿಯುವುದಿಲ್ಲ. ಅಂತ ಒಂದು ಶಕ್ತಿಶಾಲಿ ಭಗವಂತ ಆಂಜನೆಯ್ಯನಾಗಿದ್ದಾನೆ.
ಅಮೇರಿಕದ ಅಧ್ಯಕ್ಷರು ಹಾಗೂ ಜಗತ್ತಿನ ಹಿರಿಯ ಉದ್ಯಮಿ ಹ್ಯಾಪಲ್ ಮೊಬೆಲ್ ಸಂಸ್ಥೆಯ ಎಂ.ಡಿ. ಅವರೂ ಸಹಿತ ಮಾರುತಿ ದೇವರನ್ನು ಪೂಜಿಸಿಯೇ ತಮ್ಮ ನಿತ್ಯದ ಕಾರ್ಯದಲ್ಲಿ ತೊಡಗುತ್ತಾರೆ ಅಂತಾ ಒಂದು ಶಕ್ತಿಶಾಲಿ ವಾಯುಪುತ್ರರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಾರ್ಡ್ ನಂ. ೨೨ರ ನಗರಸಭೆ ಸದಸ್ಯ ಜಿಂದಪ್ಪ, ದೇವಸ್ಥಾನದ ಸೇವಾ ಸಮಿತಿಯ ಸರ್ವ ಯುವಕರು, ಸರ್ವ ಸದ್ಭಕ್ತರು ಬಡಾವಣೆಯ ಹಿರಿಯರು, ಮುಖಂಡರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.