ಮಡ್ಡಿಕೆರೆ ಗೋಪಾಲ್‍ರಿಂದ ನಾಮಪತ್ರ ಸಲ್ಲಿಕೆ

ಮೈಸೂರು. ಏ.5:- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮಡ್ಡಿಕೆರೆ ಗೋಪಾಲ್ ಅವರು ಇಂದು ನಗರದ ಮಿನಿ ವಿಧಾನ ಸೌಧದಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯ ವತಿಯಿಂದ ಶುಭ ಹಾರೈಸಲಾಯಿತು.
ಕ.ಸಾ.ಪ.ಅಧ್ಯಕ್ಷರಾದ ಡಾ.ವೈ.ಡಿ. ರಾಜಣ್ಣ, ಕ.ಸಾ.ಪ.ನಿಕಟಪೂರ್ವ ಅಧ್ಯಕ್ಷ ರಾದ,ಎಂ.ಚಂದ್ರಶೇಖರ್, ರಾಜಶೇಖರ ಕದಂಬ, ಸಮಿತಿ ಅಧ್ಯಕ್ಷರಾದ ಜಾಕೀರ್ ಹುಸೇನ್, ಪ್ರಧಾನ ರಾಜ್ಯ ಸಂಚಾಲಕರಾದ ಡೈರಿ ವೆಂಕಟೇಶ್, ಎಂ.ಜಿ.ಆರ್.ಅರಸ್, ಡಾ.ಕೆ.ರಘುರಾಮ್ ವಾಜಪೇಯಿ, ಕೃಷ್ಣೇಗೌಡ, ವಿದ್ಯಾಸಾಗರ್ ಕದಂಬ ಮತ್ತಿತರರು ಭಾಗಿಯಾಗಿದ್ದರು.